ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಗೆ ಸಿಎಂ ಫೋಕಸ್
ಮಹಿಳೆಯರಿಗೆ ನೇರ ಲಾಭ ವರ್ಗಾವಣೆಯ ಮೂಲಕ ಸೇವೆ
ರಾಜ್ಯದ ಕಲ್ಯಾಣಕ್ಕಾಗಿ ಹಲವು ಕೊಡುಗೆಗಳನ್ನು ಕೊಟ್ಟ ಸಿಎಂ
Karnataka Budgets2023: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡಿಸಿದ್ದಾರೆ. 14ನೇ ಬಾರಿಗೆ ಸಿದ್ದರಾಮಯ್ಯನವರು ಬಜೆಟ್ ಮಂಡಿಸಿದ್ದಾರೆ. ಈ ಬಾರಿ ರಾಜ್ಯದ ಕಲ್ಯಾಣಕ್ಕಾಗಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅದರ ಅನ್ವಯ ಮಹಿಳಾ ಮತ್ತು ಮಕ್ಕಳ ಕಲ್ಯಾಣದ ಅಭಿವೃದ್ಧಿಗೆ ಗಮನಹರಿಸಿರುವ ರಾಜ್ಯ ಸರ್ಕಾರ ಕೆಲವು ಕೊಡುಗೆಗಳನ್ನು ನೀಡಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೂ ದೃಷ್ಟಿ ಹರಿಸಿರುವ ಸಿಎಂ ಸಿದ್ದರಾಮಯ್ಯನವರು ಸರ್ಕಾರ ಬಜೆಟ್ನಲ್ಲಿ ಕೊಡುಗೆ ನೀಡಿದೆ. ಸಮಾಜ, ಶಿಕ್ಷಣ ಮತ್ತು ಆರ್ಥಿಕ ಸ್ವಯಂ ನಿರ್ಮೂಲನೆಯ ಅವಲಂಬನೆಗೆ ಬಜೆಟ್ನಲ್ಲಿ ಹೆಚ್ಚಿನ ಕೊಡುಗೆ ನೀಡಿದೆ. ಹಾಗಾಗಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ದೊರೆಯಲಿದೆ. ನೇರ ಲಾಭ ವರ್ಗಾವಣೆಯ (DBT) ಮೂಲಕ ಈ ಸೇವೆ ಒದಗಿಸಲಿದೆ. ಅಂದಹಾಗೆಯೇ ಇದಕ್ಕಾಗಿ ಸರ್ಕಾರ 30 ಸಾವಿರ ಕೋಟಿ ಮೀಸಲಿಟ್ಟಿದೆ.
ಇನ್ನು 4 ಸಾವಿರ ವಿಶೇಷಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಒದಗಿಸಲು 30 ಸಾವಿರ ರೂಪಾಯಿ ಕೋಟಿ ಮೀಸಲು. ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಶೇ4 ರಷ್ಟು ಬಡ್ಡಿದರದಲ್ಲಿ ನೀಡಲಾಗುವ ಸಾಲದ ಮಿತಿಯನ್ನು 2 ಕೋಟಿಯಿಂದ 5 ಕೋಟಿಗೆ ಹೆಚ್ಚಿಸಲಾಗುವುದು.
10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಲೆಗಾಗಿ 7 ಜಿಲ್ಲೆಗಳಲ್ಲಿ ಎನ್ಜಿಒಗಳ ಜೊತೆ ಸೇರಿಕೊಂಡು 2 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು. ಆ್ಯಸಿಡ್ ದಾಳಿ ಸಂಸತ್ರಸ್ತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ಅವರಿಗೆ ಸ್ವಯಂ ಉದ್ಯೋಗ ಸೃಷ್ಟಿಸುವ ಸಲುವಾಗಿ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಒದಗಿಸಲು 5 ಕೋಟಿ ಅನುದಾನ. ಮಕ್ಕಳ ಉದ್ದೇಶಿತ ಯೋಜನೆಗೆ 51,229 ಕೋಟಿ ಅನುದಾನ ನೀಡಲಾಗಿದೆ.
ಅಂದಹಾಗೆಯೇ ಈ ಯೋಜನೆಯಡಿ ಕುಟುಂಬ ಮಹಿಳಾ ಮುಖ್ಯಸ್ಥರು, ಆಶಾ ಕಾರ್ಯಕರ್ತರು, ಲಿಂಗ ಅಲ್ಪಸಂಖ್ಯಾತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಬಡತನವನ್ನು ನಿವಾರಣೆ ಮಾಡಲು ಈ ಬಾರಿಯ ಬಜೆಟ್ನಲ್ಲಿ ತಿಂಗಳಿಗೆ 2 ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ