newsfirstkannada.com

ರಿಷಬ್ ಶೆಟ್ಟಿ ಮಗಳು RCBಯ ದೊಡ್ಡ ಫ್ಯಾನ್; ‘ಅಭಿಮಾನದ ತೊದಲು ನುಡಿ’ ಕೇಳೋದೇ ಚಂದ -Cute Video

Share :

19-05-2023

    RCB ಫ್ಯಾನ್‌ ಆದ ರಿಷಬ್ ಶೆಟ್ಟಿ ಮಗಳು

    ಅಪ್ಪನನ್ನೇ ಅನುಕರಿಸಿದ ಪುಟಾಣಿ ರಾಧ್ಯಾ

    ವಿರಾಟ್ ಕೊಹ್ಲಿ ಶತಕದ ಸೆಲಬ್ರೇಷನ್ ನೋಡಿ

ಕೋಟ್ಯಾಂತರ ಅಭಿಮಾನಿಗಳ ಹೃದಯ ಕದ್ದಿರುವ ಆರ್​ಸಿಬಿ ತಂಡಕ್ಕೆ ಅಭಿಮಾನಿಗಳ ಸಾಗರ ಮತ್ತೆ ಮತ್ತೆ ಸೇರುತ್ತಲೇ ಇದೆ. ಅಭಿಮಾನಿಗಳ ದೊಡ್ಡ ಲೋಕವನ್ನೇ ಸೃಷ್ಟಿಸಿರುವ ನಮ್ಮ ಹೆಮ್ಮೆಯ ಆರ್​​ಸಿಬಿ ಬಳಗಕ್ಕೆ ಪುಟಾಣಿ ಕಂದಮ್ಮ ಒಬ್ಬಳು ಸೇರ್ಪಡೆಯಾಗಿದ್ದಾಳೆ.

ಆಕೆ ಬೇರೇ ಯಾರೂ ಅಲ್ಲ, ‘ಕಾಂತಾರ’ ಚಿತ್ರದ ಮೂಲ ಇಡೀ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದ ರಿಷಬ್ ಶೆಟ್ಟಿಯ ಮುದ್ದಿನ ಮಗಳು. ಹೌದು ಮಗಳು ರಾಧ್ಯಾ ಶೆಟ್ಟಿ ವಿಡಿಯೋ ಒಂದನ್ನು ರಿಷಬ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ, ರಾಧ್ಯಾ ಶೆಟ್ಟಿ ಸೋಫಾ ಮೇಲೆ ಕೂತಿದ್ದಾಳೆ. ಮನೆಯ ಸದಸ್ಯರೊಬ್ಬರು ಆರ್​ಸಿಬಿಗೆ ಜೈ ಎಂದು ಹೇಳುತ್ತಾರೆ. ಆಗ ರಾಧ್ಯಾ, ‘ಜೈ’ ಎನ್ನುತ್ತಾಳೆ. ಇನ್ನೊಂದು ದೃಶ್ಯದಲ್ಲಿ ರಿಷಬ್ ಮಗಳನ್ನು ಎತ್ತಿಕೊಂಡು ಆರ್​​ಸಿಬಿಗೆ ಎನ್ನುತ್ತಾರೆ. ಆಕೆ ಅಪ್ಪನನ್ನು ಅನುಕರಿಸಿ ಜೈ ಎಂದು ತೊದಲುತ್ತಾಳೆ. ಈ ವಿಡಿಯೋ ತುಂಬಾ ಮುದ್ದಾಗಿದ್ದು, ನೋಡುಗರನ್ನು ಇಂಪ್ರೆಸ್​ ಮಾಡ್ತಿದೆ.

ಅಂದ್ಹಾಗೆ ನಿನ್ನೆ ಆರ್​ಸಿಬಿ ಸನ್​ರೈಸರ್ಸ್​ ಹೈದ್ರಾಬಾದ್​ ವಿರುದ್ಧ ಸೆಣಸಾಣಕ್ಕೆ ಇಳಿದಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಹೈದ್ರಾಬಾದ್ ತಂಡವು, 186 ರನ್​​ಗಳನ್ನು ಕಲೆ ಹಾಕಿತ್ತು. 187 ರನ್​ಗಳ ಗುರಿಯನ್ನು ಬೆನ್ನು ಹತ್ತಿದ್ದ ಆರ್​ಸಿಬಿ, ವಿರಾಟ್ ಕೊಹ್ಲಿಯ ಸ್ಫೋಟಕ ಶತಕದ ನೆರವಿನಿಂದ ಬಿಗ್ ವಿಕ್ಟರಿ ಪಡೆಯಿತು. ಈ ಮೂಲಕ ಪ್ಲೇ-ಆಫ್ ಕನಸನ್ನು ಆರ್​ಸಿಬಿ ಇನ್ನೂ ಜೀವಂತವಾಗಿರಿಸಿಕೊಂಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ರಿಷಬ್ ಶೆಟ್ಟಿ ಮಗಳು RCBಯ ದೊಡ್ಡ ಫ್ಯಾನ್; ‘ಅಭಿಮಾನದ ತೊದಲು ನುಡಿ’ ಕೇಳೋದೇ ಚಂದ -Cute Video

https://newsfirstlive.com/wp-content/uploads/2023/05/Rishab-Shetty-1.jpg

Load More