newsfirstkannada.com

×

ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಕನ್ನಡತಿ ಸೀರಿಯಲ್​ ಅಮ್ಮಮ್ಮಾ.. ಹೊಸ ಅವತಾರದಲ್ಲಿ ನಟಿ ಚಿತ್ಕಳಾ ಬಿರಾದಾರ್

Share :

Published October 31, 2024 at 6:27am

    ಕನ್ನಡತಿ, ಬೃಂದಾವನ ಬಳಿಕ ಮತ್ತೊಂದು ಸೀರಿಯಲ್​ನಲ್ಲಿ ಅಮ್ಮಮ್ಮಾ

    ವಿಭಿನ್ನ ಹೇರ್ ಸ್ಟೈಲ್​ನೊಂದಿಗೆ ವೀಕ್ಷಕರ ಗಮನ ಸೆಳೆದಿದ್ದ ನಟಿ

    ಮತ್ತೆ ಟಿವಿ ಪರದೆ ಮೇಲೆ ಮಿಂಚೋಕೆ ಸಜ್ಜಾದ ಚಿತ್ಕಳಾ ಬಿರಾದಾರ್

ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚಾಗಿ ಸೌಂಡ್​ ಮಾಡುತ್ತಿದ್ದ ಧಾರಾವಾಹಿ ಎಂದರೆ ಅದು ಕನ್ನಡತಿ. ಇದೇ ಕನ್ನಡತಿ ಸೀರಿಯಲ್​ ಮೂಲಕ ಅಮ್ಮಮ್ಮನಾಗಿ ವೀಕ್ಷಕರ ಮೇಲೆ ಪ್ರಭಾವ ಬೀರಿದ ನಟಿ ಎಂದರೆ ಅದು ಚಿತ್ಕಳಾ ಬಿರಾದಾರ್. ಕನ್ನಡತಿ ಬಳಿಕ ಬೃಂದಾವನ ಧಾರಾವಾಹಿಯಲ್ಲಿ ವಿಭಿನ್ನ ಹೇರ್ ಸ್ಟೈಲ್​ನೊಂದಿಗೆ ವೀಕ್ಷಕರ ಗಮನ ಸೆಳೆದಿದ್ದರು.

ಇದನ್ನೂ ಓದಿ: ದರ್ಶನ್ ಇವತ್ತೇ ಬಳ್ಳಾರಿ ಜೈಲಿನಿಂದ ರಿಲೀಸ್? ಮಧ್ಯಂತರ ಜಾಮೀನಿಗೆ 13 ಷರತ್ತುಗಳು; ಏನವು?

ಸದ್ಯ ಹೊಸ ಪಾತ್ರದಲ್ಲಿ ವೀಕ್ಷಕರ ಮುಂದೆ ಬರುತ್ತಿದ್ದಾರೆ. ಬೃಂದಾವನದ ನಂತರ ಸೀರಿಯಲ್​ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಚಿತ್ಕಳಾ ಅವರು ಅಮೆರಿಕ ಪ್ರವಾಸದಲ್ಲಿದ್ರು. ಮಗ ಸೊಸೆ ಜೊತೆ ಸಮಯ ಕಾಳಿತಿದ್ರು. ಅಲ್ಲಿಂದ ಬಂದ್ಮೇಲೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ರು. ಸದ್ಯ ಮತ್ತೆ ಟಿವಿ ಪರದೆ ಮೇಲೆ ಮಿಂಚೋಕೆ ಸಜ್ಜಾಗಿದ್ದಾರೆ.

ಯಾವಾಗ ನಿಮ್ಮನ್ನ ನೋಡುದು ಮೇಡಂ ಅಂತ ಕೇಳ್ತಿದ್ರಿ. ನಿಮ್ಮೆಲ್ಲರ ಪ್ರಶ್ನೆಗೆ ಉತ್ತರ ಇಲ್ಲಿದೆ ಎಂದು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಅಮೃತಧಾರೆ ಧಾರವಾಹಿಯ ಪ್ರೋಮೋ ಶೇರ್ ಮಾಡಿಕೊಂಡಿದ್ದಾರೆ. ಅಮ್ಮನಿಗೆ ಹಂಬಲಿಸುತ್ತಿದ್ದ ನಾಯಕ ಗೌತಮ್​ಗೆ ಸದ್ಯದಲ್ಲಿ ಗುಡ್​ ನ್ಯೂಸ್ ಸಿಗಲಿದೆ.

ಇದನ್ನೂ ಓದಿ: ಅಬ್ಬಾ 17KG.. ತೂಕ ಇಳಿಸಲು ಹೋಗಿ ಸಾವನ್ನಪ್ಪಿದ ವಿಶ್ವದ ಅತಿ ದೊಡ್ಡ ಬೆಕ್ಕು!

ಗೌತಮ್ ತಾಯಿ ಬದುಕಿರೋ ಸತ್ಯ ಬಯಲಾಗಿದ್ದು, ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಚಿತ್ಕಳಾ ಅವರು. ಸ್ಟೋರಿಯಲ್ಲಿ ಫ್ಲ್ಯಾಶ್​ ಬ್ಯಾಕ್​ ಕತೆಗಳು ಒಂದೊಂದಾಗಿ ತೆರೆದುಕೊಳ್ಳಲಿದ್ದು, ರೋಚಕ ಸನ್ನಿವೇಶಗಳು ಬರೋದಕ್ಕೆ ಸಜ್ಜಾಗಿವೆ. ಸಹಜ ಅಭಿನಯದಿಂದ ಅಭಿಮಾನಿಗಳ ಮನಸ್ಸು ಗೆದ್ದಿರೋ ಚಿತ್ಕಾಳ ಅವರನ್ನು ಕಣ್ತುಂಬಿಕೊಳ್ಳುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಕನ್ನಡತಿ ಸೀರಿಯಲ್​ ಅಮ್ಮಮ್ಮಾ.. ಹೊಸ ಅವತಾರದಲ್ಲಿ ನಟಿ ಚಿತ್ಕಳಾ ಬಿರಾದಾರ್

https://newsfirstlive.com/wp-content/uploads/2024/10/Chitkala-Biradar.jpg

Load More