ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಕಾಂತಾರಾ‘ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ
ನಾಯಂಡಹಳ್ಳಿ ನಂದಿ ಗ್ರೌಂಡ್ನಲ್ಲಿ ಅದ್ಧೂರಿ ಬರ್ತ್ ಡೇ ಸೆಲೆಬ್ರೇಷನ್
ಕಾಂತಾರ ಹೀರೋ ರಿಷಬ್‌ಗೆ ಹರಿದು ಬಂದ ಶುಭಾಶಯಗಳ ಮಹಾಪೂರ
ಕಾಂತಾರ ಸಿನಿಮಾದ ಮೂಲಕ ಸೆನ್ಷೇಷನಲ್ ಕ್ರಿಯೇಟ್ ಮಾಡಿರೋ ಡಿವೈನ್ ಸ್ಟಾರ್ ನಟ ರಿಷಬ್ ಶೆಟ್ಟಿ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಕಾಂತಾರ ಗೆಲುವಿನ ನಂತರ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ನಟ ರಿಷಬ್ ಶೆಟ್ಟಿ ಅವರ ಅಭಿಮಾನಿಗಳು ಸಹ ಫುಲ್ ಖುಷಿಯಲ್ಲಿದ್ದಾರೆ. ಇದೀಗ ನಟ ತಮ್ಮ ಅಭಿಮಾನಿಗಳ ಜೊತೆಗೆ ಭರ್ಜರಿಯಾಗಿ ಬರ್ತ್ ಡೇ ಸೆಲೆಬ್ರೇಶನ್ ಮಾಡಿಕೊಳ್ಳುತ್ತಿದ್ದಾರೆ.
ಇದೀಗ ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿ ಗ್ರೌಂಡ್ನಲ್ಲಿ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಬರ್ತ್ ಡೇಗೆ ಬಂದ ಅಭಿಮಾನಿಗಳಿಗಾಗಿ ಭರ್ಜರಿ ಭೋಜನ ಸಿದ್ದಗೊಂಡಿದೆ. ಇನ್ನು ನಟ ರಿಷಬ್ ಶೆಟ್ಟಿ ಅವರನ್ನು ಹುಲಿ ಕುಣಿತದ ಮೂಲಕ ವೇದಿಕೆಗೆ ವೆಲ್ ಕಮ್ ಮಾಡಲಾಯಿತು. ಮಂಗಳೂರು ಮತ್ತು ಬೆಂಗಳೂರು ಶೈಲಿಯ ಊಟವನ್ನು ತಯಾರಿಸಲಾಗಿದೆ. ಇಡೀ ಹುಟ್ಟು ಹಬ್ಬದ ನೇತೃತ್ವವನ್ನು ರಿಷಬ್ ಗೆಳೆಯ, ನಟ ಪ್ರಮೋದ್ ಶೆಟ್ಟಿ ವಹಿಸಿಕೊಂಡಿದ್ದಾರೆ. ಇನ್ನು ನೆಚ್ಚಿನ ನಟನ ಹುಟ್ಟು ಹಬ್ಬದ ನಿಮಿತ್ತ ಅಭಿಮಾನಿಗಳು ಕಟೌಟ್ ಕೂಡ ನಿರ್ಮಿಸಿದ್ದಾರೆ. 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳ ಸಮೂಖದಲ್ಲಿ ಕೇಕ್ ಕತ್ತರಿಸುವ ಮೂಲಕ ಡಿವೈನ್ ಸ್ಟಾರ್ ನಟ ರಿಷಬ್ ಶೆಟ್ಟಿ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
ಇನ್ನು, ನಟ ರಿಷಬ್ ಶೆಟ್ಟಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ನೆಚ್ಚಿನ ನಟನಿಗೆ ವಿಶ್ ಮಾಡುತ್ತಿದ್ದಾರೆ. ಇನ್ನು ಕಾಂತಾರ ಹೀರೋಗೆ ಶಿವನ ಲೀಲಾ ನಟಿ ಸಪ್ತಮಿ ಗೌಡ ಅವರು ವಿಶ್ ಮಾಡಿದ್ದಾರೆ. ಫೋಟೋ ಜೊತೆಗೆ ನೀವು ಮತ್ತೆ ಮತ್ತೆ ಮೇಲಿರಲಿ. ಹೆಚ್ಚಿನ ಯಶಸ್ಸು ನಿಮಗೆ ತಲುಪಲಿ, ದೃಢನಿರ್ಧಾರ ಮತ್ತು ಸಿನಿಮಾದ ಬಗ್ಗೆ ನಿಮ್ಮಲ್ಲಿರುವ ಉತ್ಸಾಹದಿಂದ ಎಲ್ಲಾ ರೀತಿಯ ದಾಖಲೆಗಳನ್ನು ಮಾಡಿ. ಸಂತೋಷ, ಪ್ರೀತಿ ಮತ್ತು ಶಾಂತಿಯಿಂದ ತುಂಬಿ ಹೆಚ್ಚು ಯಶಸ್ವಿ ವರ್ಷವನ್ನು ಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಕಾಂತಾರ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಿಷಬ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ