ಸೀತಾವಲ್ಲಭ, ಗಾಂಧಾರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ
ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ ಕಿರುತೆರೆ ನಟಿ ಕಾವ್ಯ ಗೌಡ
ನಟನೆಯಿಂದ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ ಜೊತೆ ನಟಿ ಮಸ್ತ್ ಎಂಜಾಯ್
ಕನ್ನಡ ಕಿರುತೆರೆ ನಟಿ ಕಾವ್ಯ ಗೌಡ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಮುದ್ದಾದ ಮಗಳ ಜೊತೆಯಲ್ಲಿ ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಮಗಳು ಸಿಯಾ ಸೋಮಶೇಖರ್ಗೆ ಚೆಂದವಾಗಿ ಸಿಂಗಾರ ಮಾಡಿ, ಪುಟಾಣಿಗೆ ಉಡುಪು ಹಾಕಿಸಿ ಮುದ್ದಾಡಿದ್ದಾರೆ.
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ದಿನವೇ ಮಗಳ ಮುಖ ರಿವೀಲ್ ಮಾಡಿದ ನಟಿ ಕಾವ್ಯ ಗೌಡ; ಕ್ಯೂಟ್ ಬೇಬಿ ಎಂದ ಫ್ಯಾನ್ಸ್
ಸೀತಾವಲ್ಲಭ, ಗಾಂಧಾರಿ, ರಾಧಾರಮಣ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಕೊಂಡ ನಟಿ ಎಂದರೆ ಅದು ಕಾವ್ಯಗೌಡ. ಅಭಿನಯದಿಂದ ಬ್ರೇಕ್ ತೆಗೆದುಕೊಂಡಿರುವ ನಟಿ ಮುದ್ದಾದ ಮಗಳ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ.
View this post on Instagram
ಜೊತೆಗೆ ಫ್ಯಾಷನ್ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ ನಟಿ ಕಾವ್ಯ ಗೌಡ. ನಿನ್ನೆ ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ನಟಿ ಕಾವ್ಯ ಗೌಡ ಮಗಳು ಸಿಯಾ ಮುದ್ದಾಗಿ ಕಾಣಿಸಿಕೊಂಡಿದೆ. ಅಪ್ಪ ಹಾಗೂ ಅಮ್ಮನ ಜೊತೆಗೆ ಫೋಟೋಗೆ ಪೋಸ್ ಕೊಟ್ಟ ವಿಡಿಯೋವನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ.
ಜನವರಿ 22ರಂದು ಮುದ್ದಾದ ಹೆಣ್ಣು ಮಗುವಿಗೆ ನಟಿ ಕಾವ್ಯ ಗೌಡ ಜನ್ಮ ನೀಡಿದರು. ರಾಮಮಂದಿರ ಪ್ರತಿಷ್ಠಾಪನೆ ದಿನ ಮಗುವನ್ನ ವೆಲ್ಕಮ್ ಮಾಡಿ, ಸಂಭ್ರಮದಿಂದ ಮಗಳಿಗೆ ಪ್ರೀತಿಯಿಂದ ಸಿಯಾ ಎಂದು ಕರೆಯುತ್ತಿದ್ದಾರೆ. ಸಿಯಾ ಅಂದರೆ ಸೀತೆ ಎಂದರ್ಥ. ಜೊತೆಗೆ ಸುಂದರವಾದ ಹೂವು ಎಂದು ಅರ್ಥ ಕೂಡ ಇದೆ. ಕಿರುತೆರೆ ನಟಿ ಕಾವ್ಯ ಗೌಡ ಅವರು ಮಗುವಿಗೆ ಜನ್ಮ ನೀಡಿ 6 ತಿಂಗಳ ನಂತರ ವರಮಹಾಲಕ್ಷ್ಮಿ ಹಬ್ಬದಂದು ಮಗಳ ಮುಖವನ್ನು ರಿವೀಲ್ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ