newsfirstkannada.com

×

ಕಾನ್ಪುರ ಪಿಚ್​​ನ ಮಣ್ಣಿನಲ್ಲಿ ವಿಶೇಷ ಗುಣ; ಏನಿದು ಉನ್ನಾವೋ ಕಪ್ಪು ಮಣ್ಣು..?

Share :

Published September 27, 2024 at 1:06pm

    ಪಿಚ್ ಬಗ್ಗೆ ವಿಶ್ವ ಕ್ರಿಕೆಟ್​ನಲ್ಲಿ ಹೆಚ್ಚಿದ ಕುತೂಹಲ

    ಗಮನ ಸೆಳೆದಿದ್ದೇಕೆ ಕಾನ್ಪುರ ಆ ಕಪ್ಪು ಮಣ್ಣು..?

    ಎನಿದು ಉನ್ನಾವೋ ಮಣ್ಣು..? ಚರ್ಚೆ ಯಾಕೆ..?

ಕಾನ್ಪುರ ಗ್ರೀನ್ ಪಾರ್ಕ್ ಮೈದಾನದಲ್ಲಿ 24ನೇ ಟೆಸ್ಟ್​ ಪಂದ್ಯ ನಡೆಯುತ್ತಿದೆ. ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಗೊಂಡಿದೆ.

ಕಾನ್ಪುರ ಟೆಸ್ಟ್​ ಪಂದ್ಯದತ್ತ ಎಲ್ಲರ ಚಿತ್ತ
ಕಾನ್ಪುರದ ಗ್ರೀನ್​ ಪಾರ್ಕ್ ಮೈದಾನವು ಕಪ್ಪು ಮಣ್ಣಿನ ಪಿಚ್​ನಿಂದ ಕೂಡಿದೆ. ಈ ಪಿಚ್​​ಗೆ ಬಳಸಿರೋದು ಕಪ್ಪು ಮಣ್ಣು ಮಾತ್ರ. ಇದು ವಿಶ್ವ ಕ್ರಿಕೆಟ್ ಲೋಕದ ಹಾಟ್ ಡಿಬೇಟ್​ಗೆ ಕಾರಣವಾಗಿದೆ. ಜೊತೆಗೆ ಕುತೂಹಲವನ್ನೂ ಹೆಚ್ಚಿಸಿದೆ.

ಏನಿದು ಉನ್ನಾವೋ ಮಣ್ಣು?
ಕಾನ್ಪುರ ಗ್ರೀನ್​ ಪಾರ್ಕ್ ಪಿಚ್​ ಮಣ್ಣು ವಿಶೇಷತೆಯಿಂದ ಕೂಡಿರುವ ಜೇಡಿ ಮಣ್ಣಾಗಿದೆ. ಕಾನ್ಪುರದಿಂದ 20 ಕಿಲೋ ಮೀಟರ್​ ದೂರದ ಉನ್ನಾವೋ ಜಿಲ್ಲೆಯ ಗ್ರಾಮವೊಂದರ ಕೆರೆಯ ಜೇಡಿ ಮಣ್ಣು ತಂದು ತಯಾರಿಸಲಾಗಿದೆ. ಇದೇ ಕಾರಣಕ್ಕೆ ಗ್ರೀನ್ ಪಾರ್ಕ್​ನಲ್ಲಿ ಟೀಮ್ ಸ್ಟ್ರಾಟರ್ಜಿ ಆನ್​ಫೀಲ್ಡ್​ನಲ್ಲಿ ಉಲ್ಟಾ ಪಲ್ಟಾ ಆಗುತ್ತಾ ಎಂಬ ಪ್ರಶ್ನೆ ಹುಟ್ಟಿದೆ.

ಇದನ್ನೂ ಓದಿ:ನೋವು ರಹಿತ ಸಾವು ನೀಡುತ್ತೆ ಈ ಮಷಿನ್.. ಕಣ್ಣು ಮಿಟುಕಿಸುವಷ್ಟರಲ್ಲೇ ಹೋಗ್ತದೆ ಜೀವ, ಗಾಬರಿಗೆ ಬಿದ್ದ ಜನ!

ಉನ್ನಾವೋ ಮಣ್ಣಿನ ರಹಸ್ಯ ಏನು?

  • ಈ ಕೊಳದ ಮಣ್ಣಲ್ಲಿ ಕಪ್ಪು ಮಣ್ಣಿನ ಲವಣಾಂಶ ಹೆಚ್ಚು
  • ಕೊನೆ ತನಕ ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ
  • ಪಂದ್ಯ ಸಾಗಿದಂತೆ ಸ್ಪಿನ್ನರ್ಸ್​ಗೆ ಹೆಚ್ಚು ನೆರವಾಗುತ್ತೆ
  • ದಿನದ ಆರಂಭದ ಒಂದು ಗಂಟೆ ವೇಗಿಗಳಿಗೆ ಸಹಾಯ
  • ಮೊದಲ 2 ದಿನ ಬ್ಯಾಟರ್​​ಗಳಿಗೂ ಅಡ್ವಾಂಟೇಜ್​
  • ಪಿಚ್ ಒಣಗಿದಂತೆ ಪಿಚ್​ನ ಮೇಲ್ಮೈ ಗಟ್ಟಿಗೊಳ್ಳುತ್ತೆ

ಈ ಮಣ್ಣನ್ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪರೀಕ್ಷಿಸಿದೆ. ಇದಕ್ಕೆ ಇದೊಂದು ಯುನಿಕ್ ಮಣ್ಣು ಎಂದೇ ಸರ್ಟೀಫಿಕೆಟ್ ನೀಡಿದೆ. ಈ ಕಪ್ಪು ಮಣ್ಣಿನಿಂದ ಟೀಮ್ ಮ್ಯಾನೇಜ್​ಮೆಂಟ್ ಆ್ಯಂಡ್ ಆಟಗಾರರ ಸ್ಟ್ರಾಟರ್ಜಿ ಉಲ್ಟಾಪಲ್ಟಾ ಆಗುತ್ತಾ ಅನ್ನೋ ಆತಂಕ ಹುಟ್ಟಿದೆ.

ಇದನ್ನೂ ಓದಿ:IND vs BAN ಟಾಸ್​ ಗೆದ್ದ ರೋಹಿತ್ ಶರ್ಮಾ.. ಪ್ಲೇಯಿಂಗ್-11ನಲ್ಲಿ ಬದಲಾವಣೆ ಆಗಿದ್ಯಾ?

IITಯಿಂದ ಪರೀಕ್ಷಿಸಲಾದ ಮಣ್ಣು!
ನಾವು ಈ ಜೇಡಿಮಣ್ಣನ್ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪರೀಕ್ಷಿಸಿದ್ದೇವೆ. ಇದು ಆ ಗ್ರಾಮದ ಕೆರೆಯ ಬಳಿ ಕಂಡುಬರುವ ವಿಶೇಷ ಕಪ್ಪು ಮಣ್ಣಾಗಿದೆ. ವರ್ಷಗಳಿಂದ ಗ್ರಾಮದಿಂದ ಕಪ್ಪು ಮಣ್ಣು ತರುತ್ತಿದ್ದೇವೆ. ಇದಕ್ಕೆ ಇದೊಂದು ಯುನಿಕ್ ಮಣ್ಣು ಎಂದು ಸರ್ಟೀಫಿಕೆಟ್ ಸಿಕ್ಕಿದೆ-UPCA ಅಧಿಕಾರಿ

ಬ್ಯಾಟರ್​ಗಳಿಗೆ ಅಗ್ನಿಪರೀಕ್ಷೆ
ಕಾನ್ಪುರ ಟೆಸ್ಟ್​ನಲ್ಲಿ ಮಳೆಯೂ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ಮೊದಲ ಮೂರು ದಿನ ಮಳೆ ಬರುವ ಸಾಧ್ಯತೆಯಿದ್ದು, ಮಳೆ ಬಂದ್ರೆ ಪಿಚ್ ಒದ್ದೆಯಾಗಲಿದೆ. ಕೊಳದ ಮಣ್ಣಿಗೆ ಸಹಜವಾಗೇ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿರುತ್ತೆ. ಹೀಗಾಗಿ ಲೋ ಬೌನ್ಸ್​ನಿಂದ ಈ ಪಿಚ್​​ ಕೂಡಿರುತ್ತೆ. ಆಗ ಬ್ಯಾಟ್ಸ್​ಮನ್​ಗಳ ತಾಳ್ಮೆ ಪರೀಕ್ಷೆ ನಡೆಯಲಿದೆ. ಒಟ್ನಲ್ಲಿ, ಕಾನ್ಪುರದ ಪಿಚ್ ಭಾರೀ ಕ್ಯುರಿಯಾಸಿಟಿಯನ್ನ ಹುಟ್ಟುಹಾಕಿದೆ. ಕೆಲವೇ ಕ್ಷಣಗಳಲ್ಲಿ ಆರಂಭವಾಗೋ ಟೆಸ್ಟ್​ನಲ್ಲಿ ಪಿಚ್​ನ ಮರ್ಮ ಏನು ಅಂತಾ ರಿವೀಲ್​ ಆಗಲಿದೆ.

ಇದನ್ನೂಓದಿ:ಟೀಂ ಇಂಡಿಯಾದಲ್ಲಿ ಮತ್ತೊಂದು ಚರ್ಚೆ.. ಇಷ್ಟಕ್ಕೆಲ್ಲ ಕಾರಣ ಏನು ಗೊತ್ತಾ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕಾನ್ಪುರ ಪಿಚ್​​ನ ಮಣ್ಣಿನಲ್ಲಿ ವಿಶೇಷ ಗುಣ; ಏನಿದು ಉನ್ನಾವೋ ಕಪ್ಪು ಮಣ್ಣು..?

https://newsfirstlive.com/wp-content/uploads/2024/09/KANPUR-PITCH.jpg

Load More