Advertisment

ನಟಿ ಚಂದನಾ ಅನಂತಕೃಷ್ಣ ಮದುವೆಗೆ ಯಾರ್ ಯಾರು ಬಂದಿದ್ರು? ಟಾಪ್ 10 ಫೋಟೋ ಇಲ್ಲಿವೆ!

author-image
admin
Updated On
ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್​ ಕನ್ನಡ ಕಿರುತೆರೆ ನಟ-ನಟಿಯರ ಲಿಸ್ಟ್ ಇಲ್ಲಿದೆ ನೋಡಿ
Advertisment
  • ಕಿರುತೆರೆ ಕಲಾವಿದರು, ಬಿಗ್​ಬಾಸ್ ಮಾಜಿ ಸ್ಪರ್ಧಿಗಳು ಮದ್ವೆಯಲ್ಲಿ ಭಾಗಿ
  • ಹಿರಿಯ ನಟಿ ಲಲಿತಾಂಜಲಿ ಅವರ ಪುತ್ರ ಪ್ರತ್ಯಕ್ಷ್‌ ಕೈ ಹಿಡಿದ ‘ಚಿನ್ನುಮರಿ’
  • ಹೊಸ ಬಾಳಿಗೆ ಕಾಲಿಟ್ಟ ನವಜೋಡಿಗೆ ಶುಭಾಶಯಗಳ ಮಹಾಪೂರ

ಲಕ್ಷ್ಮೀ ನಿವಾಸ ಸೀರಿಯಲ್‌ ಮೂಲಕ ಕನ್ನಡಿಗರ ಮನೆ ಮಾತಾಗಿರುವ ನಟಿ ಚಂದನಾ ಅನಂತಕೃಷ್ಣ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

Advertisment

publive-image

ನಟಿ ಲಲಿತಾಂಜಲಿ ಅವರ ಪುತ್ರ ಪ್ರತ್ಯಕ್ಷ್‌ ಹಾಗೂ ನಟಿ ಚಂದನಾ ಅನಂತಕೃಷ್ಣ ಅವರ ಮದುವೆ ಇಂದು ಅದ್ಧೂರಿಯಾಗಿ ನೆರವೇರಿದೆ.

publive-image

ಚಂದನಾ ಅನಂತಕೃಷ್ಣ ಹಾಗೂ ಪ್ರತ್ಯಕ್ಷ್‌ ಅವರು ಹಿರಿಯರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

publive-image

ಬೆಂಗಳೂರಲ್ಲಿ ಈ ವಿವಾಹ ಸಮಾರಂಭ ನಡೆದಿದ್ದು ಮದುವೆಗೆ ಎರಡು ಕಡೆಯ ಕುಟುಂಬಸ್ಥರು, ಬಂದು-ಬಳಗ, ಅನುಪಮಾ, ನಿರಂಜನ್ ದೇಶಪಾಂಡೆ, ಯಶಸ್ವಿನಿ ದೇಶಪಾಂಡೆ, ದಿಶಾ ಮದನ್, ಕೀರ್ತಿ, ಅಂಜಲಿ, ಲಕ್ಷ್ಮೀ, ಅಜಯ್, ಮಧು, ಸುಜಾತಾ, ಕಿರುತೆರೆಯ ಕಲಾವಿದರು, ಬಿಗ್​ಬಾಸ್​ನ ಮಾಜಿ ಸ್ಪರ್ಧಿಗಳು, ನವ ಜೋಡಿಗೆ ಇರುವ ಸ್ನೇಹಿತರು ಸೇರಿದಂತೆ ಹಲವು ಜನರು ಭಾಗಿಯಾಗಿದ್ದರು.

Advertisment

ಇದನ್ನೂ ಓದಿ: VIDEO: ಭಾವಿ ಪತಿ ಜತೆ ಚಿನ್ನುಮರಿ ಜಬರ್ದಸ್ತ್ ಡ್ಯಾನ್ಸ್; ಚಂದನಾ ಅನಂತಕೃಷ್ಣ ಫ್ಯಾನ್ಸ್​ ಫುಲ್ ಖುಷ್ 

publive-image

ಇದು ಪಕ್ಕಾ ಕುಟುಂಬಸ್ಥರು ನಿಶ್ಚಯಿಸಿರುವ ಮದುವೆ ಆಗಿದ್ದು ಶುಭ ಮುಹೂರ್ತದಲ್ಲಿ ಇಬ್ಬರು ಹೊಸ ಬಾಳಿಗೆ ವೆಲ್​​ಕಮ್ ಹೇಳಿದ್ದಾರೆ.

publive-image

ರಾಜಾ ರಾಣಿ, ಹೂಮಳೆ ಸೀರಿಯಲ್‌ಗಳಲ್ಲಿ ಮಿಂಚಿದ್ದ ಚಂದನಾ ಅನಂತಕೃಷ್ಣ ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್‌ನ ಚಿನ್ನುಮರಿ ಜಾಹ್ನವಿ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ.

Advertisment

publive-image

ಲಕ್ಷ್ಮೀ ನಿವಾಸ ಸೀರಿಯಲ್‌ ಮೂಲಕ ಪ್ರತಿ ಮನೆ ಮನೆಗೂ ಗೊತ್ತಿರುವ ನಟಿ ಚಂದನಾ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

publive-image

ಚಂದನಾ, ಬಿಕಾಂ ಓದಿದ್ದು ರಾಜಾ ರಾಣಿ, ಮುದ್ದು ಮಣಿಗಳು ಸೀರಿಯಲ್​ಗಳಲ್ಲಿ ಈ ಮೊದಲು ನಟಿಸಿದ್ದರು. ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಫರ್ಧಿ ಕೂಡ ಆಗಿದ್ದರು.

publive-image

ಪ್ರತ್ಯಕ್ಷ ಮೂಲತಃ ಚಿಕ್ಕಮಗಳೂರಿನವರು. ಎಂಟೆಕ್ ವಿದ್ಯಾಭ್ಯಾಸ ಮಾಡಿದ್ದು, ಸದ್ಯ ಬೆಂಗಳೂರಿನಲ್ಲೇ ಸ್ವಂತ ಉದ್ಯಮ ಹೊಂದಿದ್ದಾರೆ. ಸಿನಿಮಾ ಕುಟುಂಬದ ಹಿನ್ನಲೆ ಹೊಂದಿರುವ ಪ್ರತ್ಯಕ್ಷ, ನಟ ದಿವಂಗತ ಉದಯ್ ಹುತ್ತಿನಗದ್ದೆ ಹಾಗೂ ತಾಯಿ ಲಲಿತಾಂಜಲಿ ಉದಯ್ ಅವರ ಮುದ್ದಿನ ಮಗ. ಡಾ.ರಾಜ್‌ ಕುಮಾರ್‌ ಸಿನಿಮಾಗಳಲ್ಲಿ ಉದಯ್ ಅವರು ಅಭಿನಯಿಸಿದ್ದರು.

Advertisment

publive-image

ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದ ಇವರು ಆರಂಭ ಚಿತ್ರದ ಮೂಲಕ ಕನ್ನಡ ಸಿನಿ ರಂಗಕ್ಕೆ ಪ್ರವೇಶಿಸಿದ್ದರು. ಅಗ್ನಿಪರ್ವ, ಶುಭ ಮಿಲನ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟ ದಿವಂಗತ ಉದಯ್ ಅವರು ಅಭಿನಯ ಮಾಡಿದ್ದರು.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment