newsfirstkannada.com

Elephant death: ಕೊನೆಗೂ ಫಲಿಸಲಿಲ್ಲ ಪ್ರಾರ್ಥನೆ; ನಿತ್ರಾಣಗೊಂಡು ಬಿದ್ದಿದ್ದ ಕಾಡಾನೆಗಳ ರಾಣಿ ಕಾಂತಿ ಇನ್ನಿಲ್ಲ

Share :

01-07-2023

    ಕಾಂತಿ ಎಂಬ ಹೆಣ್ಣಾನೆ ಸಕಲೇಶಪುರದಲ್ಲಿ ಸಾವು

    ನಿತ್ರಾಣಗೊಂಡಿದ್ದ ಕಾಡಾನೆ ಮೇಲೇಳಲು ಆಗದೆ ಸಾವು

    21 ಕಾಡಾನೆಗಳ ಗುಂಪಿನ ಲೀಡರ್ ಆಗಿದ್ದ ಕಾಂತಿ ಸಾವು

ಹಾಸನ: 25 ವರ್ಷ ಪ್ರಾಯದ ಕಾಂತಿ ಎಂಬ ಹೆಣ್ಣಾನೆ ಸಾವನ್ನಪ್ಪಿದೆ. ನಿತ್ರಾಣಗೊಂಡಿದ್ದ ಕಾಡಾನೆ ಮೇಲೇಳಲು ಸಾಧ್ಯವಾಗದೆ ನರಳಾಡಿದ್ದ ಉಸಿರುಚೆಲ್ಲಿದೆ.

ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದ ಐಬಿಸಿ ತೋಟದ ಕೆರೆಯಲ್ಲಿ ಕಾಡಾನೆ ಕಾಂತಿ ಮೃತಪಟ್ಟಿದೆ. ಕಳೆದ ರಾತ್ರಿ ಕಾಫಿ ತೋಟದಲ್ಲಿ ನೀರು ಕುಡಿಯಲು ಬಂದಿದ್ದ ವೇಳೆ ಕಾಂತಿ ಕುಸಿದು ಬಿದ್ದಿದ್ದಳು.

ಕಾಡಾನೆ ನಿತ್ರಾಣಗೊಂಡಿದ್ದ ವಿಷಯ ತಿಳಿದು ಇಂದು ಬೆಳಿಗ್ಗೆ ವೈದ್ಯರ ತಂಡ ಚಿಕಿತ್ಸೆ ನೀಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸ್ಥಳದಲ್ಲೇ ಇದ್ದು ಕಾಡಾನೆ ಕಾಂತಿಯನ್ನು ನೋಡಿಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾಂತಿ ಸಾವನ್ನಪ್ಪಿದೆ.

ಅಂದಹಾಗೆಯೇ ಕಾಂತಿ 21 ಕಾಡಾನೆಗಳ ಗುಂಪಿನ ಲೀಡರ್ ಆಗಿದ್ದಳು. ಕಾಡಾನೆ ಗುಂಪಿನ ಚಲನವಲನ ಗಮನಿಸಲು ಕಾಂತಿಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Elephant death: ಕೊನೆಗೂ ಫಲಿಸಲಿಲ್ಲ ಪ್ರಾರ್ಥನೆ; ನಿತ್ರಾಣಗೊಂಡು ಬಿದ್ದಿದ್ದ ಕಾಡಾನೆಗಳ ರಾಣಿ ಕಾಂತಿ ಇನ್ನಿಲ್ಲ

https://newsfirstlive.com/wp-content/uploads/2023/07/Kanti-1.jpg

Load More