ಮ್ಯಾನೇಜ್ಮೆಂಟ್ ವಿರುದ್ಧ ರೊಚ್ಚಿ ಗೆದ್ದ ಕನ್ನಡಿಗರು
ಮ್ಯಾನೇಜ್ಮೆಂಟ್ಗೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಕೋಚ್
ಬದಲಾಗಬೇಕು ಮ್ಯಾನೇಜ್ಮೆಂಟ್, ಇಲ್ದಿದ್ರೆ ಕಪ್ ಕನಸೆ
ಪ್ರತಿ ಬಾರಿ ಆರ್ಸಿಬಿ ಐಪಿಎಲ್ನಿಂದ ಹೊರ ಬಿದ್ದಾಗ್ಲೂ ಈ ಸಲ ಕಪ್ ನಮ್ದೇ ಅನ್ನೋ ಅಭಿಮಾನಿಗಳು ಮುಂದಿನ ಸಲ ಕಪ್ ನಮ್ದೇ ಅಂತಿದ್ರು. ಆದ್ರೆ, ಈ ಸೀಸನ್ನಲ್ಲಿ ಅದು ಬದಲಾಗಿದೆ. ಕಪ್ಗಾಗಿ ಕಾದು ಕಾದು ಸಾಕಾದ ಅಭಿಮಾನಿಗಳ ತಾಳ್ಮೆಯ ಕಟ್ಟೆಯೊಡೆದಿದೆ. ಫ್ಯಾನ್ಸ್ ಮಾತ್ರವಲ್ಲ. ಕರ್ನಾಟಕದ ಮಾಜಿ ಕ್ರಿಕೆಟರ್ಗಳು ಕೂಡ ಆಕ್ರೋಶ ಹೊರ ಹಾಕ್ತಿದ್ದಾರೆ.
ಐಪಿಎಲ್ ಅಂದ್ರೆ ಆರ್ಸಿಬಿ, ಆರ್ಸಿಬಿ ಅಂದ್ರೆ ಎಂಟರ್ಟೈನ್ಮೆಂಟ್. ಸೋಲಲಿ ಗೆಲ್ಲಲಿ ಆರ್ಸಿಬಿ ನಮ್ ಪ್ರಾಣ, ಆರ್ಸಿಬಿನೇ ಜೀವ, 6 ಸಲ ಸೋತ್ರೂ ಆರ್ಸಿಬಿ, 60 ಸಲ ಸೋತ್ರೂ ಆರ್ಸಿಬಿ.. ಅಬ್ಬಾ..! ಒಂದಾ ಎರಡಾ ಪ್ರತಿ ಬಾರಿ ಸೀಸನ್ ಆರಂಭಕ್ಕೂ ಮುನ್ನ ಕಪ್ ನಮ್ದೇ ಅನ್ನೋ ಫ್ಯಾನ್ಸ್, ಅಂತ್ಯದಲ್ಲಿ ಹೇಳೋ ಡೈಲಾಗ್ಗಳಿವು.
ಈ ಸೀಸನ್ನಲ್ಲೂ ಅದೇ ರಾಗ, ಅದೇ ಹಾಡು..!
ಐಪಿಎಲ್ ಸೀಸನ್ 16 ಆರಂಭಕ್ಕೂ ಮುನ್ನ ಆರ್ಸಿಬಿ ಅಭಿಮಾನಿಗಳ ಅಬ್ಬರ ಮುಗಿಲುಮುಟ್ಟಿತ್ತು. ಈ ಸಲ ಕಪ್ ನಮ್ದೇ ಆನ್ನೋ ಮಾತು ಸೋಷಿಯಲ್ ಮೀಡಿಯಾಗಳಿಂದ ಹಿಡಿದು, ಚಿನ್ನಸ್ವಾಮಿ ಅಂಗಳದವರೆಗೆ ಮಾರ್ಧನಿಸಿತ್ತು.. ಆದ್ರೆ, ಅಂತ್ಯದಲ್ಲಿ ಕಪ್ ನಮ್ದೇ ಅನ್ನೋ ಕನಸು ನುಚ್ಚು ನೂರಾಯ್ತು.
ಮ್ಯಾನೇಜ್ಮೆಂಟ್ ವಿರುದ್ಧ ರೊಚ್ಚಿ ಗೆದ್ದ ಕನ್ನಡಿಗರು.!
ಒಂದಲ್ಲ ಎರಡಲ್ಲ.. ಇದು ಸೇರಿ 16 ಸೀಸನ್ ಕಳೀತು.. ಕಪ್ ಮಾತ್ರ ನಮ್ಮದಾಗಲಿಲ್ಲ. ಕೊನೆ ಪಕ್ಷ ತಂಡದಲ್ಲೂ ಕನ್ನಡಿಗರಿಗೆ ತಂಡದಲ್ಲಿ ಸ್ಥಾನ ಸಿಗಲ್ಲ.. ಅಪ್ಪಿ ತಪ್ಪಿ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಕ್ರೂ, ಒಂದು ಫ್ಲಾಫ್ ಶೋ ನೀಡಿದ್ರೆ ಗೇಟ್ಪಾಸ್ ಫಿಕ್ಸ್. ಅದೇ ಬೇರೆ ರಾಜ್ಯದವಾದ್ರೆ, ನೆಕ್ಸ್ಟ್ ಲೆವೆಲ್ಗೆ ಬ್ಯಾಕ್ ಮಾಡ್ತಾರೆ. ಅನುಜ್ ರಾವತ್, ಮಹಿಪಾಲ್ ಲೋಮ್ರರ್, ಶಹಬಾಜ್ ಅಹಮ್ಮದ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ. ಇವರೆಲ್ಲಾ ಕಡಿದು ಗುಡ್ಡೆ ಹಾಕಿದ್ದು ಏನಿಲ್ಲ.. ಆದ್ರೂ, ಆರ್ಸಿಬಿ ಟ್ಯಾಲೆಂಟ್ ಸ್ಕೌಟ್ ಹಾಗೂ ಮ್ಯಾನೇಜ್ಮೆಂಟ್ಗೆ ಇವರೆಲ್ಲಾ ಭವಿಷ್ಯದ ಲೆಜೆಂಡ್ಸ್.
ಮ್ಯಾನೇಜ್ಮೆಂಟ್ಗೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಕೋಚ್.!
ಕರ್ನಾಟಕದ ಆಟಗಾರರು ಮಾತ್ರವಲ್ಲ. ಸಪೋರ್ಟ್ ಸ್ಟಾಫ್ಗಳ ಆಯ್ಕೆ ವಿಚಾರದಲ್ಲೂ ಕನ್ನಡಿಗರನ್ನ ಫ್ರಾಂಚೈಸಿ ಮೂಲೆಗುಂಪು ಮಾಡ್ತಿದೆ. ಇಷ್ಟು ದಿನ ಫ್ಯಾನ್ಸ್ ಮಾತ್ರ, ಫ್ರಾಂಚೈಸಿಯ ಈ ನಡೆಯನ್ನ ಪ್ರಶ್ನೆ ಮಾಡ್ತಿದ್ರು. ಇದೀಗ ಕರ್ನಾಟಕದ ಕ್ರಿಕೆಟಿಗರು ಕೂಡ ಏನ್ ನಡೀತಾ ಇದೆ ಅಂತಾ ಬಹಿರಂಗವಾಗಿ ಕೇಳ್ತಿದ್ದಾರೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಇದೇ ಆರ್ಸಿಬಿಯ ಮಾಜಿ ಅಸಿಸ್ಟೆಂಟ್ ಕೋಚ್, ಕನ್ನಡಿಗ ವಿಜಯ್ ಭಾರದ್ವಾಜ್ ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಕೆಂಡ ಕಾರಿದ್ದಾರೆ.
ಆರ್ಸಿಬಿ ಇನ್ಸೈಡರ್ನಲ್ಲಿ ಕುಂಬ್ಳೆ ಕಿಡಿನುಡಿ.!
ತಮಿಳುನಾಡಿನವರು ಆರ್ಸಿಬಿ ಟೀಮ್ನಲ್ಲಿ ಕೆಲಸ ಮಾಡಬಾರ್ದು ಅಂತೇನಿಲ್ಲ.. ಹಾಗಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಾ ಹೆಸರಿಟ್ಟುಕೊಂಡು, ಕನ್ನಡಿಗರನ್ನ ಸಂಪೂರ್ಣವಾಗಿ ಮೂಲೆಗುಂಪು ಮಾಡೋದು ಎಷ್ಟು ಸರಿ..? ಮಾಜಿ ಕ್ರಿಕೆಟಿಗ, ಆರ್ಸಿಬಿ ಮಾಜಿ ಕ್ಯಾಪ್ಟನ್ ಅನಿಲ್ ಕುಂಬ್ಳೆ ಈ ಬಗ್ಗೆ ಆರ್ಸಿಬಿಯ ಇನ್ಸೈಡರ್ ಶೋನಲ್ಲೇ ನೇರಾನೇರವಾಗಿ ಮಾತನಾಡಿದ್ದಾರೆ.
ಕಾದು ಕಾದು ಸಾಕಾಯ್ತು, ಫ್ಯಾನ್ಸ್ಗೂ ಸುಸ್ತಾಯ್ತು.!
ಫ್ಯಾನ್ಸ್ ಮುಖದ ಮೇಲಿರೋ ನಿರಾಸೆ, ಹತಾಶೆಯೇ ಎಲ್ಲವನ್ನ ಹೇಳುತ್ತೆ.. ಈ ಸೀಸನ್, ನೆಕ್ಸ್ಟ್ ಸೀಸನ್ ಅಂತಾ ಕಾದು ಕಾದು ಅಭಿಮಾನಿಗಳು ರೋಸಿ ಹೋಗಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಅಭಿಮಾನಿಗಳ ಅಪರಿಮಿತ ಅಭಿಮಾನ ಆರ್ಸಿಬಿಗೆ ಬಂಡವಾಳವಾಗಿಬಿಟ್ಟಿದ್ಯಾ.? ಅನ್ನೋ ಪ್ರಶ್ನೆ ಹುಟ್ಟದೆ ಇರಲ್ಲ..
ಬದಲಾಗಬೇಕು ಮ್ಯಾನೇಜ್ಮೆಂಟ್, ಇಲ್ದಿದ್ರೆ ಕಪ್ ಕನಸೆ.!
ಆರ್ಸಿಬಿಯಲ್ಲಿ ಕನ್ನಡಿಗಿರ ಕಡೆಗಣನೆ ಅತಿರೇಕದ ಹಂತ ತಲುಪಿದ್ದು, ಓನರ್ಶಿಪ್ ಬದಲಾದ ಮೇಲೆ.. ಸದ್ಯ ಇರೋ ಮ್ಯಾನೇಜ್ಮೆಂಟ್ ಬಂದ ಮೇಲಂತೂ ಮೆಗಾ ಹರಾಜಿನಲ್ಲಿ 3ರಿಂದ 4 ಸ್ಟಾರ್ಗಳನ್ನ ಕೋಟಿ ಕೋಟಿ ಸುರಿ ಖರೀದಿಸೋದು, ಸ್ಪಾನ್ಸರ್ಶಿಪ್ ಡೀಲ್ಗಳನ್ನ ಸೆಳೆದುಕೊಳ್ಳೋದಷ್ಟೇ ಕೆಲಸವಾಗಿಬಿಟ್ಟಿದೆ. ಈ ಇನ್ಕಮ್ ಲೆಕ್ಕಾಚಾರದಲ್ಲಿ ಕ್ರಿಕೆಟ್ ಆಡೋದು ನಮ್ಮ ತಂಡದ ಕೆಲಸ ಅನ್ನೋದೆ ಮರೆತಂತಾಗಿಬಿಟ್ಟಿದೆ. ಈ ವಿಚಾರದಲ್ಲಿ ಮುಂದಾದ್ರೂ ಎಚ್ಚೆತ್ತು ಕೊಳ್ಳಬೇಕು.. ಇಲ್ಲದಿದ್ರೆ, ಸತತ ನಿರಾಸೆ ಮೂಡಿಸಿದ್ರೂ, ಬೆಂಬಲಿಸಿ, ಪ್ರೀತಿಸ್ತಾ ಇರೋ ಫ್ಯಾನ್ಸ್ ತಿರುಗಿಬೀಳೋದ್ರಲ್ಲಿ ಅನುಮಾನವೇ ಬೇಡ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ