newsfirstkannada.com

VIDEO: ಉಡಾಫೆ ಮಾತು ಬೇಡ.. ಲೋಕಸಭೆ ಬಳಿಕ ಸರ್ಕಾರ ಉಳಿಯುತ್ತಾ?; ಡಿಕೆಶಿಗೆ ವಿಜಯೇಂದ್ರ ನೇರ ಸವಾಲು

Share :

14-11-2023

  ಡಿ.ಕೆ ಶಿವಕುಮಾರ್ ಜೊತೆ ನೇರಾನೇರ ಯುದ್ಧಕ್ಕಿಳಿದ ವಿಜಯೇಂದ್ರ!

  136 ಶಾಸಕರು ಸಾಕಾಗಲ್ವಾ? ಎಂದು ಎಚ್ಚರಿಸಿದ ಬಿಜೆಪಿ ರಾಜ್ಯಾಧ್ಯಕ್ಷ

  ಲೋಕಸಭಾ ಚುನಾವಣೆ ನಂತರ ಸರ್ಕಾರ ಬೀಳೋ ಸಾಧ್ಯತೆ ಇದೆ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತಿದ್ದಂತೆ ಬಿ.ವೈ ವಿಜಯೇಂದ್ರ ಅವರು ಫುಲ್ ಌಕ್ಟಿವ್ ಆಗಿದ್ದಾರೆ. ಆರ್​ಎಸ್​ಎಸ್​ ನಾಯಕರನ್ನ, ಪಕ್ಷದ ಪ್ರಮುಖರನ್ನ ಭೇಟಿಯಾಗ್ತಿದ್ದಾರೆ. ದೇವೇಗೌಡರನ್ನೂ ಭೇಟಿಯಾಗಿ ಮೈತ್ರಿ ಮಂತ್ರ ಪಠಿಸಿದ್ದಾಗಿದೆ. ಇನ್ನೇನಿದ್ರು ವಾರ್​.. ಕಾಂಗ್ರೆಸ್ಸಿಗರ ಜೊತೆಗೆ ನೇರಾನೇರ ಯುದ್ಧಕ್ಕೆ ವಿಜಯೇಂದ್ರ ಇಳಿದು ಬಿಟ್ಟಿದ್ದಾರೆ.

ಅಧಿಕಾರದ ದಂಡ ಸಿಗುತ್ತಲೇ ವಿಜಯೇಂದ್ರ ಕಾಲಿಗೆ ಚಕ್ರ ಕಟ್ಕೊಂಡು ಸಂಚಾರ ನಡೆಸ್ತಿದ್ದಾರೆ.. ಮಠ ಯಾತ್ರೆ ನಡೆಸಿದ ವಿಜಯೇಂದ್ರ, ನಿನ್ನೆ ರಾಜ್ಯ ರಾಜಕಾರಣ ಆಳಿದ ಹಿರಿಯ ನಾಯಕರ ಆಶೀರ್ವಾದವನ್ನ ಪಡೆದ್ರು. ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಮನೆಗೂ ಭೇಟಿ ನೀಡಿ ಮಾತುಕತೆ ನಡೆಸಿದ್ರು. ಈ ವೇಳೆ ಲೋಕಸಭಾ ಎಲೆಕ್ಷನ್​​​ನಲ್ಲಿ ಬಿಜೆಪಿ-ಜೆಡಿಎಸ್ ಒಗ್ಗಟ್ಟಾಗಿ ಹೋಗುವಂತೆ ದೊಡ್ಡ ಗೌಡ್ರು ಸಲಹೆ ನೀಡಿದ್ದಾರೆ. ಈ ನಡುವೆ ಮಾಜಿ ಸಿಎಂ ಬೊಮ್ಮಾಯಿಯನ್ನೂ ಭೇಟಿಯಾಗಿ ಚರ್ಚಿಸಿದ್ರು. ಇದಾದ ಬಳಿಕ ಪದ್ಮನಾಭನಗರದ ವಿಧಾನಸಭೆ ಕ್ಷೇತ್ರದಲ್ಲಿ ವಿಜಯೇಂದ್ರ ಸಂಚಾರ ನಡೆಸಿದ್ರು,

ಪದ್ಮನಾಭನಗರದ ವಿಧಾನಸಭೆ ಕ್ಷೇತ್ರದಲ್ಲಿರುವ ಬಿಜೆಪಿ ಕಾರ್ಯಕರ್ತ ಶಿವನಂಜಪ್ಪ ಮನೆಗೆ ಭೇಟಿ ನೀಡಿದ ಬಿ.ವೈ ವಿಜಯೇಂದ್ರ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ರು. ಶಾಸಕರ ಕಚೇರಿಯಲ್ಲಿ ಪದ್ಮನಾಭ ನಗರದ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ನಡೆಸಿದ್ರು. ಇದೇ ವೇಳೆ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಅಭಿನಂದನಾ ಸಮಾರಂಭದ ಮೂಲಕ ಅಭಿನಂದನೆ ಸಲ್ಲಿಸಲಾಯಿತು.

ಪದ್ಮನಾಭನಗರ ಕ್ಷೇತ್ರದ ಮುಖಂಡರು, ಕಾರ್ಯಕರ್ತರಿಂದ ವಿಜಯೇಂದ್ರಗೆ ಅಭಿನಂದನೆ ಸಲ್ಲಿಸಲಾಯ್ತು. ವಿಜಯೇಂದ್ರ ಅವರಿಗೆ ಪೇಟ, ಹಾರ ಹಾಕಿ ಖುದ್ದು ಮಾಜಿ ಡಿಸಿಎಂ ಆರ್. ಅಶೋಕ್ ಸನ್ಮಾನಿಸಿದ್ರು. ವಿವಿಧ ಮೋರ್ಚಾ ಮುಖಂಡರಿಂದಲೂ ವಿಜಯೇಂದ್ರರತ್ತ ಶುಭಾಶಯದ ಹೊಳೆ ಹರಿದುಬಂದಿದೆ. ರಾಜ್ಯಾಧ್ಯಕ್ಷರಾಗ್ತಿದ್ದಂತೆ ಪಕ್ಷದ ಒಬ್ಬೊಬ್ಬರೇ ನಾಯಕರನ್ನ ವಿಜಯೇಂದ್ರ ಭೇಟಿಯಾಗ್ತಿದ್ದಾರೆ. ಹಾಗಾದ್ರೆ ಬಿಜೆಪಿ ರಾಜ್ಯಾಧ್ಯಕ್ಷರ ರೇಸ್​ನಲ್ಲಿದ್ದ ಸೋಮಣ್ಣ ಹಾಗೂ ಯತ್ನಾಳ್ ಮನೆಗೆ ಭೇಟಿ ನೀಡ್ತಾರಾ ಅನ್ನೋ ಅನುಮಾನ ಎಲ್ಲರನ್ನೂ ಕಾಡ್ತಿತ್ತು. ಇದೇ ಪ್ರಶ್ನೆ ಅವರನ್ನೇ ಕೇಳಿದಾಗ ಹೌದು ಅನ್ನೋ ಸ್ಪಷ್ಟ ಉತ್ತರ ಸಿಕ್ತು.

ಇದೇ ವೇಳೆ ಲೋಕಸಭಾ ಚುನಾವಣೆ ನಂತರ ಸರ್ಕಾರ ಬೀಳೋ ಸಾಧ್ಯತೆ ಇದೆ ದೊಡ್ಡ ಬಾಂಬ್​ನ್ನ ರಾಜ್ಯ ಕಮಲಾಧಿಪತಿ ಸಿಡಿಸಿದ್ದಾರೆ. ಬಿಜೆಪಿ ನಾಯಕರು, ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಎಂದಿದ್ದ ಡಿಕೆಶಿ ಮಾತಿಗೆ ವಿಜಯೇಂದ್ರ ಕೆರಳಿ ಕೆಂಡವಾದ್ರು. ಅವರಿಗೆ 136 ಶಾಸಕರು ಸಾಕಾಗಲ್ವಾ? ಅಂತಾ ನೇರ ಪ್ರಶ್ನೆ ಮಾಡಿದ್ರು. ಉಡಾಫೆ ಮಾತುಗಳನ್ನು ಬಿಡಬೇಕು ಅಂತಾ ಬಿಎಸ್​ವೈ ಪುತ್ರ ವಿಜಯೇಂದ್ರ ವಾಗ್ಬಾಣ ಹೂಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ರೇಸ್​ನಲ್ಲಿದ್ದ ಆರ್.ಅಶೋಕ್ ಕೂಡ ಈ ಅಭಿನಂದನಾ ಕಾರ್ಯಕ್ರಮದಲ್ಲಿ ಹಾಜರಿದ್ರು. ಹೀಗಾಗಿ ಈಗಿರೋ ವಿಪಕ್ಷ ಸ್ಥಾನವಾದ್ರೂ ನಿಮಗೆ ಸಿಗುತ್ತಾ ಅಂತಾ ಕೇಳಿದ್ರೆ, ಪರೋಕ್ಷವಾಗಿ ರೇಸ್​ನಲ್ಲಿರೋದನ್ನ ಅಶೋಕ್‌ ಅವರು ಒಪ್ಪಿಕೊಂಡರು. ಕಾಂಗ್ರೆಸ್​ನಂತೆ ಅರ್ಜಿ, ಟವಲ್ ಹಾಕಲ್ಲ ಅಂತಾ ಕೌಂಟರ್ ಕೊಡೋದನ್ನ ಅಶೋಕ್ ಮರೀಲಿಲ್ಲ.

ಅಧಿಕಾರದ ದಂಡ ಹಿಡಿದು ಲೋಕಸಭಾ ಚುನಾವಣೆಗೆ ಸಜ್ಜಾಗ್ತಿರುವ ವಿಜಯೇಂದ್ರ, ಅಸಲಿ ಆಟ ಶುರು ಮಾಡಲು ಉತ್ಸುಕರಾಗಿದ್ದಾರೆ. ಮಠಗಳ ಯಾತ್ರೆಗೆ ಚಾಲನೆ ನೀಡಿರುವ ವಿಜಯೇಂದ್ರ, ಪಕ್ಷದ ಸಂಘಟನೆಯನ್ನೂ ಶುರು ಮಾಡಿಯಾಗಿದೆ. ದೋಸ್ತಿ ದಾಳವನ್ನೂ ಉರುಳಿಸಿದ್ದಾರೆ. ತನ್ನವರನ್ನ ಒಗ್ಗೂಡಿಸಿಕೊಂಡು ಮಹಾಯುದ್ಧಕ್ಕೆ ಸಜ್ಜಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಉಡಾಫೆ ಮಾತು ಬೇಡ.. ಲೋಕಸಭೆ ಬಳಿಕ ಸರ್ಕಾರ ಉಳಿಯುತ್ತಾ?; ಡಿಕೆಶಿಗೆ ವಿಜಯೇಂದ್ರ ನೇರ ಸವಾಲು

https://newsfirstlive.com/wp-content/uploads/2023/11/Dk-Shivakumar-ByVijayendra.jpg

Load More