ಈ ವಾರ ಯಾವ ಸೀರಿಯಲ್ಗೆ ಟಿಆರ್ಪಿಯಲ್ಲಿ ಮೊದಲ ಸ್ಥಾನ?
ವೀಕ್ಷಕರು ಈ ವಾರ ಹೆಚ್ಚು ನೋಡಿದ ಧಾರಾವಾಹಿ ಇದೇ ನೋಡಿ!
ನಿತ್ಯ ಕನ್ನಡಿಗರ ಮನಗೆದ್ದ ಕಿರುತೆರೆಯ ಟಾಪ್ ಸೀರಿಯಲ್ ಇವು!
ಕನ್ನಡ ಕಿರುತೆರೆಯ ಸೀರಿಯಲ್ಗಳ ಲೆಕ್ಕಾಚಾರ ಹಾಗೂ ಹಗ್ಗಜಗ್ಗಾಟ ವಾರದಿಂದ ವಾರಕ್ಕೆ ಏರು ಪೇರು ಆಗುತ್ತಲೇ ಇರುತ್ತದೆ. ಯಾವ ಧಾರಾವಾಹಿಗಳನ್ನು ವೀಕ್ಷಕರು ನೋಡಿ ಹಾರೈಸಿದ್ದಾರೆ ಎಂದು ಟಿಆರ್ಪಿ ಮೂಲಕ ತಿಳಿಯಲಿದೆ. ಪ್ರತಿ ದಿನ ಹೊಸತನ ನೀಡಬೇಕು. ಮನರಂಜನೆಯ ಜೊತೆಗೆ ವಿಭಿನ್ನತೆಯನ್ನ ಅಳವಡಿಸಿಕೊಳ್ಳಬೇಕು. ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಬೇಕು ಅನ್ನೋದು ಪ್ರತಿ ಸೀರಿಯಲ್ ತಂಡದ ಕನಸು. ವೀಕ್ಷಕರ ಅಭಿಪ್ರಾಯ ತಿಳಿದುಕೊಳ್ಳಲು ಸೀರಿಯಲ್ ತಂಡದವರು ಟಿಆರ್ಪಿಗಾಗಿ ಕಾಯುತ್ತಾ ಇರುತ್ತಾರೆ.
ಹಿಗ್ಗದೆ, ಕುಗ್ಗದೆ ಪ್ರತಿವಾರ ಡಬಲ್ ಡಿಜಿಟ್ 12.1 ಟಿವಿಆರ್ ರೇಟಿಂಗ್ ಪಡೆದುಕೊಂಡು ಮುನ್ನುಗುತ್ತಾ ಮೊದಲನೇ ಸ್ಥಾನದಲ್ಲಿ ಇರೋದು ಪುಟ್ಟಕ್ಕನ ಮಕ್ಕಳು. ಎರಡನೇ ಸ್ಥಾನದಲ್ಲಿ ಗಟ್ಟಿಮೇಳ 9.5 ಟಿವಿಆರ್ ಪಡೆದುಕೊಂಡಿದೆ. ವಾರದಿಂದ ವಾರಕ್ಕೆ ಸೀತಾರಾಮ ತಮ್ಮ ಜನಪ್ರಿಯತೆಯನ್ನ ಹೆಚ್ಚಿಸಿಕೊಳ್ಳುತ್ತಾ ಇದ್ದಾರೆ. ಈ ವಾರ 9.4 ಟಿವಿಆರ್ ಪಡೆದುಕೊಳ್ಳೋ ಮೂರನೇ ಸ್ಥಾನಕ್ಕೆ ಏರಿರೋದು ವಿಶೇಷ. ನಾಲ್ಕನೇ ಸ್ಥಾನದಲ್ಲಿ ಅಮೃತಧಾರೆ ತನ್ನ ಸ್ಥಾನವನ್ನ ಅಲಂಕರಿಸಿದೆ. ಐದನೇ ಸ್ಥಾನದಲ್ಲಿ ಸತ್ಯ 7.4 ಟಿವಿಆರ್ ಪಡೆಯುವ ಮೂಲಕ ಶ್ರೀರಸ್ತು ಶುಭಮಸ್ತು ಧಾರಾವಾಹಿಯನ್ನ ಕೆಳ ತಳ್ಳಿದೆ.
ಮೊದಲಿಗೆ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ತುಂಬಾನೆ ಟಿಆರ್ಪಿ ಹಾಗೂ ಟಾಕ್ಸ್ನಲ್ಲಿ ಮುಂದೆ ಇತ್ತು. ಭಾಗ್ಯ, ಲಕ್ಷ್ಮೀ ಇಬ್ಬರು ಟಾಪ್ ಐದರಲ್ಲಿ ಒಬ್ಬರಾಗಿ ಇರುತ್ತಿದ್ದರು. ಆದರೆ ಈ ಎರಡು ಧಾರಾವಾಹಿಗಳು ಟಾಪ್ ಐದರಿಂದ ಇಳಿದು ಈಗ ನೆಲ ಕಚ್ಚಿವೆ. ಟಿಆರ್ಪಿ ಕೂಡ ಮುಂಚೆಯಷ್ಟು ಪ್ರಮಾಣದಲ್ಲಿ ಬರುತ್ತಿಲ್ಲ. ಲಕ್ಷ್ಮೀಗೆ 6.3 ಟಿವಿಆರ್ ಸಿಕ್ಕಿದ್ರೆ, ಭಾಗ್ಯಗೆ 5.5 ಟಿವಿಆರ್ ದೊರೆಕಿದೆ. ಇದು ಕಲರ್ಸ್ಗೆ ಕಹಿ ವಿಚಾರ ಆಗಿದೆ. ರಾಮಾಚಾರಿ ಇತ್ತೀಚಿನ ವಾರಗಳಲ್ಲಿ ಸಿಹಿ ಸುದ್ದಿ ನೀಡುತ್ತಿದೆ. ಹೌದು ಟಾಪ್ ಐದರಲ್ಲಿ ಇಲ್ಲ ಅಂದರು, ತನ್ನ ಮಾರ್ಕೆಟ್ನ ಹೆಚ್ಚಿಸಿಕೊಂಡಿದೆ. ಈ ವಾರದಲ್ಲಿ 5.4 ಟಿವಿಆರ್ ದೊರೆಕಿದೆ.
ಒಟ್ಟಿನಲ್ಲಿ ವೀಕ್ಷಕರು ಜೀ ಕತೆಗಳನ್ನ ಬಿಡದೆ ಮೆಚ್ಚಿಕೊಂಡು ನೋಡುತ್ತಿದ್ದಾರೆ ಅನ್ನೋದು ಈ ಟಿಆರ್ಪಿ ರಿಸಲ್ಟ್ ಮೂಲಕ ಗೊತ್ತಾಗುತ್ತಿದೆ. ನಿಮ್ಮ ನೆಚ್ಚಿನ ಧಾರಾವಾಹಿಗಳ ಈ ವಾರದ ರಿಸಲ್ಟ್ ಹೀಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ