ಸಿಎಂ ಕುರ್ಚಿಯಿಂದ ಕೆಳಗಿಳಿಸೋದು ಗೊತ್ತು ಎಂದ ಹರಿಪ್ರಸಾದ್!
‘ಸಿಎಂ ಸಿದ್ದು ಬಣ, ಡಿಸಿಎಂ ಬಣದ ಮಧ್ಯೆ ಮುಸುಕಿನ ಗುದ್ದಾಟ’
ಬೆಂಗಳೂರು, ಬೆಳಗಾವಿ, ವಿಜಯಪುರ, ಶಿವಮೊಗ್ಗದಲ್ಲಿ ಕಿತ್ತಾಟ
ಬೆಂಗಳೂರು: ನನಗೆ ಒಬ್ಬರನ್ನು ಸಿಎಂ ಮಾಡೋದು ಗೊತ್ತು. ಸಿಎಂ ಕುರ್ಚಿಯಿಂದ ಕೆಳಗೆ ಇಳಿಸೋದು ಗೊತ್ತು. ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯಗೆ ಕೊಟ್ಟ ಈ ಪರೋಕ್ಷ ಎಚ್ಚರಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ. ಅಧಿಕಾರ ಹಂಚಿಕೆ, ಪೂರ್ಣಾವಧಿ ಸಿಎಂ ಚರ್ಚೆ ತಣ್ಣಗಾಗಿರುವಾಗ ಬಿ.ಕೆ ಹರಿಪ್ರಸಾದ್ ಅವರ ಹೇಳಿಕೆ ಮತ್ತೊಮ್ಮೆ ಕಿಡಿ ಹೊತ್ತಿಸಿದೆ.
ಇದನ್ನೂ ಓದಿ: ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತು -ಸಿದ್ದರಾಮಯ್ಯಗೆ ಬಿ.ಕೆ ಹರಿಪ್ರಸಾದ್ ಎಚ್ಚರಿಕೆ..!
ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿರೋದಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ನಿನ್ನೆಯೇ ತಿರುಗೇಟು ಕೊಟ್ಟಿದ್ದಾರೆ. ಇದೀಗ ಪ್ರತಿಪಕ್ಷ ಬಿಜೆಪಿ, ಕಾಂಗ್ರೆಸ್ ಕಾಲೆಳೆಯುವ ಮೂಲಕ ಸಿಎಂ ಫೈಟ್ ಬಗ್ಗೆ ವ್ಯಂಗ್ಯ ಮಾಡಿದೆ. ರೈತರ ಆತ್ಮಹತ್ಯೆ, ಬೆಲೆ ಏರಿಕೆ, ವರ್ಗಾವಣೆ ದಂಧೆಯಲ್ಲದೆ ಭಯೋತ್ಪಾದನೆಯಂತಹ ಗಂಭೀರ ವಿಚಾರಗಳು ಕರ್ನಾಟಕವನ್ನು ಆಹುತಿ ಪಡೆಯುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಒಳಗೆ ಬೇರೆಯದ್ದನ್ನು ಮಾಡುತ್ತಿದ್ದಾರೆ. ನಾನೇ ಸಿಎಂ, ನಾನೇ ಮುಂದಿನ ಸಿಎಂ ಎಂದು ಕುರ್ಚಿ ಕಿತ್ತಾಟದಲ್ಲಿ ಪವರ್ ಶೇರಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆಂದು ಬಿಜೆಪಿ ಟ್ವೀಟ್ ಮಾಡಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಬಗ್ಗೆ ವ್ಯಂಗ್ಯ ಮಾಡುವುದರ ಜೊತೆಗೆ ಬಿಜೆಪಿ, ಕಾಂಗ್ರೆಸ್‌ನಲ್ಲಿ ಬಣಗಳ ಫೈಟ್ ಜೋರಾಗಿ ನಡಯುತ್ತಿದೆ ಎಂದು ಕೆಲ ಸಚಿವರ ಹೆಸರು ಉಲ್ಲೇಖಿಸಿದೆ. ಕಾಂಗ್ರೆಸ್‌ನಲ್ಲಿ ಬಣ ಜಗಳ ತಾರಕಕ್ಕೇರಿದ್ದು, ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ಮಂತ್ರಿಗಳು ಪರಸ್ಪರ ಕಚ್ಚಾಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹಳಿ ತಪ್ಪಿದೆ ಎಂದು ಆರೋಪಿಸಲಾಗಿದೆ. ಬಿಜೆಪಿ ಪಕ್ಷ ಯಾವ್ಯಾವ ಜಿಲ್ಲೆಯಲ್ಲಿ ಯಾಱರ ಮಧ್ಯೆ ಬಣ ಜಗಳ ನಡೆಯುತ್ತಿದೆ ಅನ್ನೋದನ್ನು ಪಟ್ಟಿ ಮಾಡಿದೆ.
ಬೆಳಗಾವಿ – ಸಿಎಂ ಬಣದ ಸತೀಶ್ ಜಾರಕಿಹೊಳಿ, ಡಿಸಿಎಂ ಬಣದ ಲಕ್ಷ್ಮೀ ಹೆಬ್ಬಾಳ್ಕರ್
ವಿಜಯಪುರ – ಸಿಎಂ ಬಣದ ಎಂ.ಬಿ ಪಾಟೀಲ್‌ರಿಗೂ, ಡಿಸಿಎಂ ಬಣದ ಶಿವಾನಂದ ಪಾಟೀಲ್‍ರಿಗೂ ಮುಸುಕಿನ ಗುದ್ದಾಟ
ಬೆಂಗಳೂರು – ಸಿಎಂ ಬಣದ ಜಮೀರ್‌ಗೂ, ಡಿಸಿಎಂ ಬಣದ ಹ್ಯಾರಿಸ್ ನಡುವೆ ದಂಗಲ್
ಶಿವಮೊಗ್ಗ – ಮೂಲ ಕಾಂಗ್ರೆಸ್ಸಿಗ ಸಂಗಮೇಶ್ ಹಾಗೂ ವಲಸಿಗ ಮಧು ಬಂಗಾರಪ್ಪ ನಡುವೆ ಕಿತ್ತಾಟ
ಬೆಂಗಳೂರು, ಬೆಳಗಾವಿ, ವಿಜಯಪುರ, ಶಿವಮೊಗ್ಗದಲ್ಲಿ ‘ಕೈ’ ನಾಯಕರು ಕಿತ್ತಾಡುತ್ತಿದ್ದಾರೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಬಿ.ಕೆ ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯರ ಗಲಾಟೆ ಬೇರೆಯೇ ಮಟ್ಟದಲ್ಲಿದೆ. ಕಾಂಗ್ರೆಸ್‌ನ ಬಣ ಜಗಳದಲ್ಲಿ ಎಲ್ಲವೂ ಬಯಲಾಗುತ್ತಲೇ ಇದೆ ಎಂದು ಕಿಡಿಕಾರಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೈತರ ಆತ್ಮಹತ್ಯೆ, ಬೆಲೆಯೇರಿಕೆ, ವರ್ಗಾವಣೆ ದಂಧೆಯಲ್ಲದೆ ಭಯೋತ್ಪಾದನೆಯಂಥ ಗಂಭೀರ ವಿಚಾರಗಳು ಕರ್ನಾಟಕವನ್ನು ಆಹುತಿ ಪಡೆಯುತ್ತಿದೆ.
ಆದರೆ @siddaramaiah ಹಾಗೂ @DKShivakumar ಅವರು ಒಳಗೆ ಏನು ಮಾಡುತ್ತಿದ್ದಾರೆಂದರೆ…. pic.twitter.com/qoRS1h6iOV
— BJP Karnataka (@BJP4Karnataka) July 23, 2023