ಅಮರನಾಥದಲ್ಲಿ ಯಾತ್ರಾರ್ಥಿಗಳ ಪರದಾಟ
ದೇವರ ದರ್ಶನಕ್ಕೆ ತೆರಳಿದ್ದ ಕನ್ನಡಿಗರಿಗೆ ಸಂಕಷ್ಟ
ಯಾತ್ರೆಗೆ ಹೋಗಿದ್ದ 80 ಕನ್ನಡಿಗರು ಫುಲ್ ಸೇಫ್!
ಶ್ರೀನಗರ: ಭೂಮಿಯ ಮೇಲಿರುವ ಕೈಲಾಸ ಅಂತಾನೇ ಕರೆಸಿಕೊಳ್ಳೋ ಪವಿತ್ರಕ್ಷೇತ್ರಗಳಾದ ಅಮರನಾಥ ಹಾಗೂ ಕೇದಾರನಾಥನ ದರ್ಶನಕ್ಕೆ ತೆರಳಿದ್ದಕ್ಕೆ 80 ಮಂದಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಯಾತ್ರೆ ಹೋಗಿದ್ದ ಕನ್ನಡಿಗರು ಭಾರಿ ಮಳೆ, ಭೂಕುಸಿತದಿಂದ ಪರದಾಟ ನಡೆಸ್ತಿದ್ದು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ.
ಅಮರ ಅಂದ್ರೆ ಚಿರಂಜೀವಿ.. ನಾಥ ಅಂದ್ರೆ ದೇವರು.. ಸುಮಾರು 5 ಸಾವಿರ ವರ್ಷಗಳಷ್ಟು ಹಳೆಯದೆಂದು ನಂಬಲಾಗಿರುವ ಗುಹೆಯೊಳಗೆ ಮಂಜಿನಗಡ್ಡೆಯೊಂದು ಶಿವಲಿಂಗದ ಆಕಾರ ಹೊಂದಿದ್ದು ಇದನ್ನು ಅಮರನಾಥ ಎಂದು ಪೂಜಿಸಲಾಗ್ತಿದೆ. ಜಮ್ಮುಕಾಶ್ಮೀರದಲ್ಲಿರೋ ವಿಶ್ವ ಪ್ರಸಿದ್ಧ ದೇಗುಲಕ್ಕೆ ಯಾತ್ರೆ ಹೋಗಿದ್ದ ಕನ್ನಡಿಗರು ಭಾರಿ ಮಳೆ, ಭೂಕುಸಿತ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹವಾಮಾನ ವೈಪರೀತ್ಯ.. ಅಮರನಾಥ ಯಾತ್ರೆ ಸ್ಥಗಿತ!
ಸುಮಾರು 3,888 ಮೀಟರ್ ಎತ್ತರದಲ್ಲಿರುವ ಅಮರನಾಥ ದೇಗುಲ ಜಮ್ಮುಕಾಶ್ಮೀರದ ಶ್ರೀನಗರದಿಂದ 141 ಕಿ.ಮೀ ದೂರದಲ್ಲಿದೆ. ಶಿವಲಿಂಗ ಇದೇ ಅವಧಿಯಲ್ಲಿ ಮಂಜುಗಡ್ಡೆಯಾಗಿ ರೂಪುಗೊಳ್ಳುವುದರಿಂದ ಅಮರನಾಥನ ವಿಶೇಷ ಶಿವಲಿಂಗ ದರ್ಶನಕ್ಕೆ ಲಕ್ಷಾಂತರ ಭಕ್ತರು ಯಾತ್ರೆ ಕೈಗೊಳ್ತಾರೆ. ಅದೇ ರೀತಿ ಈ ವರ್ಷ ಯಾತ್ರೆ ಕೈಗೊಂಡಿದ್ದ ಕನ್ನಡಿಗರು ಹವಾಮಾನ ವೈಪರೀತ್ಯದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯಾತ್ರೆ ತಂದ ಸಂಕಷ್ಟ!
ಅಮರನಾಥ ಯಾತ್ರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 80 ಮಂದಿ ತೆರಳಿದ್ದಾರೆ. ಗದಗದಿಂದ 23 ಮಂದಿ, ದಕ್ಷಿಣ ಕನ್ನಡ ಜಿಲ್ಲೆಯ 20 ಮಂದಿ, ಬೆಂಗಳೂರಿನ 17 ಮಂದಿ, ಚಿತ್ರದುರ್ಗದ 8, ರಾಯಚೂರಿನ 7 ಮಂದಿ, ಧಾರವಾಡದ ಐವರು, ಚಿಕ್ಕಮಗಳೂರಿನ ಐವರು ಹಾಗೂ ಕಲಬುರಗಿಯ ಒಂದೇ ಕುಟುಂಬದ ಐವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಅಮರನಾಥ ಯಾತ್ರೆಗೆ ಹೋಗಿದ್ದ 80 ಕನ್ನಡಿಗರು ಸೇಫ್!
ಇನ್ನು ಅಮರನಾಥನ ದರ್ಶನಕ್ಕೆ ಹೋಗಿದ್ದ ಎಲ್ಲಾ 80 ಮಂದಿ ಕನ್ನಡಿಗರು ಸೇಫ್ ಅಂತ ಹೇಳಲಾಗ್ತಿದೆ. ಜುಲೈ 4ರಂದು ದಕ್ಷಿಣ ಕನ್ನಡ ಬಂಟ್ವಾಳದಿಂದ ತೆರಳಿದ್ದ 20 ಯಾತ್ರಿಗಳು ಸಿ.ಆರ್.ಪಿಎಫ್ ಕ್ಯಾಂಪ್ನಲ್ಲಿ ಸೇಫ್ ಅಂತ ಹೇಳಲಾಗ್ತಿದೆ.
ಚಿಕ್ಕಮಗಳೂರಿನಿಂದ ಯಾತ್ರೆ ಹೊರಟಿದ್ದ ಐವರು ಸುರಕ್ಷಿತ!
ಮತ್ತೊಂದೆಡೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಐವರು ಕಾಫಿನಾಡಿಗರು ಸೇಫ್ ಆಗಿರುವ ಮಾಹಿತಿ ದೊರೆತಿದೆ. ಕಳೆದ ವಾರ ಚಿಕ್ಕಮಗಳೂರಿನಿಂದ ತೆರಳಿದ್ದ ಶ್ರೀನಿವಾಸ್, ಮಣಿ, ಭರತ್, ಚಂದ್ರಶೇಖರ್, ಮನೋಜ್ ಸೇಫ್ ಆಗಿದ್ದಾರೆ ಎನ್ನಲಾಗಿದೆ. ಸದ್ಯ ಅಮರನಾಥ ಬಳಿಯ ಶೇಷನಾಗ್ ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ.
ಅಮರನಾಥಕ್ಕೆ ಹೋಗಿದ್ದ ಕಲಬುರಗಿ ನಿವಾಸಿಗಳು ಹೈರಾಣ!
ಅಮರನಾಥಕ್ಕೆ ತೆರಳಿದ್ದ ಕಲಬುರಗಿಯ ರಾಮಚಂದ್ರರಾವ್ ಕುಟುಂಬ ಜಮ್ಮುವಿನ ಪೆಹಲ್ಗಾಂವ್ನಲ್ಲಿ ಸಿಲುಕಿದೆ. ಜುಲೈ 7ರಂದು ಯಾತ್ರೆ ಹೊರಟಿದ್ದ ಒಂದೇ ಕುಟುಂಬದ ಐವರು ಅಮರನಾಥನ ದರ್ಶನಕ್ಕೂ ಮುನ್ನವೇ ಪ್ರವಾಹ ಉಂಟಾಗಿದ್ದರಿಂದ ಸೇನಾ ಕ್ಯಾಂಪ್ನಲ್ಲಿ ಆಶ್ರಯ ಪಡೆದಿದ್ದಾರೆ.
ಯಾತ್ರಿಕರಿಗೆ ಧೈರ್ಯ ತುಂಬಿದ ಸಚಿವ ಹೆಚ್.ಕೆ ಪಾಟೀಲ್!
ಇನ್ನು ಜುಲೈ 4ರಂದು ಗದಗದಿಂದ ಹೊರಟಿದ್ದ 23 ಯಾತ್ರಿಗಳು ಜುಲೈ 7ರಂದು ಅಮರನಾಥನ ದರ್ಶನ ಪಡೆದು ವಾಪಸ್ ಬರುವಾಗ ಭಾರಿ ಮಳೆ ಹಾಗೂ ಗುಡ್ಡಕುಸಿತದಿಂದ ಸಂಪರ್ಕ ಸ್ಥಗಿತ ಆಗಿದ್ದು ಹೆಲಿಕಾಪ್ಟರ್ ಸೇವೆ ಇಲ್ಲದ ಪರದಾಟ ನಡೆಸಿದ್ದಾರೆ. ಸದ್ಯ ಅಮರನಾಥದಿಂದ 6 ಕಿ.ಮೀ ದೂರದಲ್ಲಿರುವ ಪಂಚತಾರ್ನಿ ಟೆಂಟ್ನಲ್ಲಿ ಸೇಫ್ ಆಗಿರುವ ಮಾಹಿತಿ ಇದೆ. ಸಚಿವ ಹೆಚ್.ಕೆ.ಪಾಟೀಲ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು ಧೈರ್ಯ ತುಂಬಿದ್ದಾರೆ.
ವೈಷ್ಣೋದೇವಿ ಯಾತ್ರೆಗೆ ತೆರಳಿದ್ದ ಯಾತ್ರಿಕರು ಸೇಫ್!
ಮತ್ತೊಂದೆಡೆ ಜಮ್ಮುಕಾಶ್ಮೀರದ ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದ ರಾಮನಗರದ ಮಾಗಡಿಯಿಂದ ತೆರಳಿದ್ದ 6 ಮಂದಿ ಹಾಗೂ ಬೆಂಗಳೂರಿನ 43 ಮಂದಿ ಸೇಫ್ ಆಗಿದ್ದಾರೆ ಎನ್ನಲಾಗಿದೆ. ಗುಡ್ಡಕುಸಿತದಿಂದ ಯಾತ್ರೆ ಬಂದ್ ಆಗಿದ್ದು ಸದ್ಯ ಬೇಸ್ ಕ್ಯಾಂಪ್ ತಲುಪಿರುವ ಯಾತ್ರಿಗಳು ಶ್ರೀನಗರಕ್ಕೆ ತೆರಳಿ ಮಂಗಳವಾರ ವಾಪಸ್ ಬರೋದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಅಮರನಾಥ ಯಾತ್ರೆಗೆ ಹೋಗಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸೇನಾ ಅಧಿಕಾರಿಗಳ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಕೂಡ ಸಂಪರ್ಕದಲ್ಲಿದ್ದಾರೆ.
ಕೇದಾರನಾಥ ಯಾತ್ರೆಗೆ ಹೋಗಿದ್ದ ಪ್ರವಾಸಿಗರ ಪರದಾಟ!
ಮತ್ತೊಂದೆಡೆ ಧಾರವಾಡದಿಂದ ಕೇದಾರನಾಥ ದರ್ಶನಕ್ಕೆ ಹೋಗಿದ್ದ ಐವರು ಹಿಮಾಚಲ ಪ್ರದೇಶದಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಜುಲೈ 6ರಂದು ಕೇದಾರನಾಥನ ದರ್ಶನ ಪಡೆದು ವಾಪಸ್ ಬರುವಾಗ ಭಾರಿ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಕಳೆದ 3 ದಿನಗಳಿಂದ ಖಾಸಗಿ ಟೆಂಟ್ನಲ್ಲಿ ಆಶ್ರಯ ಪಡೆದಿದ್ದಾರೆ. ಸರಿಯಾದ ಊಟ, ವಸತಿ ವ್ಯವಸ್ಥೆ ಇಲ್ಲದೇ ಚಳಿಯಲ್ಲಿ ನಡುಗುತ್ತಿದ್ದು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ.
ಒಟ್ಟಿನಲ್ಲಿ ಅಮರನಾಥ, ಕೇದಾರನಾಥ ಯಾತ್ರೆಗೆ ತೆರಳಿದ್ದ ಯಾತ್ರಿಕರನ್ನು ಸುರಕ್ಷಿತವಾಗಿ ಕರೆತರುವ ಹೊಣೆ ಸರ್ಕಾರದ ಮೇಲಿದೆ. ಯಾತ್ರೆಗೆ ತೆರಳಿರುವ ಯಾತ್ರಿಗಳ ಕುಟುಂಬಸ್ಥರು ಆತಂಕದಲ್ಲಿದ್ದು ಮಾನವೀಯ ನೆಲೆಯಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ