ಮೂವರು ಸಹೋದರರಿಂದ ಅತ್ತಿಗೆ ಕೊಲೆ ಮಾಡಿ ವಿಕೃತಿ
ಕೊಲೆಗಡುಕರ ಪ್ಲಾನ್ ಉಲ್ಟಾ ಮಾಡಿದ ಓಲಾ ಡ್ರೈವರ್
ಡ್ರೈವರ್ಗೆ ವಿಧ್ವಂಸಕ ಕೃತ್ಯದ ಸುಳಿವು ಕೊಟ್ಟಿದ್ದು ಒಂದು ಚೀಲ
ಇತ್ತೀಚೆಗೆ ಬೆಂಗಳೂರಲ್ಲಿ ಖಾಸಗಿ ಸಂಸ್ಥೆಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಹತ್ಯೆ ಪ್ರಕಣ ಭಾರೀ ಸುದ್ದಿಯಾಗಿತ್ತು. ಕೊಲೆ ಆರೋಪಿ ಫೆಲಿಕ್ಸ್ ಎಂಬಾತ, ತಾನು ಮಾಡಿದ್ದ ಹೀನ ಕೃತ್ಯದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡು ವಿಕೃತಿ ಮೆರೆದಿದ್ದ. ಮಾತ್ರವಲ್ಲ, ಆತನ ಭಂಡತನಕ್ಕೆ ಜನ ಬೆಚ್ಚಿಬಿದ್ದಿದ್ದರು.
ಇದೇ ರೀತಿಯ ಭಿನ್ನ ಪ್ರಕರಣವೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಕಾನ್ಪುರ ಪೊಲೀಸರು ಮೂವರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ತೀವ್ರ ವಿಚಾರಣೆ ನಡೆಸಿದ್ದಾರೆ.
ಏನಿದು ಪ್ರಕರಣ..?
ಬರೋಬ್ಬರಿ 40 ಕೋಟಿ ಆಸ್ತಿಗಾಗಿ ಕುಸುಮಾ ಕುಮಾರಿ ಎಂಬ ಅತ್ತಿಗೆಯನ್ನೇ ಆಕೆಯ ಮೂವರು ಬಾವಂದಿರು ಜುಲೈ 11 ರಂದು ಕೊಲೆ ಮಾಡಿದ್ದರು. ಅತ್ತಿಗೆಯನ್ನು ಕೊಲೆ ಮಾಡಿದ್ದ ಸಹೋದರರಿಗೆ, ಆಕೆಯ ಮೃತದೇಹವನ್ನು ಮಣ್ಣು ಮಾಡೋದು ದೊಡ್ಡ ಚಾಲೆಂಜ್ ಆಗುತ್ತೆ. ಕೊನೆಗೂ ಆಕೆಯ ಶವವನ್ನು ನಿರ್ಜನ ಪ್ರದೇಶದಲ್ಲಿ ಬೀಸಾಡಲು ನಿರ್ಧರಿಸುತ್ತಾರೆ. ಆದರೆ ಇವರ ಬಳಿ ಮೃತದೇಹ ಸಾಗಿಸಲು ಯಾವುದೇ ಸ್ವಂತ ವಾಹನ ಇರುವುದಿಲ್ಲ.
ಹೀಗಾಗಿ ಇಬ್ಬರು ಓಲಾ ಕ್ಯಾಬ್ ಬುಕ್ ಮಾಡುತ್ತಾರೆ. ಅದರಂತೆ, ಅವರು ಹೇಳಿದ್ದ ಏರಿಯಾಗೆ ಓಲಾ ಬಂದು ನಿಲ್ಲುತ್ತದೆ. ಈ ವೇಳೆ ಕ್ಯಾಬ್ನಲ್ಲಿ ಕೂರುವ ಮೊದಲು ಡಿಕ್ಕಿ ಓಪನ್ ಮಾಡುವಂತೆ ಡ್ರೈವರ್ಗೆ ಹೇಳ್ತಾರೆ. ಡಿಕ್ಕಿ ಓಪನ್ ಮಾಡಿದ ಡ್ರೈವರ್, ಏನು ಹಾಕುತ್ತಿದ್ದಾರೆ ಎಂದು ನೋಡಲು ಹತ್ತಿರಕ್ಕೆ ಬಂದಿದ್ದಾನೆ.
ಮುಂದೇನಾಯ್ತು..?
ಈ ವೇಳೆ ಒಂದು ಚೀಲದಿಂದ ರಕ್ತ ಸೋರುತ್ತಿರೋದು ಡ್ರೈವರ್ನ ಕಣ್ಣಿಗೆ ಬಿದ್ದಿದೆ. ರಕ್ತದ ರೀತಿಯಲ್ಲಿ ಕಾಣ್ತಿದೆ. ನಾನು ನಿಮ್ಮ ಟ್ರಿಪ್ಗೆ ಬರಲ್ಲ. ಅದು ಏನು ಎಂದು ಪ್ರಶ್ನೆ ಮಾಡಿದ್ದಾನೆ. ಆಗ ಅವರು ಡ್ರೈವರ್ಗೆ ಜೊತೆ ವಾಗ್ವಾದಕ್ಕೆ ಮುಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಕೊನೆಗೆ ಡ್ರೈವರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ತನಿಖೆ ಮಾಡಿದ್ದಾರೆ. ತೀವ್ರ ವಿಚಾರಣೆ ನಡೆಸಿದಾಗ ರಕ್ತ ಸೋರುತ್ತಿದ್ದ ಚೀಲದಲ್ಲಿ ಕುಸುಮಾಳ ಮೃತದೇಹ ಪತ್ತೆಯಾಗಿದೆ. ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಓಲಾ ಡ್ರೈವರ್ ಮನೋಜ್ನಿಂದಾಗಿ ಕೊಲೆಗಡುಕರ ಪ್ಲಾನ್ ಯಶಸ್ವಿಯಾಗಲಿಲ್ಲ. ಪೊಲೀಸರು ಕುಸಮಾಳ ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪೋಸ್ಟ್-ಮಾರ್ಟಮ್ ಮಾಡಿಸಿದ್ದಾರೆ. ಮೂವರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ