newsfirstkannada.com

×

ನಟಿ ಕಾವ್ಯ ಗೌಡ ಮನೆಯಲ್ಲಿ ಸಂಭ್ರಮ; ವಿಶೇಷ ದಿನ ಹುಟ್ಟಿದ ಮಗಳಿಗೆ ಇಟ್ಟ ಹೆಸರೇನು ಗೊತ್ತಾ?

Share :

Published October 20, 2024 at 6:50am

Update October 20, 2024 at 6:45am

    ತಮ್ಮ ಅದ್ಭುತ ನಟನೆ ಮೂಲಕ ಸಾಕಷ್ಟು ಅಭಿಮಾನಿಗಳು ಗಳಿಸಿಕೊಂಡ ನಟಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ಮಗಳ ಫೋಟೋಸ್

    ಶುಭ ವಿವಾಹ, ಗಾಂಧಾರಿ, ರಾಧಾ ರಮಣ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ

ಸೀತಾವಲ್ಲಭ, ಗಾಂಧಾರಿ, ರಾಧಾರಮಣ ಸೇರಿದಂತೆ ಹಲವು ಸೂಪರ್​ ಹಿಟ್​ ಧಾರಾವಾಹಿಗಳ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಕೊಂಡ ನಟಿ ಎಂದರೆ ಅದು ಕಾವ್ಯಗೌಡ. ಅಭಿನಯದಿಂದ ಬ್ರೇಕ್ ತೆಗೆದುಕೊಂಡಿರುವ ನಟಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ಫ್ಯಾಷನ್​ ಕ್ಷೇತ್ರದಲ್ಲಿಯು ತೊಡಗಿಸಿಕೊಂಡು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅದರಲ್ಲೂ ನಟಿ ಕಾವ್ಯ ಅವರು ತಮ್ಮ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: BBK11: ಜಗದೀಶ್ ಎಲಿಮಿನೇಟ್‌.. ಬಿಗ್ ಬಾಸ್ ಮೇಲೆ ಕಂಪ್ಲೇಂಟ್‌; ಕಿಚ್ಚ ಸುದೀಪ್ ಖಡಕ್ ಮಾತು; ಏನಂದ್ರು?

ಇದೀಗ ನಟಿ ಕಾವ್ಯ ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. 2021 ಡಿಸೆಂಬರ್ 1 ರಂದು ನಟಿ ಕಾವ್ಯ ಗೌಡ ಅವರು ಉದ್ಯಮಿ ಸೋಮಶೇಖರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು, ಮದುವೆಯ ಬಳಿಕ ನಟನೆಯಿಂದ ಕಾವ್ಯ ಗೌಡ ದೂರ ಉಳಿದುಕೊಂಡಿದ್ದ ಕಾವ್ಯಾ ತಮ್ಮ ಮುದ್ದಾದ ಮಗಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ.

ಅಲ್ಲದೇ ಮುದ್ದಾದ ಮಗಳ ಫೋಟೋವನ್ನು ಆಗಾಗ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ​​ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ನಟಿ ಕಾವ್ಯಾ ಗೌಡ ದಂಪತಿ ತಮ್ಮ ಚೊಚ್ಚಲ ಮಗಳಿಗೆ ಹೆಸರನ್ನು ಇಟ್ಟಿದ್ದಾರೆ. ಕಳೆದ ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಜರುಗಿತು. ಅಂದು ನಟಿ ಕಾವ್ಯಾ ಗೌಡ ಅವರು ಮುದ್ದಾದ ಮಗಳಿಗೆ ಜನ್ಮ ನೀಡಿದ್ದರು. ಈಗ ಅವರು ಮುದ್ದಾದ ಮಗಳ ನಾಮಕರಣ ಮಾಡಿದ್ದಾರೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ದಿನವೇ ಮಗಳ ಮುಖ ರಿವೀಲ್​ ಮಾಡಿದ ನಟಿ ಕಾವ್ಯ ಗೌಡ; ಕ್ಯೂಟ್ ಬೇಬಿ ಎಂದ ಫ್ಯಾನ್ಸ್

ಮಗಳು ಹುಟ್ಟಿ ಆರು ತಿಂಗಳಾದ ಬಳಿಕ ಅವರು ಸೋಶಿಯಲ್ ಮೀಡಿಯಾದಲ್ಲಿ ಮಗಳ ಫೋಟೋ ಹಂಚಿಕೊಂಡಿದ್ದರು. ಅಲ್ಲದೇ ವರಮಹಾಲಕ್ಷ್ಮೀ ಹಬ್ಬದಂದು ಮಗಳ ವಿಶೇಷವಾದ ಫೋಟೋಶೂಟ್ ಮಾಡಿಸಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಈಗ ಅವರು ಮಗಳ ನಾಮಕರಣದ ಫೋಟೋ ಹಂಚಿಕೊಂಡಿದ್ದಾರೆ.ಜೊತೆಗೆ ನಟಿ ಕಾವ್ಯಾ ಗೌಡ ದಂಪತಿ ಮಗಳಿಗೆ ಸಿಯಾ ಎಂದು ಹೆಸರನ್ನು ಇಟ್ಟಿದ್ದಾರೆ. ಇನ್ನೂ ಸಿಯಾ ಪದದ ಅರ್ಥ ಸೀತೆ ಎಂದರ್ಥ. ಜೊತೆಗೆ ಸುಂದರವಾದ ಹೂವು ಎಂದು ಅರ್ಥ ಕೂಡ ಇದೆ. ನಾಮಕರಣದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸಿಯಾಳ ಮುದ್ದಾದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟಿ ಕಾವ್ಯ ಗೌಡ ಮನೆಯಲ್ಲಿ ಸಂಭ್ರಮ; ವಿಶೇಷ ದಿನ ಹುಟ್ಟಿದ ಮಗಳಿಗೆ ಇಟ್ಟ ಹೆಸರೇನು ಗೊತ್ತಾ?

https://newsfirstlive.com/wp-content/uploads/2024/10/kavya1.jpg

Load More