newsfirstkannada.com

APMC ಕಾಯ್ದೆ ತಿದ್ದುಪಡಿ ರದ್ದು ಮಾಡಿದ CM ಸಿದ್ದರಾಮಯ್ಯ; ಇದರಿಂದ ಎಷ್ಟು ಕೋಟಿ ರೂಪಾಯಿ ನಷ್ಟ ಆಗಿತ್ತು..?

Share :

07-07-2023

    ಬಿಜೆಪಿ ಸರ್ಕಾರದ ತಿದ್ದುಪಡಿ ಕಾಯ್ದೆಗೆ ಸಿದ್ದರಾಮಯ್ಯ ಬ್ರೇಕ್

    ರೈತರಿಗೆ ನಷ್ಟವಾಗಿದ್ದರಿಂದ ಕಾಯ್ದೆ ರದ್ದು ಮಾಡಿದ ಸರ್ಕಾರ

    ಮತ್ತೆ ರೈತರ APMC ಮಾರುಕಟ್ಟೆಗಳು ರಾರಾಜಿಸಲಿವೆ..!

ವಿಧಾನಸಭೆ: ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ರದ್ದು ಮಾಡುವುದಾಗಿ ಬಜೆಟ್​ ವೇಳೆ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ APMC ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ APMC ಮಾರುಕಟ್ಟೆಯನ್ನು ದುರ್ಬಲಗೊಳಿಸಿತ್ತು. ಇದರಿಂದ ಎಪಿಎಂಸಿಗಳ ಮೇಲೆ ಅವಲಂಬಿತರಾಗಿದ್ದ ಲಕ್ಷಾಂತರ ರೈತರು ನಷ್ಟ ಅನುಭವಿಸಿದ್ದರು. ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ 2018-19ರಲ್ಲಿ ಇಡೀ ರಾಜ್ಯದ 167 ಕೃಷಿ ಉತ್ಪನ್ನ ಮಾರುಕಟ್ಟೆಗಳ ಒಟ್ಟು ಆದಾಯ 570 ರಿಂದ 600 ಕೋಟಿ ರೂಪಾಯಿಗಳಿತ್ತು. ಇದು 2022-2023ರಲ್ಲಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದರಿಂದ ಕೇವಲ 193 ಕೋಟಿ ರೂಪಾಯಿಗಳಿಗೆ ಕುಸಿದಿದೆ. ಹೀಗಾಗಿ 407 ಕೋಟಿ ರೂ. ಆದಾಯ ಕುಸಿತವಾಗಿತ್ತು.

ಅಲ್ಲದೇ ಕಾಯ್ದೆ ರದ್ದು ಬಳಿಕ ಮುಕ್ತ ಮಾರುಕಟ್ಟೆಯಲ್ಲಿ ಖಾಸಗಿ ಸಂಸ್ಥೆಗಳು ರೈತರನ್ನು ವಂಚಿಸಿವೆ ಎಂದು ಹೇಳಲಾಗಿದೆ. ಹೀಗಾಗಿ ರೈತರಿಗೆ ಅನುಕೂಲವಾಗಲೆಂದು ರೈತರ ಹಿತ ರಕ್ಷಣೆ ಮಾಡಲು ಕಾಂಗ್ರೆಸ್​ ನೇತೃತ್ವದ ಸರ್ಕಾರವು ರೈತ ವಿರೋಧಿ ಕಾಯ್ದೆಯಾದ APMC ಆ್ಯಕ್ಟ್​ ಅನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ ಎಂದು ಬಜೆಟ್​ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

APMC ಕಾಯ್ದೆ ತಿದ್ದುಪಡಿ ರದ್ದು ಮಾಡಿದ CM ಸಿದ್ದರಾಮಯ್ಯ; ಇದರಿಂದ ಎಷ್ಟು ಕೋಟಿ ರೂಪಾಯಿ ನಷ್ಟ ಆಗಿತ್ತು..?

https://newsfirstlive.com/wp-content/uploads/2023/07/CM_SIDDARAMAIAH_BUDGET_APMC.jpg

Load More