newsfirstkannada.com

ವರುಣ್ ಆರಾಧ್ಯ ಜೀವದ ಗೆಳೆಯ ಇನ್ನಿಲ್ಲ.. ತೇಜಸ್ ನಿಧನಕ್ಕೆ ಬೆಚ್ಚಿ ಬಿದ್ದ ಕಿರುತೆರೆ ನಟರು; ಆಗಿದ್ದೇನು?

Share :

Published June 26, 2024 at 12:51pm

Update June 26, 2024 at 12:53pm

  ತೇಜಸ್ ನಿಧನಕ್ಕೆ ಕಿರುತೆರೆ ನಟ ವರುಣ್ ಆರಾಧ್ಯ ಭಾವುಕ

  ಯಾಕೆ ಇಷ್ಟು ಬೇಗ ನನ್ನ ಬಿಟ್ಟು ಹೋದೆ ದಯವಿಟ್ಟು ವಾಪಸ್

  ತೇಜಸ್ ಸಾವಿಗೆ ಕನ್ನಡ ಕಿರುತೆರೆಯ ಕಲಾವಿದರಿಂದ ಶ್ರದ್ಧಾಂಜಲಿ

ಬೆಂಗಳೂರು: ಕಿರುತೆರೆ ನಟ ವರುಣ್ ಆರಾಧ್ಯ ಅವರ ಕುಚಿಕು ಗೆಳೆಯ ತೇಜಸ್ ಅವರು ನಿಧನರಾಗಿದ್ದಾರೆ. ತೇಜಸ್‌ ಹಠಾತ್ ಸಾವಿನ ಸುದ್ದಿ ಕನ್ನಡ ಕಿರುತೆರೆ ಪಾಳಯದಲ್ಲಿ ಆಘಾತವನ್ನೇ ತಂದಿದೆ. ತೇಜಸ್ ಸಾವಿಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಕಲಾವಿದರು ಕಂಬನಿ ಮಿಡಿಯುತ್ತಿದ್ದಾರೆ.

ಇದನ್ನೂ ಓದಿ: ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ 

ಸಾವು ಅನ್ನೋದು ನಿಜಕ್ಕೂ ಘನಘೋರ. ಅದರಲ್ಲೂ ನಿನ್ನೆ ಇದ್ದವರು ಇಂದು ನಮ್ಮೊಂದಿಗೆ ಇಲ್ಲ ಅನ್ನೋದನ್ನ ಸಹಿಸಿಕೊಳ್ಳೋದು ಸಾಧ್ಯವೇ ಇಲ್ಲ. ನಟ ವರುಣ್ ಆರಾಧ್ಯ ಅವರು ಆತ್ಮೀಯ ಗೆಳೆಯರ ಪೈಕಿ ತೇಜಸ್ ಕೂಡ ಒಬ್ಬರಾಗಿದ್ದರು. ನಿನ್ನೆ ಇದ್ದ ತೇಜಸ್ ಅವರು ಇವತ್ತು ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ ಎಂದರೆ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ.

ತೇಜಸ್ ಅವರ ನಿಧನಕ್ಕೆ ಕಿರುತೆರೆ ನಟ ವರುಣ್ ಆರಾಧ್ಯ ಭಾವುಕರಾಗಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವರುಣ್, ನನಗೆ ಈಗಲೂ ನಂಬಲು ಆಗುತ್ತಿಲ್ಲ. ಸಾಧ್ಯವಾದ್ರೆ ಮತ್ತೆ ಹುಟ್ಟಿ ಬಾ. ನೀನು ನನ್ನ ಪಾಲಿಗಿದ್ದ ಒಬ್ಬನೇ ಸಹೋದರ. ಯಾಕೆ ಇಷ್ಟು ಬೇಗ ನನ್ನ ಬಿಟ್ಟು ಹೋದೆ. ದಯವಿಟ್ಟು ವಾಪಸ್ ಎಂದು ಹೇಳಿದ್ದಾರೆ.

ಅಸಲಿಗೆ ಆಗಿದ್ದೇನು?
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದ ಇನ್‌ಫ್ಲೂಯೆನ್ಸರ್‌ ತೇಜಸ್ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತೇಜಸ್ ಹಾಗೂ ಇನ್ನೊಬ್ಬ ಸ್ನೇಹಿತ ಜೊತೆಯಲ್ಲಿ ದೊಡ್ಡಬಳ್ಳಾಪುರದ ಕಡೆ ಹೋಗಿದ್ದರು. ದೊಡ್ಡಬಳ್ಳಾಪುರ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ತೇಜಸ್ ಮೃತಪಟ್ಟಿದ್ದಾರೆ. ತೇಜಸ್ ಜೊತೆಗಿದ್ದ ಸ್ನೇಹಿತನಿಗೂ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಮತ್ತೊಂದು ಸ್ಟಾರ್ ಜೋಡಿಯ ದಾಂಪತ್ಯದಲ್ಲಿ ಬಿರುಕು.. 15 ವರ್ಷದ ಸಂಸಾರಕ್ಕೆ ಡಿವೋರ್ಸ್​​ ಕೊಡಲು ತಯಾರಿ..? 

ವರುಣ್ ಆರಾಧ್ಯ ಕಂಬನಿ
ಬೃಂದಾವನ ಸೀರಿಯಲ್‌ ನಟ ವರುಣ್ ಆರಾಧ್ಯ ಹಾಗೂ ತೇಜಸ್ ಇಬ್ಬರು ಜೀವದ ಗೆಳೆಯರು. ಬಾಲ್ಯದಿಂದಲೂ ಒಟ್ಟಿಗೆ ಬೆಳೆದ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಯಾವುದೇ ಟ್ರಿಪ್‌ಗೆ ಹೋದರು ವರುಣ್ ಜೊತೆ ತೇಜಸ್ ಇರುತ್ತಾ ಇದ್ದರು. ವರುಣ್ ಆರಾಧ್ಯ ಅವರ ಸಾಕಷ್ಟು ರೀಲ್ಸ್‌ಗಳಲ್ಲಿ ತೇಜಸ್ ಕಾಣಿಸಿಕೊಂಡು ಮಿಂಚಿದ್ದಾರೆ.

ವರುಣ್ ಆರಾಧ್ಯ ಅವರಂತೆ ತೇಜಸ್ ಅವರು ಕನ್ನಡ ಕಿರುತೆರೆಯ ಸಾಕಷ್ಟು ಕಲಾವಿದರೊಂದಿಗೆ ಉತ್ತಮ ಸ್ನೇಹ ಬೆಳೆಸಿಕೊಂಡಿದ್ದರು. ಕಳೆದ 20 ಗಂಟೆಯ ಹಿಂದೆ ಜೊತೆಗಿದ್ದ ತೇಜಸ್ ಅಪಘಾತದಲ್ಲಿ ಸಾವನ್ನಪ್ಪಿರುವ ಸುದ್ದಿ ಕೇಳಿ ಕಿರುತೆರೆಯ ಸಾಕಷ್ಟು ಸ್ನೇಹಿತರು ಕಂಬನಿ ಮಿಡಿಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತೇಜಸ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರುಣ್ ಆರಾಧ್ಯ ಜೀವದ ಗೆಳೆಯ ಇನ್ನಿಲ್ಲ.. ತೇಜಸ್ ನಿಧನಕ್ಕೆ ಬೆಚ್ಚಿ ಬಿದ್ದ ಕಿರುತೆರೆ ನಟರು; ಆಗಿದ್ದೇನು?

https://newsfirstlive.com/wp-content/uploads/2024/06/Varun-Aradhya-actor.jpg

Load More