newsfirstkannada.com

ಭೀಕರ ಬೈಕ್​ ಅಪಘಾತ.. ಸ್ಥಳದಲ್ಲೇ ಕರಾಟೆ ಪಟು ಕಿರಣ್​ ರಾಜ್ ಸಾವು

Share :

22-10-2023

    ಸ್ನೇಹಿತನಿಗೆ ಬೈಕ್ ನೀಡಲು ಮೈಸೂರಿಗೆ ಹೊರಟಿದ್ದ ಯುವಕ!

    ನಂಜನಗೂಡು ತಾಲೂಕಿನ ನೇರಳೆ ಗ್ರಾಮದ ನಿವಾಸಿ ಈತ!

    ಮಂಡಕಳ್ಳಿ ವಿಮಾನ ನಿಲ್ದಾಣ ಬಳಿ ಭೀಕರ ಅಪಘಾತ

ಮೈಸೂರು: ಡಿವೈಡರ್​​​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕರಾಟೆ ಪಟು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಮಂಡಕಳ್ಳಿ ವಿಮಾನ ನಿಲ್ದಾಣ ಬಳಿ ನಡೆದಿದೆ. ಕಿರಣ್ ರಾಜ್ (22) ಮೃತ ದುರ್ದೈವಿ.

ಮೃತ ಕರಾಟೆ ಪಟು ನಂಜನಗೂಡು ತಾಲೂಕಿನ ನೇರಳೆ ಗ್ರಾಮದ ನಿವಾಸಿ. ಸ್ನೇಹಿತನಿಗೆ ಬೈಕ್ ನೀಡಲು ಮೈಸೂರಿಗೆ ಹೊರಟಿದ್ದ. ಇದೇ ವೇಳೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ತೀವ್ರ ರಕ್ತಸ್ರಾವದಿಂದ ಕಿರಣ್ ರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಮೈಸೂರು ದಕ್ಷಿಣ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಬೈಕ್​ ಅಪಘಾತ.. ಸ್ಥಳದಲ್ಲೇ ಕರಾಟೆ ಪಟು ಕಿರಣ್​ ರಾಜ್ ಸಾವು

https://newsfirstlive.com/wp-content/uploads/2023/10/death-2023-10-22T205836.636.jpg

Load More