ಸಚಿವರ ನಡೆ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಶಾಸಕರು
ವರ್ಗಾವಣೆ, ಅನುದಾನದ ಬಗ್ಗೆಯೇ ಹೆಚ್ಚು ಚರ್ಚೆ
ಕೆಲವರಿಗೆ ಹೈಕಮಾಂಡ್ನಿಂದ ದಿಢೀರ್ ಬುಲಾವ್..!
ಸರ್ಕಾರಕ್ಕೆ ಉಡುಪಿ ಗಲಾಟೆ, ಡಿಜೆ ಹಳ್ಳಿ ಪ್ರಕರಣ, ಬಿಜೆಪಿ-ಜೆಡಿಎಸ್ ಮೈತ್ರಿ ಗುಸುಗುಸು ಎಂಬ ಸುದ್ದಿ ಆತಂಕ್ಕೆ ತಳ್ಳಿದೆ. ಆದ್ರೆ ಇತ್ತ ಶಾಸಕರ ಅಸಮಾಧಾನಗಳೇ ಬೇರೆ. ಗ್ಯಾರಂಟಿ ಗೊಂದಲ, ಅಭಿವೃದ್ಧಿಗೆ ಹಣ ಸಿಗ್ತಿಲ್ಲ. ಇತ್ತ ನಾವ್ ಹೇಳಿದಂತೆ ವರ್ಗಾವಣೆ ಆಗ್ತಿಲ್ಲ. ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು ಅಂತ ಬಿಳಿ ಹಾಳೆ ಮೇಲೆ ಗೀಚಿ 20 ಶಾಸಕರ ಸಹಿ ಪಡೆದು ಸಿಎಂ ರವಾನಿಸಿದ್ದರು. ಅದರ ಪ್ರತಿಫಲವೇ ನಿನ್ನೆ ಸಭೆ ನಡೆದಿದೆ.
ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಸದ್ದು-ಗದ್ದಲ ಎಬ್ಬಿಸಿದೆ. ಇತ್ತ, ಶಾಸಕರ ಅಸಮಾಧಾನ.. ಸಚಿವರ ವಿರುದ್ಧ ಪತ್ರ ಸಮರ.. ಈ ಎಲ್ಲಾ ವಿಷಯಗಳ ನಡುವೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಿದ್ದರಾಮಯ್ಯ ನೇತೃತ್ವದಡಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದೆ. ಸಭೆಯಲ್ಲಿ ಶಾಸಕರ ಬೇಸರ, ಸಿಟ್ಟು, ಅಸಮಾಧಾನ ಬಗ್ಗೆ ಸಮಾಲೋಚನೆ ನಡೆದಿದೆ.
ಸಚಿವರ ಮೇಲೆ ಶಾಸಕರ ಸಿಟ್ಟಿನ ಪ್ರದರ್ಶನ..!
ನಿನ್ನೆ ಖಾಸಗಿ ಹೊಟೇಲ್ನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಸಭೆ ಆಗಿದೆ.. ಸಭೆಯ ಮುಖ್ಯ ಅಜೆಂಡಾವೇ ಸಿಎಲ್ಪಿ ಸಭೆಗೆ ಆಗ್ರಹಿಸಿ ಬರೆದ ಪತ್ರದ ಬಗ್ಗೆ ಚರ್ಚೆ.. ಸಭೆಯಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ಆಗಿದೆ.. ಅಷ್ಟಕ್ಕೂ ಸಭೆಯಲ್ಲಿ ಶಾಸಕರು ಮಾಡಿದ ಕಂಪ್ಲೇಂಟ್ ಏನು?
‘ಕೈ’ ಶಾಸಕರ ಕಂಪ್ಲೇಂಟ್!
ಇದನಷ್ಟೇ ನಾವು ಕೇಳಿರೋದು, ನಾವು ಬೇರೆ ಉದ್ದೇಶ ಇಟ್ಟು ಪತ್ರ ಬರೆದಿದ್ದಲ್ಲ.. ಸಮಸ್ಯೆಗಳಿವೆ ಹಾಗಂತ ಅಸಮಾಧಾನವಿಲ್ಲ ಅಂತ ಶಾಸಕರು ಹೇಳಿದ್ದಾರೆ.. ಅಲ್ಲದೆ, ನಮ್ಮದು ಪಕ್ಷ ಮತ್ತು ಸರ್ಕಾರದ ವಿರೋಧಿ ನಡೆ ಅಲ್ಲ ಸಭೆಯಲ್ಲಿ ಶಾಸಕರು ಹೇಳಿಕೊಂಡಿದ್ದಾರೆ. ಇನ್ನು ಇದೇ ವಿಚಾರವಾಗಿ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕೆಲ ಬುದ್ಧಿ ಮಾತಿನ ಜೊತೆಗೆ ಸಮಸ್ಯೆ ಬಗೆಹರಿಸಲು ಸಜ್ಜಾಗಿದ್ದಾರೆ.
ಸಿದ್ದು ಸಮಜಾಯಿಷಿ ಏನು?
ಸಿಎಲ್ಪಿ ಸಭೆಯಲ್ಲಿ ಮೂವರ ಇಲಾಖೆಯಲ್ಲಿನ ವರ್ಗಾವಣೆ ಬಗ್ಗೆ ಹೆಚ್ಚು ಚರ್ಚೆ ಆಗಿದೆ. ಮುಖ್ಯವಾಗಿ ಡಿಸಿಎಂ ಡಿ.ಕೆ ಶಿವಕುಮಾರ್, ಚಲುವರಾಯಸ್ವಾಮಿ ಹಾಗೂ ಪ್ರಿಯಾಂಕ್ ಖರ್ಗೆ ಇಲಾಖೆ ವರ್ಗಾವಣೆ ಸಂಬಂಧ ಶಾಸಕರು ಅಸಮಾಧಾನ ಹೊರಹಾಕಿದ್ರು ಅನ್ನೋ ಮಾಹಿತಿ ಲಭ್ಯವಾಗಿದೆ.
ದೆಹಲಿಗೂ ತಲುಪಿತಾ ಶಾಸಕರ ಅಸಮಾಧಾನದ ಪತ್ರ?
ಸಿಎಲ್ಪಿ ಸಭೆಯಲ್ಲಿ ಶಾಸಕರ ಮುನಿಸು ಸ್ಫೋಟಗೊಳ್ತಿದ್ದಂತೆ ಅತ್ತ ಹೈಕಮಾಂಡ್ ಕಿವಿಗೂ ವಿಷಯ ಮುಟ್ಟಿದೆ.. ದೆಹಲಿಗೆ ಬನ್ನಿ ಮಾತಾಡೋಣ ಅಂತ ವರಿಷ್ಠರು ಬುಲಾವ್ ನೀಡಿದ್ದಾರೆ. ಆಗಸ್ಟ್ 2ಕ್ಕೆ ರಾಜ್ಯ ನಾಯಕರಿಗೆ ದೆಹಲಿಗೆ ಬರುವಂತೆ ಎಐಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ. ಸಿಎಂ, ಡಿಸಿಎಂ, ಪಕ್ಷದ ಕಾರ್ಯಾಧ್ಯಕ್ಷರು, ಹಿರಿಯರಿಗೆ ಆಹ್ವಾನ ಕೊಟ್ಟಿದ್ದಾರೆ.. ಮುಖ್ಯವಾಗಿ ಹರಿಪ್ರಸಾದ್ಗೂ ದೆಹಲಿಗೆ ಬರುವಂತೆ ವರಿಷ್ಠರು ಹೇಳಿದ್ದಾರೆ. ರಾಜ್ಯದ ಪ್ರಸಕ್ತ ವಿದ್ಯಮಾನ, ಲೋಕಸಭೆ ಚುನಾವಣೆ, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಒಟ್ಟಾರೆ, ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರ ಆಗದಂತೆ ಕಿವಿಮಾತು ಹೇಳಲಿದ್ದಾರೆ.
ವಿಶೇಷ ವರದಿ: ಹರೀಶ್ ಕಾಕೋಳ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ