ಪುಟ್ಟಕ್ಕನ ಮೆಸ್ಲ್ಲಿ ಅಗ್ನಿ ಅವಘಡ, ಬೆಂಕಿ ಹಚ್ಚಿದವಱರು?
ಸುಂದರ ಸಂಸಾರದಲ್ಲಿ ಮೂಡಿತು ದೊಡ್ಡದಾದ ಸಮಸ್ಯೆ
ಮೆಸ್ಗೆ ಬೆಂಕಿ, ಪುಟ್ಟಕ್ಕನ ಮುಂದಿನ ದಾರಿ ಏನೇನು..?
ಕಿರುತೆರೆಯಲ್ಲಿ ಬ್ಲಾಕ್ ಬಾಸ್ಟರ್ ಹಿಟ್ ಆಗಿರೋ ಸೀರಿಯಲ್ ಅಂದ್ರೆ, ಅದು ಪುಟ್ಟಕ್ಕನ ಮಕ್ಕಳು. ಕಳೆದ 2 ವರ್ಷದಿಂದ ಟಾಪ್-1 ಸ್ಥಾನ ಯಾರಿಗೂ ಬಿಟ್ಟುಕೊಡದೆ ಇಂದಿಗೂ ಡಬಲ್ ಡಿಜಿಟ್ ಟಿವಿಆರ್ ಪಡೆದುಕೊಂಡು ಎಲ್ಲರ ನೆಚ್ಚಿನ ಸೀರಿಯಲ್ ಆಗಿದೆ. ಸದ್ಯ ಕತೆಯಲ್ಲಿ ಪುಟ್ಟಕ್ಕ ಅಂದುಕೊಂಡಂತೆ 2 ಮಕ್ಕಳನ್ನ ತನ್ನ ಮೆಸ್ನಿಂದ ಬರೋ ಕಾಸನ್ನ ಕೂಡಿಟ್ಟು ಮದುವೆ ಮಾಡಿದ್ದಾಳೆ. ಸದ್ಯ ಎಲ್ಲ ಸುಖಾಂತ್ಯ ಕಾಣ್ತು ಅನ್ನೋದ್ರೊಳಗೆ ಪುಟ್ಟಕನಿಗೆ ಮತ್ತೊಂದು ಗಂಡಾಂತರ ಎದುರಾಗಿದೆ.
ತನ್ನ ಇಡೀ ಬದುಕು ಸಾಗಿಸಲು ಬಂಡಿಯಾದ ಪುಟ್ಟಕ್ಕನ ಮೆಸ್ಗೆ ಬೆಂಕಿ ಬಿದ್ದಿದೆ. ಈ ವಿಷಯ ಪುಟ್ಟಕ್ಕನಿಗೂ ಗೊತ್ತಾಗಿದೆ. ಈ ವಿಷಯವಂತೂ ನಿಜಕ್ಕೂ ಶಾಕಿಂಗ್ ಅಂದ್ರೆ, ತಪ್ಪಾಗೋಲ್ಲ. ಅಷ್ಟಕ್ಕೂ ಮೆಸ್ಗೆ ಈ ರೀತಿ ಹಾನಿ ಮಾಡಿದವರು ಯಾರು? ಈ ಕೆಟ್ಟ ಕೆಲಸ ಹಿಂದೆ ಕುಮ್ಮುಕ್ಕು ಕೊಟ್ಟಿರೋರಾದ್ರು ಯಾರು?
ಕಂಠಿಯನ್ನ ಮದುವೆಯಾಗಿ ಸ್ನೇಹಾ ಮನೆಗೆ ಬಂದಿರೋದು ಬಡ್ಡಿ ಬಂಗಾರಮ್ಮನಿಗೆ ಸುತರಾಂ ಇಷ್ಟವಿಲ್ಲ. ಅದೆಷ್ಟೇ ಹರಸಾಹಸ ಪಟ್ರು ಸ್ನೇಹಾ ಬಂಗಾರಮ್ಮನ ಮಾತಿಗೆ ಜಗ್ತಿಲ್ಲ. ಒಂದು ವೇಳೆ ಪುಟ್ಟಕ್ಕನ ಮೆಸ್ಗೆ ಬೆಂಕಿ ಬಿದ್ದಿರೋದಕ್ಕೆ ಬಂಗಾರಮ್ಮ ಕಾರಣನಾ ಅನ್ನೋದು ವೀಕ್ಷಕರ ಊಹೆ ಆಗಿದೆ.
ಜೀವಕ್ಕೆ ಜೀವದಂತೆ ಇದ್ದ ಮೆಸ್ ಈಗ ಬೆಂಕಿಯಲ್ಲಿ ಬೂದಿಯಾಗೋ ಸ್ಥಿತಿಗೆ ಬಂದಿದೆ. ಇನ್ನೂ ಇಂತಹ ದೊಡ್ಡ ಗಂಡಾಂತರದಿಂದ ಕಂಠಿ ಪುಟ್ಟಕ್ಕಳನ್ನ ಕಾಪಾಡುತ್ತಾನಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಇನ್ನು ಮುಂಬರುವ ಎಪಿಸೋಡ್ಗಳಂತೂ ಊಹೆಗೆ ನಿಲುಕದಂತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ