ಕೆ.ಎನ್. ರಾಜಣ್ಣರ ಮಾತಿಗೆ ‘ಕೈ’ ಪಾಳಯದಲ್ಲಿ ಕಂಪನ
ರಾಜಣ್ಣ ಮಾತಲ್ಲಿ ತಪ್ಪಿಲ್ಲ ಅಂತ ಪರಮೇಶ್ವರ್ ಬ್ಯಾಟ್
ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದ ಮೂರರ ಆಟ
ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಚರ್ಚೆ ಬಿರುಸು ಪಡೆದಿದೆ. ನ್ಯೂಸ್ಫಸ್ಟ್ ಬ್ರೇಕ್ ಮಾಡಿದ ಈ ಸುದ್ದಿ, ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ರಾಜಣ್ಣ ರಾಜಕಾರಣದಿಂದ ಹಾಲಿ-ಮಾಜಿ ಡಿಸಿಎಂ ಮಧ್ಯೆ ಮಾತಿನ ಭಿನ್ನತೆ ಸೃಷ್ಟಿಸಿದೆ. ಈ ಬಗ್ಗೆ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ರಿಯಾಕ್ಟ್ ಮಾಡಿದ್ದು, ಪಕ್ಷದೊಳಗಿನ ಎಲ್ಲಾ ಬೆಳವಣಿಗೆ ಕುರಿತು ಕಿಡಿಕಿಡಿ ಆಗಿದ್ದಾರೆ.
ಈ ಸುದ್ದಿ ಇಡೀ ಹಸ್ತಪಡೆಯಲ್ಲಿ ಭೂಕಂಪ ಸೃಷ್ಟಿಸಿದೆ. ಹರಿಪ್ರಸಾದ್ ಎತ್ತಿದ ಪ್ರಶ್ನೆಗೆ ಪ್ರತ್ಯುತ್ತರವಾಗಿ ಸಿದ್ದರಾಮಯ್ಯ ಕ್ಯಾಂಪ್ಪ್ರಯೋಗಿಸಿದ ಅಸ್ತ್ರ ಇದು. ನ್ಯೂಸ್ಫಸ್ಟ್ನ ಮುಖಪುಟದಲ್ಲಿ ರಾಜಣ್ಣ ರಾರಾಜಿಸ್ತಿದ್ರೆ, ಒಳಪುಟದಲ್ಲಿ ಯಾರಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಇವತ್ತು ಸರ್ಕಾರದ ನಂಬರ್-2 ಪಟ್ಟಕ್ಕೆ ಫೈಟ್ ತಾರಕಕ್ಕೇರಿದ್ದು, ಡಿಸಿಎಂ ಡಿಕೆ ಶಿವಕುಮಾರ್ಗೆ ನಿದ್ರಾಭಂಗವಾಗಿದೆ.
ಸರ್ಕಾರ ರಚಿಸಿ ಮೂರೇ ತಿಂಗಳಲ್ಲಿ ಹಸ್ತದಲ್ಲಿ ಕಿತ್ತಾಟ!
ನ್ಯೂಸ್ಫಸ್ಟ್ ಬ್ರೇಕ್ ಮಾಡಿದ ಮೂರು ಡಿಸಿಎಂ ಹುದ್ದೆ ಸೃಷ್ಟಿ ಆಗಬೇಕು ಎಂಬ ರಾಜಣ್ಣ ಮಾತು, ರಾಜ್ಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಚರ್ಚೆಯಲ್ಲಿ ಹಾಲಿ ಮತ್ತು ಮಾಜಿ ಡಿಸಿಎಂ ನಡುವೆ ಭಿನ್ನ ಹೇಳಿಕೆಗಳು ಮುಖಾಮುಖಿ ಆಗಿದ್ದು, ಸಂಘರ್ಷ ಜನ್ಮ ತಾಳುವಂತಾಗಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ನ ಶಾಂತ ಸಾಗರವನ್ನ ಕಲಕಿದೆ. ಅದರಲ್ಲೂ ಡಿಕೆ ಮನದಲ್ಲಿ ರೋಷಾಗ್ನಿಯೇ ಉಕ್ಕಿದೆ.
ಸಚಿವ ರಾಜಣ್ಣ ಎತ್ತಿದ ಪ್ರಶ್ನೆಗೆ ಡಿಕೆ ಕೆಂಡಾಮಂಡಲ!
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮೂರು ಡಿಸಿಎಂ ಸೃಷ್ಟಿ ಬಗ್ಗೆ ರಾಜಣ್ಣ ಎತ್ತಿದ ಪ್ರಶ್ನೆಗೆ ಕೆಂಡಾಮಂಡಲರಾದ್ರು. ಈ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಅಂತ ಗರಂ ಆದರು. ಲೋಕಸಭೆ ಚುನಾವಣೆ ಸನಿಹದಲ್ಲಿ ಈ ತರಹದ ಬೇಡಿಕೆ ಸರಿನಾ ಎಂಬ ಪ್ರಶ್ನೆಗೂ ಸಿಎಂ ಕಡೆಗೆ ಡಿಸಿಎಂ ಡಿಕೆಶಿ ಬೊಟ್ಟು ಮಾಡಿದ್ದರು. ಇನ್ನು, ಯಾರು ಮಾತನಾಡಿದರೂ ಅವರ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಬೇಕು. ಈಗ ರಾಜಣ್ಣ ಮಾತನಾಡಿದ್ದಾರೆ, ಅವರು ಮುಖ್ಯಮಂತ್ರಿಗಳ ಬಳಿ ಉತ್ತರ ಕೇಳಬೇಕು. ಹರಿಪ್ರಸಾದ್ಗೆ ಉತ್ತರ ಹೇಳಬೇಕಾಗಿರುವುದು ಕಾಂಗ್ರೆಸ್ ಹೈಕಮಾಂಡ್. ನಾನು ಯಾರನ್ನು ಕೇಳಬೇಕು ಕೇಳ್ತೀನಿ. ಮುಲಾಜಿಲ್ಲದೇ ಕೇಳ್ತೀನಿ ಅಂತ ಸಿಟ್ಟಲ್ಲಿ ಸಿಡುಕಿದರು. ಇನ್ನು ನಿನ್ನೆಯಷ್ಟೇ ಸಿಎಂ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. ಆಗ ಒಬ್ಬರೇ ಡಿಸಿಎಂ ಸಾಕು ಅಂದಿದ್ದರು. ಈಗ ಹೈಕಮಾಂಡ್ ಏನು ಹೇಳುತ್ತೋ ಹಾಗೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.
ರಾಜಣ್ಣ ಮಾತಲ್ಲಿ ತಪ್ಪಿಲ್ಲ ಎಂದ ಪರಮೇಶ್ವರ್!
ರಾಜಣ್ಣ ಪರ ಗೃಹ ಸಚಿವ ಜಿ. ಪರಮೇಶ್ವರ್ ಬ್ಯಾಟ್ ಬೀಸಿದ್ದಾರೆ. ರಾಜಣ್ಣ ಅಭಿಪ್ರಾಯ ಹೇಳಿದ್ದಾರೆ, ಅದ್ರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ. ಅವರವರ ಸಮುದಾಯಗಳಿಗೆ ಸ್ಥಾನ ಕೊಟ್ಟರೆ ಪಕ್ಷಕ್ಕೆ ಶಕ್ತಿ ಬರುತ್ತೆ ಎಂದು ವಾದಿಸಿದ್ದಾರೆ. ರಾಜಣ್ಣ ಮಾತಿಗೆ ಎಂಬಿ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ. ವೈಯಕ್ತಿಕ ಹೇಳಿಕೆ ಕೊಟ್ಟರೆ ಅದಕ್ಕೆ ಮಾನ್ಯತೆ ಇಲ್ಲ ಎಂದಿದ್ದಾರೆ. ಒಟ್ಟಾರೆ, ಈ ಬೆಳವಣಿಗೆಯಿಂದ ಡಿಕೆಶಿ ತೀವ್ರ ಅಸಮಾಧಾನ ತರಿಸಿದೆ. ಅದರಲ್ಲೂ ರಾಜಣ್ಣ ಹೇಳಿಕೆಗೆ ಕೆಲ ಸಚಿವರು, ಶಾಸಕರು ಧ್ವನಿಗೂಡಿಸ್ತಿದ್ದು, ಡಿಕೆಶಿಯನ್ನ ಕೆರಳಿಸಿದೆ. ತಮಗೆ ಮುಜುಗರ ಮಾಡಲು ಈ ಅನಗತ್ಯ ಗೊಂದಲ ಅಂತ ಡಿಸಿಎಂ ನಂಬಿದಂತಿದೆ. ಹೀಗಾಗಿ ಈ ಹೇಳಿಕೆಗಳಿಗೆ ಕಡಿವಾಣ ಹೈಕಮಾಂಡ್ಗೆ ದೂರು ನೀಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ