newsfirstkannada.com

ಈ ವಾರ ಕನ್ನಡಿಗರ ಮನಗೆದ್ದ ಸೀರಿಯಲ್​​ ಯಾವುದು..? ಇಲ್ಲಿದೆ ಟಿಆರ್​ಪಿ!

Share :

Published July 21, 2023 at 5:31pm

    ಈ ವಾರ ಯಾವ ಸೀರಿಯಲ್​ಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ?

    ವೀಕ್ಷಕರು ಈ ವಾರ ಹೆಚ್ಚು ನೋಡಿದ ಧಾರಾವಾಹಿ ಇದೇ ನೋಡಿ!

    ನಿತ್ಯ ಕನ್ನಡಿಗರ ಮನಗೆದ್ದ ಕಿರುತೆರೆಯ ಟಾಪ್​ ಸೀರಿಯಲ್​ ಇವು

ಕನ್ನಡ ಕಿರುತೆರೆಯ ಸೀರಿಯಲ್​ಗಳ ಲೆಕ್ಕಾಚಾರ ಹಾಗೂ ಹಗ್ಗಜಗ್ಗಾಟ ವಾರದಿಂದ ವಾರಕ್ಕೆ ಏರು ಪೇರು ಆಗುತ್ತಾನೆ ಇರುತ್ತದೆ. ಯಾವ ಧಾರಾವಾಹಿಗಳನ್ನು ವೀಕ್ಷಕರು ನೋಡಿ ಹಾರೈಸಿದ್ದಾರೆ ಎಂದು ಟಿಆರ್​​ಪಿ ಮೂಲಕ ತಿಳಿಯಲಿದೆ. ಪ್ರತಿ ದಿನ ಹೊಸತನ ನೀಡಬೇಕು. ಮನರಂಜನೆಯ ಜೊತೆಗೆ ವಿಭಿನ್ನತೆಯನ್ನ ಅಳವಡಿಸಿಕೊಳ್ಳಬೇಕು. ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಬೇಕು ಅನ್ನೋದು ಪ್ರತಿ ಸೀರಿಯಲ್​ ತಂಡದ ಕನಸು. ವೀಕ್ಷಕರ ಅಭಿಪ್ರಾಯ ತಿಳಿದುಕೊಳ್ಳಲು ಟಿಆರ್​ಪಿಗಾಗಿ ಕಾಯುತ್ತಾ ಇರುತ್ತಾರೆ.

ಸದ್ಯ ಈ ವಾರ ಎಂದಿನಂತೆ ಪುಟ್ಟಕ್ಕನ ಮಕ್ಕಳು 11.3 ಭರ್ಜರಿ ರೇಟಿಂಗ್​ ಮೂಲಕ ನಂಬರ್​ ಒನ್​ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಗಟ್ಟಿಮೇಳ 8.3 ಟಿವಿಆರ್​, ಮೂರನೇ ಸ್ಥಾನದಲ್ಲಿ ಅಮೃತಧಾರೆ 7.3 ಟಿವಿಆರ್​, ನಾಲ್ಕನೇ ಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು 6.3 ಟಿವಿಆರ್​, ಐದನೇ ಸ್ಥಾನದಲ್ಲಿ ಸತ್ಯ 5.9 ಟಿವಿಆರ್​ ಮೂಲಕ ರಾರಾಜಿಸುತ್ತಿವೆ.

ಇನ್ನು, ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮಗೆ 5.6 ಟಿವಿಆರ್​ ಮೂಲಕ ಎಳನೇ ಸ್ಥಾನದಲ್ಲಿದೆ. ಭಾಗ್ಯಲಕ್ಷ್ಮೀಗೆ 5.3 ಟಿವಿಆರ್​ ಪಡೆದಿದ್ದು, ಒಂಬತ್ತನೇ ಸ್ಥಾನದಲ್ಲಿದೆ. ಮಧ್ಯಾಹ್ನದ ಸ್ಲಾಟ್​ನಲ್ಲಿ ಚೇತರಿಕೆ ಕಂಡಿದ್ದು, ಗೃಹಪ್ರವೇಶ 1.5, ಗಂಡ ಹೆಂಡತಿ 1.3 ಹಾಗೂ ಶಾಂತಂ ಪಾಪಂ 1.5 ಟಿವಿಆರ್​ ಪಡೆದುಕೊಂಡಿವೆ. ರಿಯಾಲಿಟಿ ಶೋಗಳಲ್ಲಿ ಡಿಕೆಡಿ ನಂಬರ್​ ಒನ್​ ಸ್ಥಾನದಲ್ಲಿದೆ. ಡ್ಯಾನ್ಸ್ ​ಕಿಂಗ್​ ಪ್ರಭುದೇವ ಎಪಿಸೋಡ್​ಗೆ ಜಬರ್ದಸ್ತ್​​ ರೆಸ್ಪಾನ್ಸ್ ಬಂದಿದ್ದು, 9.3 ಟಿವಿಆರ್ ಪಡೆದುಕೊಂಡಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಈ ವಾರ ಕನ್ನಡಿಗರ ಮನಗೆದ್ದ ಸೀರಿಯಲ್​​ ಯಾವುದು..? ಇಲ್ಲಿದೆ ಟಿಆರ್​ಪಿ!

https://newsfirstlive.com/wp-content/uploads/2023/07/serial.jpg

Load More