60 ದಿನಗಳಿಂತ ಹೆಚ್ಚು ದಿನಗಳ ಕಾಲ ನಡೆದ ಯುದ್ಧ
1999ರಲ್ಲಿ ಕುತಂತ್ರಿ ಪಾಕಿಸ್ತಾನವನ್ನು ಸೆದೆಬಡಿದ ದಿನ
ಟೈಗರ್ ಹಿಲ್ ಪ್ರದೇಶವನ್ನು ಮರಳಿ ಪಡೆದ ಹೆಮ್ಮೆಯ ದಿನ
ಇಂದು ಜುಲೈ 26. ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವುದರ ಜೊತೆಗೆ ನೆನಪಲ್ಲಿ ಉಳಿಯುವ ದಿನವಾಗಿದೆ. ಕಾರಣ ಕಾರ್ಗಿಲ್ ವಿಜಯ ದಿವಸವನ್ನು ಇಂದು ಆಚರಿಸಲಾಗುತ್ತಿದೆ.
1999ರಲ್ಲಿ ಕುತಂತ್ರಿ ಪಾಕಿಸ್ತಾನವನ್ನು ಸೆದೆಬಡಿದ ಭಾರತೀಯ ಸೈನಿಕರು ದೇಶಕ್ಕೆ ವಿಜಯವನ್ನು ತಂದು ಕೊಟ್ಟ ದಿನವಾಗಿದೆ. ಹಾಗಾಗಿ ಈ ದಿನವನ್ನು ಭಾರತದ ಮೂಲೆ ಮೂಲೆಗಳಲ್ಲೂ ಆಚರಿಸಲಾಗುತ್ತಿದೆ. ಅಂದಹಾಗೆಯೇ ಭಾರತವು 24ನೇ ಕಾರ್ಗಿಲ್ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ಇತಿಹಾಸ
1999ರಲ್ಲಿ ನಡೆದ ಕಾರ್ಗಿಲ್ ಯುದ್ಧವು ಜಮ್ಮು ಮತ್ತು ಕಾಶ್ಮೀರ ಕಾರ್ಗಿಲ್ ಜಿಲ್ಲೆಯಲ್ಲಿ ನಡೆಯುತ್ತದೆ. ಪಾಕಿಸ್ತಾನವು ಕುತಂತ್ರಿ ಬುದ್ಧಿಯ ಜೊತೆಗೆ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯನ್ನು ದಾಡಿ ಭಾರತದತ್ತ ನುಸುಳುತ್ತದೆ. ಈ ವೇಳೆ ಭಾರತೀಯ ಸೈನಿಕರು ಹೋರಾಡಿ ಪಾಕಿಸ್ತಾನವನ್ನು ಸೆದೆಬಡಿಯುತ್ತದೆ. ಆಪರೇಷನ್ ವಿಜಯ್ ಅಡಿಯಲ್ಲಿ ಟೈಗರ್ ಹಿಲ್ ಪ್ರದೇಶವನ್ನು ಮರಳಿ ಪಡೆಯುತ್ತೇವೆ. ಅಂದಹಾಗೆಯೇ ಈ ಯುದ್ಧದಲ್ಲಿ 527 ಸೈನಿಕರು ದೇಶಕ್ಕಾಗಿ ಪ್ರಾಣತೆತ್ತಿದ್ದಾರೆ. 60 ದಿನಗಳಿಂತ ಹೆಚ್ಚು ದಿನಗಳ ಕಾಲ ಯುದ್ಧ ನಡೆದು ಕೊನೆಗೆ ಜುಲೈ 26ರಂದು ಭಾರತವು ವಿಜಯಶಾಲಿಯಾಗುತ್ತದೆ.
ಕಾರ್ಗಿಲ್ ವಿಜಯ್ ದಿನ
ಇಂದು ಕಾರ್ಗಿಲ್ ವಿಜಯದ ದಿನವನ್ನು ಸ್ಮರಿಸಿಕೊಂಡರು ಸಹ ಇದರ ಹಿಂದೆ ಸಾಕಷ್ಟು ಸಾವು ನೋವಿದೆ. ಭಾರತದ ಅನೇಕ ಸೈನಿಕರು ಕಾರ್ಗಿಲ್ಗಾಗಿ ಹೋರಾಡಿ ಹತರಾದವರು ಇದ್ದಾರೆ. ಅಂದಹಾಗೆಯೇ ಪ್ರತಿ ವರ್ಷದಂತೆ ಇಂದು ಕೂಡ ಕಾರ್ಗಿಲ್ ವಿಜಯದ ದಿನವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪ್ರಧಾನ ಮಂತ್ರಿ ಇಂಡಿಯಾ ಗೇಟ್ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ.
ಟೋಲೋಲಿಂಗ್ ಬೆಟ್ಟದ ತಪ್ಪಲಿನಲ್ಲಿ ಡ್ರಾಸ್ ಕಾರ್ಗಿಲ್ ಎಂಬ ಯುದ್ಧ ಸ್ಮಾರಕವಿದೆ. ಯುದ್ಧದ ಸಮಯದಲ್ಲಿ ಮಡಿದ ವೀರ ಸೈನಿಕರಿಗಾಗಿ ಈ ಸ್ಮಾರಕ ನಿರ್ಮಿಸಲಾಗಿದೆ.
ವೀರ ಸೈನಿಕರನ್ನು ನೆನಪಿಸಲೇಬೇಕು
ಕಾರ್ಗಿಲ್ ಯುದ್ಧದಲ್ಲಿ 527 ಸೈನಿಕರು ಸಾವನ್ನಪ್ಪಿದರೆ, ಕೆಲವರಿಗೆ ಗಾಯಗಳಾಗಿವೆ. ಆದರೆ ಈ ಯುದ್ಧದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಎಂಬ ಮಹಾನ್ ಒಬ್ಬರನ್ನು ಕಳೆದುಕೊಳ್ಳಬೇಕಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ