newsfirstkannada.com

ಕಂಠಿ, ಸ್ನೇಹಾ ಮದುವೆಗೆ ಭರ್ಜರಿ ರೆಸ್ಪಾನ್ಸ್​​​; ಈ ವಾರ ವೀಕ್ಷಕರ ಮನಗೆದ್ದ ಆ ಸೀರಿಯಲ್​​ ಯಾವುದು?

Share :

08-07-2023

    ಈ ವಾರ ಯಾವ ಸೀರಿಯಲ್​ಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ?

    ವೀಕ್ಷಕರು ಈ ವಾರ ಹೆಚ್ಚು ನೋಡಿದ ಧಾರಾವಾಹಿ ಇದೇ ನೋಡಿ!

    ನಿತ್ಯ ಕನ್ನಡಿಗರ ಮನಗೆದ್ದ ಕಿರುತೆರೆಯ ಟಾಪ್​ ಸೀರಿಯಲ್​ ಇವು

ಕಿರುತೆರೆಯಲ್ಲಿ ಸೀರಿಯಲ್​ಗಳ ಲೆಕ್ಕಚಾರಗಳು ಜೋರಿದೆ. ವೀಕ್ಷಕರ ಮನಸ್ಸು ವಿಚಲಿತ ಆಗುವಷ್ಟರ ಮಟ್ಟಕ್ಕೆ ಸೀರಿಯಲ್​ಗಳ ಹಗ್ಗ-ಜಗ್ಗಾಟ ನಡೆಯುತ್ತಿದೆ. ಪ್ರೇಕ್ಷಕರು ಈ ವಾರ ಯಾವ ಸೀರಿಯಲ್​​ಗೆ ಎಷ್ಟು ಮಾರ್ಕ್ಸ್ ಕೊಟ್ಟಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ. ವೀಕ್ಷಕರು ಯಾವ ಧಾರಾವಾಹಿಯನ್ನ ಹೆಚ್ಚು ನೋಡುತ್ತಿದ್ದಾರೆ ಎಂಬುವುದನ್ನ ತಿಳಿಯೋಕೆ ಇರೋ ಮಾನದಂಡ ಟಿಆರ್​ಪಿ. ಈ ವಾರದ ರಿಸಲ್ಟ್​ ಬಂದಿದ್ದು, ಸೀರಿಯಲ್​ ದುನಿಯಾದಲ್ಲಿ ಪುಟ್ಟಕ್ಕನ್ನದ್ದೇ ದರ್ಬಾರ್​ ಬಲು ಜೋರಾಗಿದೆ.

ಕಂಠಿ ಸ್ನೇಹಾ ಮದುವೆಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದ್ದು, 12.2 ರೇಟಿಂಗ್​ ಪಡೆದಿರುವ ಪುಟ್ಟಕ್ಕನ ಮಕ್ಕಳು ನಂಬರ್​ ಒನ್​ ಸ್ಥಾನದಲ್ಲಿ ರಾರಾಜಿಸುತ್ತಿದೆ. 7.8 ರೇಟಿಂಗ್​ ಮೂಲಕ ಗಟ್ಟಿಮೇಳ ಎರಡನೇ ಸ್ಥಾನದಲ್ಲಿದೆ. 7.1 ರೇಟಿಂಗ್​ ಪಡೆದು ಮೂರನೇ ಸ್ಥಾನವನ್ನ ಇತ್ತಿಚೀಗೆ ಲಾಂಚ್​ ಆದ ಅಮೃತಧಾರೆ ಅಲಂಕರಿಸಿದೆ. 5.9 ರೇಟಿಂಗ್ ಪಡೆದುಕೊಂಡು ಶ್ರೀರಸ್ತು ಶುಭಮಸ್ತು ನಾಲ್ಕನೇ ಸ್ಥಾನದಲ್ಲಿದೆ.

ಕತೆಯಲ್ಲಿ ಹೊಸ ತಿರುವು ಪಡೆಯುತ್ತಿರುವ ಲಕ್ಷ್ಮೀ ಬಾರಮ್ಮ ಐದನೇ ಸ್ಥಾನದಲ್ಲಿದ್ದು 5.9 ರೇಟಿಂಗ್​ ಪಡೆದಿದೆ. ಭಾಗ್ಯಲಕ್ಷ್ಮೀ 7ನೇ ಸ್ಥಾನದಲ್ಲಿದ್ದು 5.7 ಟಿವಿಆರ್​ ಪಡೆದಿದೆ. ಕಲರ್ಸ್​ ಕನ್ನಡದ ಮಧ್ಯಾಹ್ನದ ಮನರಂಜನೆಗೂ ಉತ್ತಮ ರೆಸ್ಪಾನ್ಸ್​ ಲಭಿಸಿದೆ. ಕ್ರೈಂ ಲೋಕದ ಕತೆಗಳಾದ ಶಾಂತಂ ಪಾಪಂ 1.4 ರೇಟಿಂಗ್​ ಪಡೆದಿದ್ದು, ಎರಡೂ ಹೊಸ ಕತೆಗಳಾದ ಗೃಹಲಕ್ಷ್ಮೀ ಹಾಗೂ ಗಂಡ ಹೆಂಡತಿ ಸಮನಾಗಿ 1.3 ರೇಟಿಂಗ್​ ಪಡೆದಿವೆ.

ಇನ್ನು ರಿಯಾಲಿಟಿ ಶೋಗಳಿಗೆ ಬರೋದಾದ್ರೆ, ಭರ್ಜರಿ ಬ್ಯಾಚುಲರ್ಸ್​ 7.7 ರೇಟಿಂಗ್​ ಪಡೆದು ಭರ್ಜರಿಯಾಗಿಯೇ ಒಪನಿಂಗ್​ ಪಡೆದಿದೆ. ಒಟ್ಟಿನಲ್ಲಿ ಜ್ಹೀ ಕನ್ನಡದ ಧಾರಾವಾಹಿಗಳು ಟಾಪ್​ ಸ್ಥಾನದಲ್ಲಿವೆ. ವೀಕ್ಷಕರ ಮನಸ್ಸು ಉಯ್ಯಾಲೆ ಆಗಿರೋದು ಸತ್ಯ. ವಾರದಿಂದ ವಾರಕ್ಕೆ ವೀಕ್ಷಕರು ಅಭಿರುಚಿ ಬೇರೆ ಆಗ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕಂಠಿ, ಸ್ನೇಹಾ ಮದುವೆಗೆ ಭರ್ಜರಿ ರೆಸ್ಪಾನ್ಸ್​​​; ಈ ವಾರ ವೀಕ್ಷಕರ ಮನಗೆದ್ದ ಆ ಸೀರಿಯಲ್​​ ಯಾವುದು?

https://newsfirstlive.com/wp-content/uploads/2023/07/puttakana.jpg

Load More