newsfirstkannada.com

×

ಕನ್ನಡಿಗ ಕೆ.ಎಲ್​ ರಾಹುಲ್​ ತಾಯಿಗೆ ಈ ವಿಚಾರದಲ್ಲಿ ಮಗನ ಮೇಲೆ ಬೇಸರ ಇದೆಯಂತೆ! ಅದೇನದು?

Share :

Published November 14, 2023 at 12:41pm

    ರಾಹುಲ್​ ತಾಯಿಗೆ ಮಗನ ಮೇಲೆ ಅಸಮಾಧಾನವೊಂದಿದೆ

    ಏನೇ ಹೇಳಿದ್ರು ಅವರು ಈ ವಿಚಾರಕ್ಕೆ ಇಂಪ್ರೆಸ್​​ ಆಗಲ್ವಂತೆ

    ಅಮ್ಮನಿಗಿದ್ದ ಅಸಮಾಧಾನದ ಬಗ್ಗೆ ಹೇಳಿಕೊಂಡಿದ್ದ ಕನ್ನಡಿಗ

ಮಗ ಟೀಮ್​ ಇಂಡಿಯಾ ಪರ ಒಂದೇ ಪಂದ್ಯವನ್ನಾಡಿದ್ರೆ ಸಾಕು ಅದು ಇಡೀ ಕುಟುಂಬಕ್ಕೆ ಹೆಮ್ಮೆಯ ವಿಚಾರ. ಆದರೆ, 4 ವರ್ಷ ಟೀಮ್​ ಇಂಡಿಯಾ ಪರ ಆಡಿದ್ರೂ, ಕೆ.ಎಲ್​ ರಾಹುಲ್ ತಾಯಿಗೆ ಸಮಾಧಾನನೇ ಇರಲಿಲ್ವಂತೆ. ಇಷ್ಟೇ ಅಲ್ಲ, ಈಗಲೂ ರಾಹುಲ್​ ವಿಚಾರದಲ್ಲಿ ಒಂದು ಕಾರಣಕ್ಕೆ ಬೇಸರ ಇದೆಯಂತೆ. ಅದ್ಯಾಕೆ ಗೊತ್ತಾ? ಈ ​ಸ್ಟೋರಿ ಓದಿ.

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ಕೆ.ಎಲ್​ ರಾಹುಲ್ ಕರ್ನಾಟಕದ ಹೆಮ್ಮೆ. ಕೆ.ಎಲ್​ ರಾಹುಲ್​ ಆಟಕ್ಕೆ ಅಭಿಮಾನಿಗಳ ಬಳಗವೇ ಬೆಳೆದಿದೆ. ಟೀಮ್​ ಇಂಡಿಯಾ ಪರ ಮಹತ್ವದ ಪಾತ್ರ ನಿರ್ವಹಿಸ್ತಾ ಇರೋ ರಾಹುಲ್​ನ ಇಡೀ ದೇಶವೇ ಕೊಂಡಾಡ್ತಿದೆ. ಕೋಟಿ-ಕೋಟಿ ಹಣವನ್ನೂ ಸಂಪಾದಿಸಿದ್ದಾರೆ. ಆದರೆ, ರಾಹುಲ್​ ತಾಯಿಗೆ ಮಾತ್ರ ಒಂದು ವಿಚಾರದಲ್ಲಿ ಅಸಮಾಧಾನ ಇದ್ಯಂತೆ.

ನನ್ನ ಅಮ್ಮ ಈಗಲೂ ನಾನು ಡಿಗ್ರಿ ತೆಗೆದುಕೊಂಡಿಲ್ಲ ಅಂತಾ ಅಸಮಾಧಾನ ಹೊಂದಿದ್ದಾರೆ. ಲಾಕ್​ಡೌನ್​ನಲ್ಲಿ ಕೂಡ ನೀನು ಈಗ ಯಾಕೆ 30 ಪೇಪರ್​ಗಳನ್ನ ಮುಗಿಸಬಾರು. ಈಗ್ಯಾಕೆ ನೀನು ಕೂತು ಬರೆದು ಡಿಗ್ರಿ ತೆಗೆದುಕೊಳ್ಳಬಾರು ಅಂತಾ ಕೇಳಿದ್ರು. ನಾನು ಅಮ್ಮನಿಗೆ ಕೇಳಿದ್ದೆ ನಿನಗೆ ನಾನು ಏನು ಮಾಡಬೇಕು ಅಂತಾ ಇದೆ. ನಾನು ಕ್ರಿಕೆಟ್​ ಆಡ್ತಿದ್ದೀನಿ. ಜೀವನದಲ್ಲೂ ಚೆನ್ನಾಗಿದ್ದೀನಿ. ಈಗ 30 ಪೇಪರ್​ನ ನಾನು ಬರೆಯಬೇಕಾ ಅಂತಾ. ಅದಕ್ಕೆ ಅವರು ಯಾಕೆ ಬರೆಯಬಾರದು ಅಂತಲೇ ಕೇಳಿದ್ರು. ಅವರು ಇಂಪ್ರೆಸ್​ ಆಗಿಲ್ಲ. ಐಪಿಎಲ್​ ನಾಯಕತ್ವ, ಟೀಮ್ ಇಂಡಿಯಾ ನಾಯಕತ್ವ ಯಾವುದಕ್ಕೂ.

ಅವರು ಖುಷಿಯಾಗಿದ್ದು ನನಗೆ ಆರ್​ಬಿಐನಲ್ಲಿ ಕೆಲಸ ಸಿಕ್ಕಾಗ. ಕೇಂದ್ರ ಸರ್ಕಾರದ ಕೆಲಸ ಸಿಗ್ತು ಆಗ ಅವರು ಖುಷಿ ಆದ್ರು. ನಾನು ಅದಾಗಲೇ 4 ವರ್ಷ ಟೀಮ್​ ಇಂಡಿಯಾ ಪರ ಆಡಿದ್ದೆ. ಆದ್ರೆ, ಅದು ಅವರನ್ನ ಖುಷಿ ಪಡಿಸಿರಲಿಲ್ಲ. ಆದ್ರೆ, ಇದು ಅವರನ್ನ ಖುಷಿ ಪಡಿಸಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗ ಕೆ.ಎಲ್​ ರಾಹುಲ್​ ತಾಯಿಗೆ ಈ ವಿಚಾರದಲ್ಲಿ ಮಗನ ಮೇಲೆ ಬೇಸರ ಇದೆಯಂತೆ! ಅದೇನದು?

https://newsfirstlive.com/wp-content/uploads/2023/11/K-L-Rahul.jpg

Load More