newsfirstkannada.com

ಕೇದಾರನಾಥನ ಸನ್ನಿಧಿಯಲ್ಲಿ ‘ಕನ್ಯಾಕುಮಾರಿ’ ಹೀರೋ.. ಹೆಂಗಿದೆ ಗೊತ್ತಾ ‘ಹರ ಹರ ಮಹಾದೇವ್’ ಜೋಶ್..? Video

Share :

06-07-2023

  ಪುಣ್ಯ ಕ್ಷೇತ್ರವಾದ ಕೇದಾರನಾಥನ ದರ್ಶನ ಪಡೆದ ಕಿರುತೆರೆ ನಟ

  ಪರಭಾಷೆಗಳ ಧಾರಾವಾಹಿಯಲ್ಲಿ ಸಖತ್​​ ಬ್ಯುಸಿಯಾದ ನಟ

  ಫ್ರೆಂಡ್ಸ್​ ಜೊತೆ ಜಾಲಿ ಟ್ರೆಕ್ಕಿಂಗ್ ಮಾಡಿದ ಕನ್ಯಾಕುಮಾರಿ ಹೀರೋ

ಕೈಲಾಸ ಪರ್ವತದ ನಂತರ ಕೇದಾರನಾಥವನ್ನು ಶಿವನ ಎರಡನೇ ವಾಸಸ್ಥಾನವೆಂದು ಕರೆಯಲಾಗುತ್ತದೆ. ಇಂಥ ಪುಣ್ಯ ಕ್ಷೇತ್ರಗಳಿಗೆ ಜೀವನದಲ್ಲಿ ಒಮ್ಮೆ ಆದರೂ ಯಾತ್ರೆ ಕೈಗೊಳ್ಳಬೇಕು ಎಂಬ ಇಚ್ಛೆ ಹಲವರಿಗೆ ಇದ್ದೇ ಇರುತ್ತೆ. ಸಾಯುವ ಮುನ್ನ ಕಾಶಿ ವಿಶ್ವನಾಥ, ಬದರಿನಾಥ ಹಾಗೂ ಕೇದಾರನಾಥನ ದರ್ಶನ ಮಾಡಲೇಬೇಕು ಎಂಬ ಮಹದಾಸೆ ಇಟ್ಟುಕೊಂಡಿರುತ್ತಾರೆ. ಇದೀಗ ಪುಣ್ಯ ಕ್ಷೇತ್ರವಾದ ಕೇದಾರನಾಥ ದೇವಸ್ಥಾನಕ್ಕೆ ನಟ ಯಶವಂತ್​​ ಹೋಗಿದ್ದಾರೆ.

ಕನ್ನಡ ಕಿರುತೆರೆಯ ಮೋಸ್ಟ್​ ಹ್ಯಾಂಡ್ಸಮ್ ನಟರಲ್ಲಿ ಕನ್ಯಾಕುಮಾರಿ ಧಾರಾವಾಹಿಯ ನಾಯಕ ನಟ ಕೂಡ ಒಬ್ಬರು. ಸದ್ಯ ಕನ್ಯಾಕುಮಾರಿ ಧಾರಾವಾಹಿಯ ಮುಕ್ತಾಯದ ಬಳಿಕ ಕನ್ನಡ ಕಿರುತೆರೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಇದರ ಮಧ್ಯೆ ಪರಭಾಷೆಗಳ ಧಾರಾವಾಹಿಯಲ್ಲಿ ನಟ ಯಶವಂತ್​ ಗೌಡ ಸಕ್ರೀಯಗೊಂಡಿದ್ದಾರೆ.

ಶೂಟಿಂಗ್​ನಿಂದ ಬ್ರೇಕ್​ ತೆಗೆದುಗೊಂಡ ನಟ ಯಶವಂತ್​ ನೇರವಾಗಿ ಶಿವನನ್ನು ಕಾಣಲು ಕೇದಾರನಾಥಕ್ಕೆ ವಿಸಿಟ್ ಮಾಡಿದ್ದಾರೆ. ಒಳ್ಳೆಯ ವಾತಾವರಣ. ಫ್ರೆಂಡ್ಸ್​ ಜೊತೆ ಜಾಲಿ ಟ್ರೆಕ್ಕಿಂಗ್ ಮಾಡಿದ್ದಾರೆ ನಟ ಯಶವಂತ್​.

ಹೌದು, ಗಂಗಾ ತೀರದಲ್ಲಿ ಆರತಿ ಉತ್ಸವ ನೋಡಿಕೊಂಡು ಟ್ರೆಕ್ಕಿಂಗ್ ಶುರು ಮಾಡಿದ್ದಾರೆ. ಪ್ರತಿಯೊಬ್ಬರ ಡ್ರೀಮ್ ಡೆಸ್ಟಿನೇಷನ್​ ಕೇದಾರನಾಥ ದೇವಸ್ಥಾನಕ್ಕೆ ನಟ ಯಶವಂತ್ ಭೇಟಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಕೇದರನಾಥ ಶಿವನನ್ನು ಕಂಡ ಖುಷಿಯಲ್ಲಿದ್ದಾರೆ ಯಶವಂತ್. ಆ ಜಗದಿಂದ ಮನಸೋ ಇಚ್ಛೆಯಿಂದ ವಾಪಸ್ ಆಗಿದ್ದಾರೆ. ಕೇದರನಾಥ ದೇವಸ್ಥಾನದಲ್ಲಿ ಕ್ಲಿಕ್ಕಿಸಿಕೊಂಡ ಅದ್ಭುತವಾದ ಫೋಟೋ ಹಾಗೂ ವಿಡಿಯೋಗಳನ್ನು ಸಹ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕೇದಾರನಾಥನ ಸನ್ನಿಧಿಯಲ್ಲಿ ‘ಕನ್ಯಾಕುಮಾರಿ’ ಹೀರೋ.. ಹೆಂಗಿದೆ ಗೊತ್ತಾ ‘ಹರ ಹರ ಮಹಾದೇವ್’ ಜೋಶ್..? Video

https://newsfirstlive.com/wp-content/uploads/2023/07/yashavanth.jpg

Load More