newsfirstkannada.com

ಲಕ್ಷ್ಮೀಬಾರಮ್ಮನಾ.. ಭಾಗ್ಯಲಕ್ಷ್ಮೀನಾ​; ಈ ವಾರ​ ನಂಬರ್​​​​ 1 ಪಟ್ಟ ಪಡೆದುಕೊಂಡ ಸೀರಿಯಲ್​ ಯಾವುದು?

Share :

17-06-2023

    ಈ ವಾರ ಯಾವ ಸೀರಿಯಲ್​ಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಗೊತ್ತಾ?

    ಯಾವ ಸೀರಿಯಲ್​​​​ ಅನ್ನ ಅಭಿಮಾನಿಗಳು ಹೆಚ್ಚು ಮೆಚ್ಚಿಕೊಂಡಿದ್ದಾರೆ

    ಕಿರುತೆರೆಯ ಟಾಪ್​ ಸೀರಿಯಲ್​ಗಳು ಪಡೆದುಕೊಂಡ ಟಿಆರ್​ಪಿ ಎಷ್ಟು

ಟಾಪ್​ ಸೀರಿಯಲ್​ಗಳ ಲಿಸ್ಟ್​ ಸಖತ್​ ಇಂಟ್ರಸ್ಟಿಂಗ್​ ಆಗಿದೆ. ಕಳೆದ ಬಾರಿ ಡಲ್​ ಆಗಿದ್ದ ಕತೆಗಳು ಈ ಬಾರಿ ಫಾರ್ಮ್​ಗೆ ಮರಳಿವೆ. ಹೊಸದಾಗಿ ಲಾಂಚ್​ ಆದ ಧಾರಾವಾಹಿಗಳು ಹಂತ ಹಂತವಾಗಿ ಸುಧಾರಿಸಿಕೊಳ್ತಿವೆ. ಅಕ್ಕ-ತಗಿಯ ಕತೆ ಲಕ್ಷ್ಮೀ ಬಾರಮ್ಮ ಹಾಗೂ ಭಾಗ್ಯಲಕ್ಷ್ಮೀ ಮೊದಲಿನಿಂದಲೂ ಟಫ್​ ಫೈಟ್​ ಕೊಡುತ್ತಾ ಬರುತ್ತಿದೆ. ಅರ್ಬನ್​ನಲ್ಲಿ ಅಕ್ಕ ರಾರಾಜಿಸುತ್ತಿದ್ದರೆ, ರೂರಲ್​ನಲ್ಲಿ ತಂಗಿ ಹವಾ ಜೋರಾಗಿದೆ. ಒಟ್ಟಾರೆಯಾಗಿ ಟಿಆರ್​ಪಿನಲ್ಲಿ ಲಕ್ಷ್ಮೀಬಾರಮ್ಮ 6 ರೇಟಿಂಗ್​ ಪಡೆದುಕೊಂಡಿದ್ರೆ, ಭಾಗ್ಯಲಕ್ಷ್ಮೀಗೆ 5.7 ಬಂದಿದ್ದು, ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನವನ್ನ ಹಂಚಿಕೊಂಡಿವೆ.

ಇನ್ನು, ಜ್ಹೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಎರಡು ಸೀರಿಯಲ್​ಗಳು ಮತ್ತೆ ಫಾರ್ಮ್​ಗೆ ಮರಳಿವೆ. ನಟಿ ಸುಧಾರಾಣಿ ಅವರು ಲೀಡ್​ನಲ್ಲಿರುವ ಶ್ರೀರಸ್ತು ಶುಭಮಸ್ತು 6.4 ಟಿವಿಆರ್​ ಮೂಲಕ ಮೂರನೇ ಸ್ಥಾನದಲ್ಲಿದೆ. ಸತ್ಯ 6 ರೇಟಿಂಗ್​ನಿಂದ ನಾಲ್ಕನೇ ಸ್ಥಾನದಲ್ಲಿದೆ. ಕತೆಯನ್ನ ವೀಕ್ಷಕರು ತುಂಬಾ ಇಷ್ಟಪಡ್ತಿದ್ದು, ಅದಕ್ಕೆ ಈ ರೇಟಿಂಗ್​ಯೇ ಸಾಕ್ಷಿ. ಇನ್ನೂ ಅಮೃತಧಾರೆ ನಿಧಾನವಾಗಿ ಸುಧಾರಿಸಿಕೊಳ್ತಿದ್ದು, 5.2 ರೇಟಿಂಗ್​ ಮೂಲಕ 6ನೇ ಸ್ಥಾನದಲ್ಲಿದೆ.

ಈಗ ರಿಯಾಲಿಟಿ ಶೋಗಳಿಗೆ ಬರೋದಾದ್ರೆ ಡಿಕೆಡಿ 7.1 ರೇಟಿಂಗ್​ ಮೂಲಕ ನಂಬರ್​ ಒನ್​ ಸ್ಥಾನ ಗಿಟ್ಟಿಸಿಕೊಂಡಿದೆ. ಗಿಚ್ಚಿ ಗಿಲಿಗಿಲಿ 4.2 ಟಿವಿಆರ್ ಮೂಲಕ ಎರಡನೇ ಸ್ಥಾನದಲ್ಲಿದೆ. ಮಕ್ಕಳ ಕಲರವ ಅಂದ್ರೆ ಛೋಟಾ ಚಾಂಪಿಯನ್​ಗೆ 3.4 ಟಿವಿಆರ್​ ದೊರೆತಿದೆ. ಒಟ್ಟಿನಲ್ಲಿ ಸೀರಿಯಲ್​ಗಳ ಗ್ರಾಫ್ ಆಗಾಗ್ಗೆ ಏರುಪೇರು ಆಗ್ತಿರೋದು ಮಾತ್ರ ಸುಳ್ಳಲ್ಲ. ವೀಕ್ಷಕರು ಬಯಸುವಂತಹ ರುಚಿಕರ ಧಾರಾವಾಹಿಯನ್ನು ನೀಡಲು ಮತ್ತಷ್ಟು ತಂಡಗಳು ಶ್ರಮಿಸುತ್ತಿವೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಲಕ್ಷ್ಮೀಬಾರಮ್ಮನಾ.. ಭಾಗ್ಯಲಕ್ಷ್ಮೀನಾ​; ಈ ವಾರ​ ನಂಬರ್​​​​ 1 ಪಟ್ಟ ಪಡೆದುಕೊಂಡ ಸೀರಿಯಲ್​ ಯಾವುದು?

https://newsfirstlive.com/wp-content/uploads/2023/06/bhagya-1-1.jpg

Load More