newsfirstkannada.com

×

ಕಿಸ್ಸಿಂಗ್ ಸೀನ್​ಗಾಗಿ 47 ಬಾರಿ ಟೇಕ್​ ತೆಗೆದುಕೊಂಡ ನಟಿ ಕರಿಷ್ಮಾ ಕಪೂರ್; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು

Share :

Published July 25, 2023 at 6:19am

    ನಟಿ ಮೌನಿ ರಾಯ್​ ಆಸ್ಪತ್ರೆಯಲ್ಲಿ ದಾಖಲಾದ ಫೋಟೋ ವೈರಲ್!

    ವಿಶೇಷವಾದ ಉದ್ದಿಯಾನ ಬಂಧ ಆಸನವನ್ನ ಮಾಡಿದ ನಟಿ ನಿಶ್ವಿಕಾ

    ಬಾಕ್ಸಾಫೀಸ್​ನಲ್ಲಿ ಕಮಾಲ್ ಮಾಡಿದ ಆನಂದ್ ದೇವರಕೊಂಡ ಬೇಬಿ ಚಿತ್ರ

KGF​ ನಟಿ ಮೌನಿ ರಾಯ್​ಗೆ ಏನಾಯ್ತು?

ಇತ್ತೀಚೆಗಷ್ಟೇ ಪಾಸ್​ಪೋರ್ಟ್ ಮರೆತು ಏರ್​ಪೋರ್ಟ್​ಗೆ ಹೋಗಿ ಸುದ್ದಿಯಾಗಿದ್ದ ನಟಿ ಮೌನಿ ರಾಯ್​ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್ ಆಗಿದೆ. ಕಳೆದ 9 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆಜಿಎಫ್​ ಖ್ಯಾತಿಯ ಮೌನಿ ರಾಯ್​ ಈಗ ಡಿಸ್ಚಾರ್ಜ್ ಆಗಿದ್ದಾರಂತೆ. ಈ ವಿಷಯವನ್ನ ಖುದ್ದು ಮೌನಿ ರಾಯ್ ಹಂಚಿಕೊಂಡಿದ್ದಾರೆ. ಅದ್ರೆ, ಮೌನಿ ರಾಯ್​ಗೆ ಏನಾಗಿದೆ? ಯಾವ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನುವುದರ ಬಗ್ಗೆ ಬಹಿರಂಗವಾಗಿಲ್ಲ.

ಕಿಸ್ಸಿಂಗ್ ಸೀನ್​ಗಾಗಿ 47 ಟೇಕ್​ ಆಗಿತ್ತು

ಆಮಿರ್ ಖಾನ್ ಜೊತೆ ಕಿಸ್ಸಿಂಗ್ ಸೀನ್​ನಲ್ಲಿ ನಟಿಸುವಾಗ 47 ಟೇಕ್ ಆಗಿತ್ತು ಎಂದು ನಟಿ ಕರಿಷ್ಮಾ ಕಪೂರ್ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಕಿಸ್ ಸೀನ್ ಬಗ್ಗೆ ಮಾತಾಡಿರುವ ಕರೀಷ್ಮಾ ಕಪೂರ್, ರಾಜಾ ಹಿಂದೂಸ್ತಾನಿ ಸಿನಿಮಾದಲ್ಲಿ ಶೂಟಿಂಗ್ ಊಟಿಯಲ್ಲಿ ನಡೆಯುವಾಗ ಒಂದು ಕಿಸ್ಸಿಂಗ್ ಸೀನ್ ಮಾಡಬೇಕಿತ್ತು. ಚಳಿಗಾಲವಾಗಿದ್ದರಿಂದ ಆ ಸೀನ್​ ಸರಿಯಾಗಿ ಬರುತ್ತಿರಲಿಲ್ಲ, ಹಾಗಾಗಿ ಈ ಸೀನ್​ನ​ ಫೈನಲ್ ಮಾಡೋಕೆ ಬರೋಬ್ಬರಿ 47 ಟೇಕ್‌ ತೆಗೆದುಕೊಳ್ಳಬೇಕಾಯಿತು. ಈ ಸೀನ್​ ವೇಳೆ ಸಾಕಷ್ಟು ತೊಂದರೆನೂ ಆಯ್ತು ಎಂದು ಹೇಳಿಕೊಂಡಿದ್ದಾರೆ.

ದೇಶಾದ್ಯಂತ ಕಮಾಲ್ ಮಾಡ್ತಿರುವ ‘ಬೇಬಿ’

ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ಬೇಬಿ ಚಿತ್ರ ಬಾಕ್ಸಾಫೀಸ್​ನಲ್ಲಿ ಕಮಾಲ್ ಮಾಡ್ತಿದೆ. ಜುಲೈ 14ಕ್ಕೆ ತೆರೆಕಂಡಿದ್ದ ಬೇಬಿ ಸಿನಿಮಾ 10 ದಿನದಲ್ಲಿ 60 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆಯಂತೆ. ಕರ್ನಾಟಕದಲ್ಲೂ ಬೇಬಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗಳಿಕೆಯಲ್ಲೂ ದಾಖಲೆ ಬರೆದಿದೆ ಎನ್ನಲಾಗುತ್ತಿದೆ.

ಸೂರ್ಯ ಅಭಿಮಾನಿ ಸಾವು

ತಮಿಳು ಚಿತ್ರರಂಗದ ನಟ ಸೂರ್ಯ ಅವರ ಹುಟ್ಟುಹಬ್ಬದ ಹಿನ್ನೆಲೆ ಬ್ಯಾನರ್‌ ಕಟ್ಟುತ್ತಿದ್ದ ವೇಳೆ ವಿದ್ಯುತ್‌ ಸ್ಪರ್ಶಿಸಿ ಇಬ್ಬರು ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಬ್ಯಾನರ್‌ ಕಟ್ಟುತ್ತಿದ್ದ ವೇಳೆ ಫ್ಲೆಕ್ಸ್‌ನ ಕಬ್ಬಿಣದ ರಾಡ್‌ ವಿದ್ಯುತ್‌ ತಂತಿಗೆ ತಗುಲಿ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಕ್ಕಾ ವೆಂಕಟೇಶ್‌ ಮತ್ತು ಪೋಲೂರಿ ಸಾಯಿ ಎಂಬ ಇಬ್ಬರು ಅಭಿಮಾನಿಗಳು ನರಸರಾವ್‌ಪೇಟೆಯ ಖಾಸಗಿ ಪದವಿ ಕಾಲೇಜಿನಲ್ಲಿ 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ವರದಿಯಾಗಿದೆ.

ನಿಶ್ವಿಕಾ ನಾಯ್ಡು ಯೋಗದ ವಿಡಿಯೋ

ಡ್ಯಾನ್ಸ್​ ಮತ್ತು ಆಕ್ಟಿಂಗ್​ನಿಂದ ಹೆಚ್ಚು ಮೋಡಿ ಮಾಡಿರುವ ನಿಶ್ವಿಕಾ ನಾಯ್ಡು ಈಗ ಯೋಗಭ್ಯಾಸದ ವಿಡಿಯೋ ಶೇರ್ ಮಾಡಿ ಸದ್ದು ಮಾಡ್ತಿದ್ದಾರೆ. ಯೋಗಾಸನದ ಬಹಳ ಅಪರೂಪ ಹಾಗೂ ವಿಶೇಷವಾದ ಉದ್ದಿಯಾನ ಬಂಧ ಆಸನವನ್ನ ಮಾಡಿರುವ ನಿಶ್ವಿಕಾ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಉದ್ದಿಯಾನ ಬಂಧ ಆಸನ ಮಾಡೋಕೆ ಸೂಕ್ತ ಗುರುವಿನ ಮಾರ್ಗದರ್ಶನ ಬೇಕಾಗುತ್ತದೆ. ಅದನ್ನ ನಿರಂತರ ಅಭ್ಯಾಸ ಮಾಡಿದಾಗಲೇ ಅದು ಸಾಧ್ಯವಾಗುತ್ತದೆ. ಇಂಥ ಆಸನವನ್ನ ನಿಶ್ವಿಕಾ ಮಾಡಿದ್ದು ಗಮನ ಸೆಳೆಯುತ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕಿಸ್ಸಿಂಗ್ ಸೀನ್​ಗಾಗಿ 47 ಬಾರಿ ಟೇಕ್​ ತೆಗೆದುಕೊಂಡ ನಟಿ ಕರಿಷ್ಮಾ ಕಪೂರ್; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು

https://newsfirstlive.com/wp-content/uploads/2023/07/top-5-5-2.jpg

Load More