newsfirstkannada.com

ಇದು ಡಬಲ್ ಸ್ಟೇರಿಂಗ್ ಸರ್ಕಾರ.. ಆ ದೇವರೇ ಕಾಪಾಡಬೇಕು -ಬಿ.ವೈ ವಿಜಯೇಂದ್ರ ಗೇಲಿ

Share :

24-05-2023

    ಇದು ಡಬಲ್ ಸ್ಟೇರಿಂಗ್ ಸರ್ಕಾರ!

    ದೇವರೇ ಕಾಪಾಡಬೇಕು ಎಂದು ವಿಜಯೇಂದ್ರ ಗೇಲಿ

    ಡಬಲ್ ಎಂಜಿನ್ ಸರ್ಕಾರಗಳು ದೇಶದಲ್ಲಿ ಪರಿಣಾಮಕಾರಿ!

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದಾರೆ. ಸರ್ಕಾರ ರಚನೆ ಬೆನ್ನಲ್ಲೇ CM ಸಿದ್ದರಾಮಯ್ಯ ಆಡಳಿತದ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಪದೇ ಪದೆ ಹಸ್ತಕ್ಷೇಪ ಮಾಡ್ತಿದೆ ಎಂಬ ಆರೋಪವನ್ನು ಬಿಜೆಪಿ ಮಾಡಿಕೊಂಡು ಬರ್ತಿದೆ. ಅದರಂತೆ ಇಂದು, ಶಿಕಾರಿಪುರ ಕ್ಷೇತ್ರದ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಸಿದ್ದರಾಮಯ್ಯ ಸರ್ಕಾರವನ್ನು ಎರಡು ಸ್ಟೇರಿಂಗ್ ಇರುವ ಸರ್ಕಾರ ಎಂದು ಟೀಕಿಸಿದ್ದಾರೆ.

ಸರ್ಕಾರ ಡಬಲ್ ಸ್ಟೇರಿಂಗ್ ಎಂದು ನಾನು ಹೇಳ್ತೇನೆ. ಒಂದು ಸ್ಟೇರಿಂಗ್ ಇದ್ದರೆನೇ ವಾಹನ ಓಡಿಸೋದು ಕಷ್ಟ. ಅಂತಹದ್ರಲ್ಲಿ ಎರಡೆರಡು ಸ್ಟೇರಿಂಗ್ ಇಟ್ಕೊಂಡಿದ್ದಾರೆ. ಮುಖ್ಯಮಂತ್ರಿ ಕೈಯಲ್ಲಿ ಒಂದು ಇದ್ದರೆ, ಉಪಮುಖ್ಯಮಂತ್ರಿ ಬಿ.ವೈ.ವಿಜಯೇಂದ್ರ ಕೈಯಲ್ಲಿ ಒಂದು ಸ್ಟೇರಿಂಗ್ ಇದೆ. ಮುಂದಿನ ದಿನಗಳಲ್ಲಿ ಬಸ್ ಯಾವ ದಿಕ್ಕಿನಲ್ಲಿ ಸಾಗ್ತದೆ.. ಅದನ್ನು ದೇವರೇ ಕಾಪಾಡಬೇಕು. ಕಾದು ನೋಡೋಣ.

ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ

ಈ ಹಿಂದೆ ಬಿಜೆಪಿ ನಾಯಕರು ತಮ್ಮ ಸರ್ಕಾರ ಇದ್ದಾಗ ಡಬಲ್ ಎಂಜಿನ್ ಸರ್ಕಾರ ಎಂದು ಬಣ್ಣಿಸುತ್ತಿದ್ದರು. ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಆಡಳಿದಲ್ಲಿದೆ. ಅದೇ ರೀತಿ ರಾಜ್ಯದಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಈ ಡಬಲ್ ಎಂಜಿನ್ ಸರ್ಕಾರಗಳು ದೇಶದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದರು. ಮಾತ್ರವಲ್ಲ, ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ಸಾಕಷ್ಟು ಬಾರಿ ಡಬಲ್ ಎಂಜಿನ್ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ‘ಡಬಲ್ ಸ್ಟೇರಿಂಗ್ ಸರ್ಕಾರ’ ಎಂದು ಬಿಜೆಪಿ ಗೇಲಿ ಮಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಇದು ಡಬಲ್ ಸ್ಟೇರಿಂಗ್ ಸರ್ಕಾರ.. ಆ ದೇವರೇ ಕಾಪಾಡಬೇಕು -ಬಿ.ವೈ ವಿಜಯೇಂದ್ರ ಗೇಲಿ

https://newsfirstlive.com/wp-content/uploads/2023/05/BY_VIJAYENDRA.jpg

Load More