newsfirstkannada.com

ಇವರು ಆಧುನಿಕ ಶ್ರವಣ ಕುಮಾರ.. ಒಂದು ಕಾವಡಿಯಲ್ಲಿ ತಾಯಿ, ಇನ್ನೊಂದರಲ್ಲಿ ಗಂಗಾಜಲ ಹೊತ್ತು ಸಾಗಿದ ಶಿವಭಕ್ತ..!

Share :

05-07-2023

    ದೇಶದಲ್ಲಿ ‘ಕನ್ವರ್ ಯಾತ್ರೆ’ಯ ಸದ್ದು ಜೋರು

    ಹರಿದ್ವಾರದಲ್ಲಿ ಕಂಡ ಆಧುನಿಕ ಶ್ರವಣಕುಮಾರ

    ಕನ್ವರ್ ಯಾತ್ರೆ ಅಂದರೆ ಏನು..?

2023ನೇ ಸಾಲಿನ ಪವಿತ್ರ ‘ಕನ್ವರ್ ಯಾತ್ರೆ’ ಶುರುವಾಗಿದ್ದು, ಕೋಟಿ ಕೋಟಿ ಶಿವನ ಆರಾಧಾಕರು ಶಿವನಾಮದಲ್ಲಿ ಮೊಳಗಿದ್ದಾರೆ. ಜುಲೈ 15ರವರೆಗೆ ಈ ‘ಕನ್ವರ್ ಯಾತ್ರೆ’ ನಡೆಯಲಿದ್ದು, ಶಿವಭಕ್ತರು ದೂರದ ಊರುಗಳಿಂದ ಶಿವನಾಮ ಪಠಿಸುತ್ತ ಹರಿದ್ವಾರ, ಗಂಗೋತ್ರಿ, ಸುಲ್ತಾನ್​ಗಂಜ್​ನತ್ತ ಹೊರಟಿದ್ದಾರೆ.

ಈ ಶಿವಾರಾಧನೆಗೆ ಸಂಬಂಧಿಸಿದ ಕೆಲವು ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಅದರಂತೆ ಓರ್ವ ಭಕ್ತ ಆಧುನಿಕ ಶ್ರವಣಕುಮಾರನಂತೆ ತನ್ನ ತಾಯಿಯನ್ನು ಕಾವಡಿ ಮೇಲೆ ಕೂರಿಸಿಕೊಂಡು ಶಿವನಿದ್ದಲ್ಲಿಗೆ ಹೊರಟಿದ್ದಾನೆ. ಒಂದು ತಕ್ಕಡಿಯಲ್ಲಿ ತಾಯಿಯನ್ನು, ಇನ್ನೊಂದರಲ್ಲಿ ಗಂಗಾಜಲವನ್ನು ಇಟ್ಟುಕೊಂಡು ಹೊರಟಿದ್ದಾರೆ.

ಈ ಆಧುನಿಕ ಶ್ರವಣಕುಮಾರನನ್ನು ಕಂಡು ಜನ ಅಚ್ಚರಿಗೆ ಒಳಗಾಗಿದ್ದಾರೆ. ಮಾತ್ರವಲ್ಲ, ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ. ಶಿವನ ಭಕ್ತರ ವಾರ್ಷಿಕ ತೀರ್ಥಯಾತ್ರೆಯೇ ಕನ್ವರ್ ಯಾತ್ರೆ. ಹರಿದ್ವಾರದಿಂದ ಈ ಯಾತ್ರೆಯು ಪ್ರಾರಂಭಗೊಳ್ಳುತ್ತದೆ. ಲಕ್ಷಾಂತರ ಯಾತ್ರಿಕರು ಗಂಗಾ ನದಿಯಿಂದ ಪವಿತ್ರ ನೀರನ್ನು ತರುತ್ತಾರೆ. ಮತ್ತು ನೂರಾರು ಮೈಲುಗಳವರೆಗೆ ಹೆಗಲ ಮೇಲೆ ಹೊತ್ತುಕೊಂಡು ತಮ್ಮ ಸ್ಥಳೀಯ ಶಿವ ದೇವಾಲಯಗಳಲ್ಲಿ ಇದನ್ನು ಅರ್ಪಣೆ ಮಾಡ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇವರು ಆಧುನಿಕ ಶ್ರವಣ ಕುಮಾರ.. ಒಂದು ಕಾವಡಿಯಲ್ಲಿ ತಾಯಿ, ಇನ್ನೊಂದರಲ್ಲಿ ಗಂಗಾಜಲ ಹೊತ್ತು ಸಾಗಿದ ಶಿವಭಕ್ತ..!

https://newsfirstlive.com/wp-content/uploads/2023/07/Kanwar-Yatra.jpg

Load More