ಮನರಂಜನೆ ಲೋಕದಲ್ಲಿ ಸೀರಿಯಲ್ಗಳಿಗೆ ವಿಶೇಷ ಸ್ಥಾನ ಗಳಿಸಿದೆ
ಪ್ರತಿ ವಾರ ಟಿಆರ್ಪಿ ಲಿಸ್ಟ್ ಮೇಲೆ ವೀಕ್ಷಕರ ಗಮನ ನೆಟ್ಟಿರುತ್ತದೆ
ಈ ವಾರವೂ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನವನ್ನು ಗಳಿಸಿದೆ
ಮನರಂಜನೆ ಲೋಕದಲ್ಲಿ ಸೀರಿಯಲ್ಗಳಿಗೆ ವಿಶೇಷ ಸ್ಥಾನವಿದೆ. ವೀಕ್ಷಕರ ಫೇವರೆಟ್ ಸೀರಿಯಲ್ ಯಾವುದು ಅಂತಾ ತಿಳಿಯೋಕೆ ಇರೋ ಮಾನದಂಡ ಎಂದರೆ ಅದು ಟಿಆರ್ಪಿ. ಪ್ರತಿ ವಾರ ಟಿಆರ್ಪಿ ಲಿಸ್ಟ್ ಮೇಲೆ ವೀಕ್ಷಕರ ಚಿತ್ತ ನೆಟ್ಟಿರುತ್ತದೆ. ಈ ವಾರದ ಟಿಆರ್ಪಿ ಲಿಸ್ಟ್ನಲ್ಲಿ ಹೊಸಬರು ರಾರಾಜಿಸುತ್ತಿದ್ದಾರೆ. ಹೌದು, ವೀಕ್ಷಕರ ಮನೆ ಮನಸ್ಸಲ್ಲಿ ವಿಶೇಷ ಸ್ಥಾನ ಪಡೆದಿರೋ ಗಟ್ಟಿಮೇಳ ಧಾರಾವಾಹಿಯನ್ನು ನೋಡುವವರ ಸಂಖ್ಯೆ ವಾರದಿಂದ ವಾರಕ್ಕೆ ಕುಸಿಯುತ್ತಿದೆ. ಇಷ್ಟು ವರ್ಷ ಗಟ್ಟಿಯಾಗಿ ನೆಲೆಯೂರಿದ್ದ ಗಟ್ಟಿಮೇಳಗೆ ಟಕ್ಕರ್ ಕೊಡುತ್ತಿವೆ ಹೊಸ ಸೀರಿಯಲ್ಸ್.
ಸೀತಾರಾಮ, ಅಮೃತಧಾರೆ ಹಾಗೂ ಶ್ರೀರಸ್ತು ಶುಭಮಸ್ತು ಪೈಪೋಟಿ ನೀಡುತ್ತಿವೆ. ಮೊದಲ ಸ್ಥಾನದಲ್ಲಿ ಯಶಸ್ವಿ ನಾಗಾಲೋಟವನ್ನ ಮುಂದುವರೆಸಿದ್ದಾಳೆ ಪುಟ್ಟಕ್ಕ. 11.2 ಟಿಆರ್ಪಿ ಪಡೆದುಕೊಂಡು ಮುನ್ನುಗ್ಗುತ್ತಿದೆ. ಎರಡನೇ ಸ್ಥಾನದಲ್ಲಿದ್ದ ಗಟ್ಟಿಮೇಳ ಸೀರಿಯಲ್ ಅನ್ನ ಸೈಡಿಗೆ ಸರಿಸಿ ಸೀತಾ ರಾಮ 8.5 ಟಿಆರ್ಪಿ ಪಡೆದಿದೆ. ಮೂರನೇ ಸ್ಥಾನದಲ್ಲಿ ಅಮೃತಧಾರೆ ಇದ್ದು, 8.3 ಟಿಆರ್ಪಿ ಪಡೆದುಕೊಂಡಿದೆ. ಇನ್ನೂ, ಗಟ್ಟಿಮೇಳ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, 8.2 ಟಿಆರ್ಪಿ ಪಡೆದುಕೊಂಡಿದೆ. ಸತ್ಯ ಐದನೇ ಸ್ಥಾನದಲ್ಲಿದ್ದು, 7.6 ಟಿಆರ್ಪಿ ಗಳಿಸಿದೆ.
ಇದನ್ನು ಓದಿ: ಅತ್ತೆ ಸೊಸೆಯ ಲವ್ ಸ್ಟೋರಿ ಹೇಗಿದೆ ಗೊತ್ತಾ? ಸತ್ಯಾಳ ನಡವಳಿಕೆಗೆ ಫಿದಾ ಆಗಿದ್ದಾಳೆ ಸೀತಮ್ಮ..!
ಇನ್ನೂ, ಕಲರ್ಸ್ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಮೊದಲನೇ ಸ್ಥಾನದಲ್ಲಿದೆ. 6.5 ಟಿಆರ್ಪಿ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಭಾಗ್ಯಲಕ್ಷ್ಮೀ ಇದೆ. 6 ಟಿಆರ್ಪಿ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ವಾರದ ಮತ್ತೊಂದು ವಿಶೇಷ ಬೆಳವಣಿಗೆ ಎಂದರೆ ರಾಮಾಚಾರಿಯನ್ನ ಒಂದು ಅಂಕಿಯಿಂದ ಹಿಂದಿಕ್ಕಿದೆ ಅಂತರಪಟ. ಹೌದು, ಅಂತರಪಟ 4.7 ಪಡೆದಿದ್ದರೆ, ರಾಮಾಚಾರಿ 4.6 ಟಿಆರ್ಪಿ ಪಡೆದುಕೊಂಡಿದೆ.
ಇತ್ತ ರಿಯಾಲಿಟಿ ಶೋಗಳಿಗೆ ಬರೋದಾದರೆ ನಂಬರ್ ಒನ್ ಸ್ಥಾನದಲ್ಲಿ ಡಿಕೆಡಿ ಇದ್ದು, ಒಟ್ಟು 9.2 ಟಿಆರ್ಪಿ ಪಡೆದಿದೆ. ಎರಡನೇ ಸ್ಥಾನದಲ್ಲಿ ಭರ್ಜರಿ ಬ್ಯಾಚುಲರ್ಸ್ ಇದ್ದು, 7.8 ರೇಟಿಂಗ್ ಪಡೆದಿದೆ. ಮೂರನೇ ಸ್ಥಾನ ಫ್ಯಾಮಿಲಿ ಗ್ಯಾಂಗ್ಸ್ಟಾರ್ಸ್ ಪಾಲಾಗಿದ್ದು, 4.1 ಟಿವಿಆರ್ ಪಡೆದಿದೆ. ಇನ್ನೂ ಛೋಟಾ ಚಾಂಪಿಯನ್ ಗ್ರ್ಯಾಂಡ್ ಫಿನಾಲೆ 3.7 ಟಿವಿಆರ್ ಪಡೆದುಕೊಂಡಿದೆ. ಇದಿಷ್ಟು ಈ ವಾರದ ಟಿಆರ್ಪಿ ಹೈಲೈಟ್ಸ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ