newsfirstkannada.com

BJP-JDS ಮೈತ್ರಿ ಬಗ್ಗೆ ಮೊದಲ​ ಪ್ರತಿಕ್ರಿಯೆ ನೀಡಿದ ಹೆಚ್​.ಡಿ ಕುಮಾರಸ್ವಾಮಿ.. ಮಂಡ್ಯ ಸೀಟ್​ ಹಂಚಿಕೆ ಕುರಿತು ಮಾಜಿ ಸಿಎಂ ಹೇಳಿದ್ದೇನು?

Share :

Published September 9, 2023 at 2:11pm

Update September 9, 2023 at 2:23pm

    ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನ ಗಮನಿಸುತ್ತಿದ್ದೇನೆ

    ಮೈತ್ರಿ ಬಗ್ಗೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಏನಂದ್ರು?

    ಮಾಜಿ ಸಿಎಂ ಯಡಿಯೂರಪ್ಪರಿಗೆ ನಾನು ಆಭಾರಿಯಾಗಿದ್ದೇನೆ

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಬಗ್ಗೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು ಇನ್ನು ಎಲ್ಲವೂ ಪ್ರಾರಂಭಿಕ ಹಂತದಲ್ಲಿವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು, ಆರೋಗ್ಯ ಚೇತರಿಸಿಕೊಳ್ಳುತ್ತ ಈ ವಿಷಯದ ಬಗ್ಗೆ ಗಮನ ಕೊಡುತ್ತಿದ್ದೇನೆ. ಮೈತ್ರಿ ಕುರಿತ ಮಾತುಕತೆಗಳೆಲ್ಲ ಪ್ರಾರಂಭಿಕ ಹಂತದಲ್ಲಿ ನಡೆಯುತ್ತಿರುವ ಚರ್ಚೆಯಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದ್ದೇನೆ. ನಿನ್ನೆ ಬಿ.ಎಸ್​ ಯಡಿಯೂರಪ್ಪನವರ ಹೇಳಿಕೆ ಗಮನಿಸಿದ್ದು ಪಕ್ಷದ ಬಗ್ಗೆ ಹಾಗೂ ದೇವೇಗೌಡರು, ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪನವರು ಹೇಳಿರುವುದಕ್ಕೆ ನಾನು ಅಭಾರಿಯಾಗಿದ್ದೇನೆ. ಬಿಜೆಪಿ-ಜೆಡಿಎಸ್​ ನಡುವೆ ಯಾವುದೇ ಸೀಟ್ ಹೊಂದಾಣಿಕೆಯಾಗಿಲ್ಲ. ಮಂಡ್ಯ ಸೀಟ್​ ಬಗ್ಗೆ ಜೆಡಿಎಸ್ ಹಠ ಹಿಡಿದಿದೆ. ಮಂಡ್ಯ ಸೀಟ್ ಏನಾಗುತ್ತದೆ. ಅಲ್ಲಿ ಸಂಸದರಿಗೆ ಏನಾಗುತ್ತದೆ. ತುಮಕೂರು, ಕೋಲಾರ ಏನಾಗುತ್ತೆ ಎಂಬುವುದು ಚರ್ಚೆನೇ ಆಗಿಲ್ಲ. ಇವೆಲ್ಲ ಊಹಾಪೋಹಗಳಷ್ಟೆ. ಚರ್ಚೆನೇ ಪ್ರಾರಂಭಿಕ ಹಂತದಲ್ಲಿರುವಾಗ ಜನರಿಗೆ ತಪ್ಪು ಮಾಹಿತಿ ಕೊಡಲಾಗುತ್ತಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BJP-JDS ಮೈತ್ರಿ ಬಗ್ಗೆ ಮೊದಲ​ ಪ್ರತಿಕ್ರಿಯೆ ನೀಡಿದ ಹೆಚ್​.ಡಿ ಕುಮಾರಸ್ವಾಮಿ.. ಮಂಡ್ಯ ಸೀಟ್​ ಹಂಚಿಕೆ ಕುರಿತು ಮಾಜಿ ಸಿಎಂ ಹೇಳಿದ್ದೇನು?

https://newsfirstlive.com/wp-content/uploads/2023/09/HD_KUMARASWAMY-1.jpg

Load More