newsfirstkannada.com

ಸೀರಿಯಲ್​​ಗಳಲ್ಲೂ ನೀನಾ..? ನಾನಾ..?: ಈ ವಾರ ಜನರ ಮನಗೆದ್ದ ಧಾರಾವಾಹಿ ಯಾವುದು ಗೊತ್ತಾ?

Share :

01-07-2023

  ಈ ವಾರ ಯಾವ ಸೀರಿಯಲ್​ಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ?

  ಭಾಗ್ಯಲಕ್ಷ್ಮೀ ಟಕ್ಕರ್​ ಕೊಡಲು ಮುಂದಾದ ಅಮೃತಧಾರೆ ಸೀರಿಯಲ್

  ಕಿರುತೆರೆಯ ಟಾಪ್​ ಸೀರಿಯಲ್​ಗಳು ಪಡೆದುಕೊಂಡ ಟಿಆರ್​ಪಿ ಎಷ್ಟು?

ಕಿರುತೆರೆಯಲ್ಲಿ ಸೀರಿಯಲ್​ಗಳ ಲೆಕ್ಕಚಾರಗಳು ಜೋರಿದೆ. ವೀಕ್ಷಕರ ಮನಸ್ಸು ವಿಚಲಿತ ಆಗುವಷ್ಟರ ಮಟ್ಟಕ್ಕೆ ಸೀರಿಯಲ್​ಗಳ ಹಗ್ಗ-ಜಗ್ಗಾಟ ಜೋರಿದೆ. ಪ್ರೇಕ್ಷಕರು ಈ ವಾರ ಯಾವ ಸೀರಿಯಲ್​​ಗೆ ಎಷ್ಟು ಮಾರ್ಕ್ಸ್ ಕೊಟ್ಟಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ. ಪುಟ್ಟಕ್ಕನ ಮಗಳ ಮದುವೆ ಸಂಭ್ರಮಕ್ಕೆ ಜನ ಜೈಕಾರ ಹಾಕಿದ್ದಾರೆ. ಬಹು ಕಾಲದ ನಂತರ ಮತ್ತೆ ಕಿರುತೆರೆಯಲ್ಲಿ ಎರಡು ಡಿಜಿಟ್ ಟಿವಿಆರ್ ಬಂದಿದೆ. ಮೊದಲ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 10.8 ಟಿವಿಆರ್ ಪಡೆದುಕೊಂಡಿದೆ.

ಇದು ನಿಜಕ್ಕೂ ತಂಡಕ್ಕೆ ಖುಷಿಯ ವಿಚಾರ. ಎರಡನೇ ಸ್ಥಾನದಲ್ಲಿ ಬಿಟ್ಟು ಬಿಡದಂತೆ ಗಟ್ಟಿಮೇಳ ಗಟ್ಟಿಯಾಗಿ 7.2 ಟಿವಿಆರ್ ಪಡೆಯೋ ಮೂಲಕ ಎರಡನೇ ಸ್ಥಾನದಲ್ಲಿ ನಿಂತಿದೆ. ಮೂರನೇ ಸ್ಥಾನದಲ್ಲಿ ಈ ಬಾರಿ ಅಮೃತಾಧಾರೆ ಬಂದಿದೆ. ಈ ಬಾರಿ ಅಮೃತಧಾರೆ ಭಾಗ್ಯಲಕ್ಷ್ಮೀಯನ್ನ ಹಿಂದಿಕ್ಕಿ ರಾಕೆಟ್ ರೀತಿಯಲ್ಲಿ ತನ್ನ ವೇಗ ಹೆಚ್ಚಿಸಿಕೊಂಡಿದೆ. 6.1 ಟಿವಿಆರ್ ಮೂಲಕ ಅಮೃತಾಧಾರೆ  ಸೀರಿಯಲ್ ಎಲ್ಲರ ಮನ ಗೆದ್ದಿದೆ.

ನಾಲ್ಕನೇ ಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು ಧಾರಾವಾಹಿ 6.0 ಟಿವಿಆರ್ ಪಡೆಯೋ ಮೂಲಕ ತನ್ನ ಸ್ಥಾನವನ್ನ ಉಳಿಸಿಕೊಂಡಿದೆ. ಐದನೇ ಸ್ಥಾನದಲ್ಲಿ ಸತ್ಯ ಎಂದಿನಂತೆ 5.7 ಟಿವಿಆರ್ ಪಡೆದಕೊಂಡಿದೆ. ಏಳನೇ ಸ್ಥಾನಕ್ಕೆ ಲಕ್ಷ್ಮೀ ಬಾರಮ್ಮ 5.6 ಟಿವಿಆರ್ ಪಡೆದುಕೊಂಡಿದೆ. ಭಾಗ್ಯಲಕ್ಷ್ಮೀ 5.2 ಟಿವಿಆರ್ ಪಡೆದು ಎಂಟನೇ ಸ್ಥಾನಕ್ಕೆ ಕುಸಿದು ಬಿದ್ದಿದೆ.

ರಿಯಾಲಿಟಿ ಶೋಗಳದತ್ತ ನೋಡುವುದಾದರೆ ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್​ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿ ವಾರದಿಂದ ವಾರಕ್ಕೆ ಕ್ರಮೇಣ ತನ್ನ ರೇಟಿಂಗ್ಸ್​ ಹೆಚ್ಚಿಸಿಕೊಳ್ತಿದೆ. ಈ ಶೋ ಸದ್ಯ ಹೋದ ವಾರದ ರೇಟಿಂಗ್ಸ್ 5.1 ಟಿವಿಆರ್ ಪಡೆದಿದೆ. ಒಟ್ಟಿನಲ್ಲಿ ವೀಕ್ಷಕರ ಮನಸ್ಸು ಉಯ್ಯಾಲೆ ಆಗಿರೋದು ಸತ್ಯ. ವಾರದಿಂದ ವಾರಕ್ಕೆ ವೀಕ್ಷಕರು ಅಭಿರುಚಿ ಬೇರೆ ಆಗ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸೀರಿಯಲ್​​ಗಳಲ್ಲೂ ನೀನಾ..? ನಾನಾ..?: ಈ ವಾರ ಜನರ ಮನಗೆದ್ದ ಧಾರಾವಾಹಿ ಯಾವುದು ಗೊತ್ತಾ?

https://newsfirstlive.com/wp-content/uploads/2023/06/bhagyalaxmi.jpg

Load More