newsfirstkannada.com

ಮುಖ್ಯಮಂತ್ರಿ ನೆರಳಿನಲ್ಲಿ ಕಮಿಷನ್ ಮಾಸ್ಟರ್.. ವರ್ಗಾವಣೆ ಆರೋಪದಲ್ಲಿ ರೇಟ್ ಫಿಕ್ಸ್ ಮಾಡಿ ಟಾಂಗ್ ಕೊಟ್ಟ ಬಿಜೆಪಿ

Share :

06-07-2023

    YST ಟ್ಯಾಕ್ಸ್‌, ಪೆನ್ ಡ್ರೈವ್‌ ಬಾಂಬ್ ಆಯ್ತು ಈಗ ಶ್ಯಾಡೋ ಸಿಎಂ ಅಸ್ತ್ರ!

    ಪ್ರತಿಯೊಂದು ಹುದ್ದೆಯ ವರ್ಗಾವಣೆಗೆ ರೇಟ್‌ ಫಿಕ್ಸ್ ಮಾಡಿದ ಆರೋಪ

    ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾಗೂ ಕಮಿಷನ್‌ ಹೋಗುತ್ತಾ?

ಬೆಂಗಳೂರು: ವರ್ಗಾವಣೆ ದಂಧೆಯಲ್ಲಿ ಲಂಚದ ಆರೋಪ ರಾಜ್ಯ ರಾಜಕೀಯದಲ್ಲಿ ಅಲ್ಲೋಲ, ಕಲ್ಲೋಲವನ್ನೇ ಸೃಷ್ಟಿಸಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌ ನಾಯಕರು ಸಾಲು, ಸಾಲು ಆರೋಪಗಳನ್ನು ಮಾಡುತ್ತಾ ಸದನದ ಒಳಗೂ ಹೊರಗೂ ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಹೆಚ್‌.ಡಿ ಕುಮಾರಸ್ವಾಮಿ YST ಟ್ಯಾಕ್ಸ್‌, ಪೆನ್ ಡ್ರೈವ್‌ ಬಾಂಬ್ ಸಿಡಿಸಿದ ಮೇಲೆ ಬಿಜೆಪಿ ಕೂಡ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡಿ ಟ್ವೀಟ್ ಮಾಡಿದೆ.

ಕಾಂಗ್ರೆಸ್ ಸರ್ಕಾರವನ್ನು ಟ್ವೀಟ್ ಮಾಡಿ ಕುಟುಕಿರುವ ರಾಜ್ಯ ಬಿಜೆಪಿ ಒಂದು ಪೋಸ್ಟ್ ಮಾಡಿದೆ. ಅದರಲ್ಲಿ ಮುಖ್ಯಮಂತ್ರಿ ನೆರಳಿನಲ್ಲಿ ಕಮಿಷನ್ ಮಾಸ್ಟರ್ ಎಂದು ಬರೆಯಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ನೆರಳಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ಬಿಂಬಿಸಲಾಗಿದೆ. ಈ ಮೂಲಕ ವರ್ಗಾವಣೆ ದಂಧೆಯ ಆರೋಪದಲ್ಲಿ ರಾಜ್ಯ ಸರ್ಕಾರವನ್ನು ವ್ಯಂಗ್ಯ ಮಾಡಿದೆ.

ಶ್ಯಾಡೋ ಸಿಎಂ ಯತೀಂದ್ರ ಎಂದು ಟ್ವೀಟ್ ಮಾಡಿರೋದರ ಜೊತೆಗೆ ರಾಜ್ಯ ಬಿಜೆಪಿ ಪ್ರತಿ ಹುದ್ದೆಗೂ ತರಹೇವಾರಿ ದರ ಫಿಕ್ಸ್ ಮಾಡಿರೋ ಪೋಸ್ಟ್ ಮಾಡಿದೆ. ರಾಜ್ಯದಲ್ಲಿ ಅಗತ್ಯ ವಸ್ತುಗಳು ಹಾಗೂ ಅಗತ್ಯ ಹುದ್ದೆಗಳ ಇಂದಿನ ದರ ಇಂತಿದೆ ಎಂದು ಟ್ವೀಟ್ ಮಾಡಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಅವರಿಗೂ ಕಮಿಷನ್‌ ಪ್ರತ್ಯೇಕ ಎಂದು ಟ್ಯಾಗ್ ಮಾಡಿದೆ.

GFX:- ತರಕಾರಿ:
ಟೊಮೆಟೊ – ₹120-130
ಬೀನ್ಸ್‌ – ₹120
ಕ್ಯಾರೆಟ್‌ – ₹110
ಹಸಿಮೆಣಸಿನಕಾಯಿ – ₹170

GFX:- ವರ್ಗಾವಣೆ ತರಹೇವಾರಿ:
ಮುಖ್ಯ ಎಂಜಿನಿಯರ್: ₹5‌ ಕೋಟಿ
ಜಿಲ್ಲಾ ಆರೋಗ್ಯಾಧಿಕಾರಿ: ₹2 ಕೋಟಿ
ಲೆಕ್ಕಾಧಿಕಾರಿ: ₹ 2.25 ಕೋಟಿ
ತಹಶೀಲ್ದಾರ್‌: ₹1.25 ಕೋಟಿ

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌:
ಬೆಂಗಳೂರು ನಗರ – ₹1.5 ಕೋಟಿ
ಜಿಲ್ಲಾ ಕೇಂದ್ರ – ₹80 ಲಕ್ಷ
ತಾಲ್ಲೂಕು ಕೇಂದ್ರ: ₹40 ಲಕ್ಷ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮುಖ್ಯಮಂತ್ರಿ ನೆರಳಿನಲ್ಲಿ ಕಮಿಷನ್ ಮಾಸ್ಟರ್.. ವರ್ಗಾವಣೆ ಆರೋಪದಲ್ಲಿ ರೇಟ್ ಫಿಕ್ಸ್ ಮಾಡಿ ಟಾಂಗ್ ಕೊಟ್ಟ ಬಿಜೆಪಿ

https://newsfirstlive.com/wp-content/uploads/2023/07/Bjp-Tweet-On-Cm-Siddaramaiah.jpg

Load More