newsfirstkannada.com

×

Bigg Boss Kannada 11: ಕಿರುತೆರೆಯಲ್ಲಿ ಧೂಳೆಬ್ಬಿಸಿದ ಹೊಸ ಅಧ್ಯಾಯ.. ಬಿಗ್‌ ಬಾಸ್‌ ವಿಡಿಯೋ ಬಿಡುಗಡೆ!

Share :

Published September 18, 2024 at 5:40pm

    ಕೇವಲ 24 ಗಂಟೆಯಲ್ಲಿ ಬಿಗ್‌ಬಾಸ್ 11 ಪ್ರೊಮೋ ಹೊಸ ಹವಾ ಸೃಷ್ಟಿ

    ಮೊದಲ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಕೊಟ್ಟ ಭರವಸೆ ಸುಳ್ಳಾಗಲಿಲ್ಲ

    ಈ ಬಾರಿ ಹೊಸ ಅಧ್ಯಾಯ ಅನ್ನೋದಕ್ಕೆ ಅಲ್ಲಿದೆ ಅತಿದೊಡ್ಡ ಸಾಕ್ಷಿ!

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್‌ ಬಾಸ್‌ ಈ ಬಾರಿ ಡಿಫರೆಂಟ್ ಆಗಿ ಮೂಡಿ ಬರುತ್ತಿದೆ. ಈ ವಿಷ್ಯ ಎಲ್ಲರಿಗೂ ಗೊತ್ತಿದೆ. ಆದರೆ ಬಿಗ್‌ ಬಾಸ್ ಸೀಸನ್ 11ರ ಪ್ರೊಮೋ ರಿಲೀಸ್ ಆದ ಮೇಲೆ ಹೊಸ ಅಧ್ಯಾಯದ ಹವಾ ಜೋರಾಗಿದೆ.

ಇದನ್ನೂ ಓದಿ: ಬಿಳಿ ಬಣ್ಣದ ಸೀರೆಯಲ್ಲಿ ಅಪ್ಸರೆಯಾದ ಬಿಗ್​ಬಾಸ್​ ಸುಂದರಿ; ನಮ್ರತಾ ಗೌಡ ಫೋಟೋಗೆ ಫ್ಯಾನ್ಸ್ ಗುಣಗಾನ 

10 ವರ್ಷದಿಂದ ಒಂದು ಲೆಕ್ಕ ಈಗಿಂದ ಬೇರೆನೇ ಲೆಕ್ಕ. ಬಿಗ್‌ಬಾಸ್ 11ರ ಮೊದಲ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಅವರು ಇದು ಹೊಸ ಅಧ್ಯಾಯ ಅನ್ನೋ ಭರವಸೆ ಕೊಟ್ಟಿದ್ದರು. ಕಿಚ್ಚ ಕೊಟ್ಟ ಮಾತಿನಂತೆ ಬಿಗ್‌ಬಾಸ್ ಸೀಸನ್ 11ರ ಪ್ರೊಮೋ ಕಿರುತೆರೆಯಲ್ಲಿ ಧೂಳೆಬ್ಬಿಸಿದೆ. ಕೇವಲ 24 ಗಂಟೆಯಲ್ಲಿ ಬಿಗ್‌ಬಾಸ್ ಪ್ರೊಮೋ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ಬಿಗ್‌ಬಾಸ್ ಸೀಸನ್ 11ರ ಪ್ರೊಮೋ ಹವಾ ಜೋರಾಗಿರುವಾಗಲೇ ಕಲರ್ಸ್‌ ಕನ್ನಡ ತಂಡದಿಂದ ಮತ್ತೊಂದು ವಿಡಿಯೋ ಬಿಡುಗಡೆ ಮಾಡಲಾಗಿದೆ. ಬಿಗ್‌ಬಾಸ್ ಪ್ರೊಮೋದ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಲಾಗಿದ್ದು, ಕಿಚ್ಚ ಸುದೀಪ್‌ನ ಖಡಕ್ ಲುಕ್‌ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಈ ಬಾರಿ ಇನ್ನೂ ದೊಡ್ಡದು ಕಾದಿದೆ.. ಬಿಗ್​​ಬಾಸ್​​​ ಸೀಸನ್​​ 11 ಬಗ್ಗೆ ಬಿಗ್​ ಅಪ್ಡೇಟ್​​ ಕೊಟ್ಟ ಕಲರ್ಸ್​​ ಕನ್ನಡ ಪ್ರೋಮೋ!

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕಲರ್ಸ್ ಕನ್ನಡ ಚಾನೆಲ್‌ 1 ನಿಮಿಷ 50 ಸೆಕೆಂಡ್ ವಿಡಿಯೋ ರಿಲೀಸ್ ಮಾಡಿದೆ. ಬಿಗ್‌ಬಾಸ್ ಪ್ರೊಮೋ ಮೇಕಿಂಗ್ ವಿಡಿಯೋ ಇದಾಗಿದ್ದು, ಈ ಬಾರಿ ಹೊಸ ಅಧ್ಯಾಯ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ. ಬಿಗ್‌ಬಾಸ್ ಪ್ರೊಮೋ ವಿಡಿಯೋವನ್ನು ಇಡೀ ತಂಡ ಬಹಳ ಕಷ್ಟಪಟ್ಟು ಶೂಟ್ ಮಾಡಿದೆ. ಕಿರುತೆರೆಯ ದೊಡ್ಡಣ್ಣ ಬಿಗ್‌ಬಾಸ್‌ 11ರ ಅದ್ದೂರಿ ಪ್ರೊಮೋ ಮೇಕಿಂಗ್‌ ಅನ್ನೋ ಕ್ಯಾಪ್ಶನ್ ನೀಡಲಾಗಿದೆ.

ಪ್ರೊಮೋದ ಮೇಕಿಂಗ್ ವಿಡಿಯೋ ನೋಡಿ ಬಿಗ್‌ಬಾಸ್ ಪ್ರಿಯರು ಬಿಗ್‌ಬಾಸ್‌ಗೆ ಬಾಸ್ ಕಿಚ್ಚ ಸುದೀಪ್. ಪ್ರೊಮೋಗೋಸ್ಕರ ಇಷ್ಟೊಂದು ಕಷ್ಟನಾ. ಸುದೀಪ್‌ಗೋಸ್ಕರ ಬಿಗ್‌ಬಾಸ್ ನೋಡೋರು ಕಮೆಂಟ್ ಮಾಡಿ ಎಂದು ಹೇಳುತ್ತಿದ್ದಾರೆ. ಸದ್ಯ ಅಭಿಮಾನಿಗಳು ಸೆಪ್ಟೆಂಬರ್‌ 29ರಿಂದ ಶುರುವಾಗುವ ಬಿಗ್‌ಬಾಸ್ ಸೀಸನ್ 11ಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 11: ಕಿರುತೆರೆಯಲ್ಲಿ ಧೂಳೆಬ್ಬಿಸಿದ ಹೊಸ ಅಧ್ಯಾಯ.. ಬಿಗ್‌ ಬಾಸ್‌ ವಿಡಿಯೋ ಬಿಡುಗಡೆ!

https://newsfirstlive.com/wp-content/uploads/2024/09/Bigg-Boss-Sudeep.jpg

Load More