newsfirstkannada.com

ಕೇಂದ್ರ ಸರ್ಕಾರದ ವಿರುದ್ಧ ಜಿದ್ದಿಗೆ ಬಿದ್ದ ಸಿದ್ದರಾಮಯ್ಯ.. ರಾಜ್ಯದ ಜನರಿಗೆ ಅಕ್ಕಿ ನೀಡಲು ಏನೇನು ಮಾಡುತ್ತಿದ್ದಾರೆ ಗೊತ್ತಾ?

Share :

19-06-2023

  ಕೇಂದ್ರದ ರೈಸ್​ ಪಾಲಿಟಿಕ್ಸ್​ ವಿರುದ್ಧ ನಾಳೆಯಿಂದ ಕಾಂಗ್ರೆಸ್​ ಪ್ರತಿಭಟನೆ 

  ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಅಕ್ಕಿಯಿಲ್ಲ; ಛತ್ತೀಸ್​ಘಡ ಹೇಳಿದ್ದೇನು?

  ಅಕ್ಕಿ ಕೊಡದ ಕೇಂದ್ರ ಸರ್ಕಾರದ ವಿರುದ್ಧ ತುಮಕೂರಲ್ಲಿ ಪ್ರತಿಭಟನೆ  

ಇದು ಅಕ್ಕಿಗಾಗಿ ಶುರುವಾಗಿರುವ ಸಮರ. ಅನ್ನಭಾಗ್ಯ ಜಾರಿಗೆ ಜಿದ್ದಿಗೆ ಬಿದ್ದಿರುವ ಸಿದ್ದರಾಮಯ್ಯ, ಅನ್ಯ ರಾಜ್ಯಗಳ ಬಾಗಿಲು ಬಡಿದಿದ್ದಾರೆ. ಅಕ್ಕಿ ಸಂಗ್ರಹಕ್ಕಾಗಿ ಹೋರಾಟಕ್ಕಿಳಿದಿದ್ದು, ಇನ್ನೊಂದ್ಕಡೆ ಕಾಂಗ್ರೆಸ್​​ ಪ್ರತಿಭಟನೆಗೂ ಕಹಳೆ ಮೊಳಗಿಸಿದೆ. ಇತ್ತ, ಬಿಜೆಪಿ ಕೂಡ ನುಡಿದಂತೆ ನಡೆಯಿರಿ ಅಂತ ಕೈತಿರುವಿದೆ. 
ಗ್ಯಾರಂಟಿ.. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನ ಮಕಾಡೆ ಮಲಗಿಸಿದ ಯೋಜನೆ. ಅಕ್ಕಿ ತೂಕ ಇಳಿಸಿದ ಬಿಜೆಪಿಯನ್ನ ಜನ ಅಧಿಕಾರದಿಂದಲೇ ಕೆಳಗಿಳಿಸಿದ್ರು. ಇದೇ ಅಕ್ಕಿ, ಕಾಂಗ್ರೆಸ್​​ನ ಜಯಭೇರಿಯಲ್ಲಿ ಬಂಗಾರದ ಫಸಲು ನೀಡಿದೆ. ಕಳೆದ ಬಾರಿ ಅನ್ನಭಾಗ್ಯ ಕೊಟ್ಟು ಬಡವರ ಪಾಲಿನ ಅನ್ನಯ್ಯನಾಗಿದ್ದ ಸಿದ್ದರಾಮಯ್ಯ ಮೇಲಿಟ್ಟ ಭರವಸೆಯೇ ಈ ಅಭೂತಪೂರ್ವ ಫಲಿತಾಂಶ. ಆದ್ರೆ, ಈಗ ಇದೇ ಅಕ್ಕಿ ಯುದ್ಧಕ್ಕೆ ಚುಕ್ಕಿ ಇಟ್ಟಿದೆ.
‘ಅನ್ನ ಭಾಗ್ಯ’ ಯೋಜನೆಗೆ ಅಕ್ಕಿ ಹೊಂದಿಸಲು ಸಂಕಷ್ಟ! 
ಅನ್ನಭಾಗ್ಯ.. ಸಿದ್ದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ರಾಜ್ಯದ ಬಡವರಿಗೆ ಅಕ್ಕಿ ನೀಡುವ ಯೋಜನೆ. ಆದ್ರೆ, ಈ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ ಅನ್ನೋ ಆರೋಪ ಕಾಂಗ್ರೆಸ್​​​ ಮಾಡ್ತಿದೆ. ಹೇಗಾದ್ರೂ ಮಾಡಿ ಈ ಜಿದ್ದು ಗೆದ್ದು, ಜನಕ್ಕೆ ಅಕ್ಕಿ ಕೊಡಬೇಕು ಅಂತ ಸಿದ್ದು ಹಠಕ್ಕೆ ಬಿದ್ದಿದ್ದಾರೆ. ಇದಕ್ಕಾಗಿ ಈಗಾಗಲೇ ಅಕ್ಕಿಗಾಗಿ ಯುದ್ಧಕ್ಕೆ ಮುನ್ನುಡಿ ಬರೆದಿದ್ದಾರೆ.. ಅತ್ತ ಬಿಜೆಪಿ ನುಡಿದಂತೆ ನಡೆಯಿರಿ ಅಂತ ಹೋರಾಟಕ್ಕೆ ಸಜ್ಜಾಗಿದೆ.
‘ಛತ್ತೀಸ್‌ಘಡದಿಂದ ಅಕ್ಕಿ ಖರೀದಿ’
ತೆಲಂಗಾಣ, ಆಂಧ್ರ ಪ್ರದೇಶದವರ ಹತ್ತಿರ ಮಾತನಾಡಿದ್ದೀವಿ. ಆದ್ರೆ ಅವರು ಆಗಲ್ಲ ಅಂದಿದ್ದಾರೆ. ಛತ್ತೀಸ್​ಗಡ ಸರ್ಕಾರದ ಬಳಿಯೂ ಮಾತನಾಡಿದ್ದೇವೆ. ಇವರು ಒಂದೂವರೆ ಲಕ್ಷ ಮೆಟ್ರಿಕ್​ ಟನ್​ ಅಕ್ಕಿ ಕೊಡುತ್ತೇವೆ. ಆದ್ರೆ ನೀವು ಕೇಳಿದ 2 ಲಕ್ಷದ 28 ಸಾವಿರ ಮೆಟ್ರಿಕ್​ ಟನ್​ ಅಕ್ಕಿ ಕೊಡಲಾಗಲ್ಲ. ಅದು ರೇಟ್​ ಜಾಸ್ತಿ ಎಂದಿದ್ದಾರೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
‘ಸಿದ್ದರಾಮಯ್ಯಗೆ ಹೇಳೋಕೆ ನೈತಿಕತೆ ಇಲ್ಲ’
ಎಲ್ಲ ಕೊಡುತ್ತೇನೆ ಎಂದವರು ಅಕ್ಕಿ ತಂದು ಕೊಡುವುದಕ್ಕೆ ಆಗಲ್ವಾ. ಅದು ಸಣ್ಣ ಕೆಲಸ ಅದು ಕೂಡ ಸರ್ಕಾರಕ್ಕೆ ಆಗಲ್ವಾ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ. ಮೊದಲೇ ಕೇಂದ್ರದಿಂದ ಏನೂ ಅನುಮತಿ ಪಡೆದಿಲ್ಲ. ಹೀಗಾಗಿ ಕೇಂದ್ರವನ್ನು ತೆಗಳುವಂತ ನೈತಿಕತೆ ಉಳಿದಿಲ್ಲ.
ಆರ್​. ಅಶೋಕ್​, ಮಾಜಿ ಸಚಿವ
ಕೇಂದ್ರದ ರೈಸ್​ ಪಾಲಿಟಿಕ್ಸ್​ ವಿರುದ್ಧ ಸಿಡಿದೆದ್ದ ಕೈಪಡೆ!
ಕೇಂದ್ರದಿಂದ ಅಕ್ಕಿ ನಿರಾಕರಣೆ ಹಿನ್ನೆಲೆ ಇದನ್ನೆ ಕಾಂಗ್ರೆಸ್​​ ಬ್ರಹ್ಮಾಸ್ತ್ರವಾಗಿ ಬಳಸ್ತಿದೆ. ಜಿಲ್ಲ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಹಾವೇರಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಆಯಾ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡ್ತೇವಿ. ಕೇಂದ್ರ ಸರ್ಕಾರದ ವಿರುದ್ಧ ಬಂದ್ ಮಾಡ್ತೇವಿ ಅಂತ ಹೇಳಿದ್ದಾರೆ.
ತುಮಕೂರಿನ ಟೌನ್​ಹಾಲ್​ ವೃತ್ತದ ಬಳಿ ಪ್ರತಿಭಟನೆ
ಇತ್ತ, ತುಮಕೂರಲ್ಲಿ ಅಕ್ಕಿ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ವಿನೂತನ ಪ್ರತಿಭಟನೆ ನಡೆಸಿದೆ.. ಟೌನ್​ಹಾಲ್​ ವೃತ್ತದಲ್ಲಿ ಧಾನ್ಯಗಳ ರಾಶಿ ಹಾಕಿ ಪೂಜೆ ಸಲ್ಲಿಸಿ ಆಕ್ರೋಶ ಹೊರ ಹಾಕಿದ್ದಾರೆ. ಚೀಲದಲ್ಲಿ ಅನ್ನಭಾಗ್ಯ ಅಕ್ಕಿ ಇಟ್ಟು ಕೇಂದ್ರದ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸ್, ರಾಶಿ ಪೂಜೆ ಬಳಿಕ ಭಾರತೀಯ ಆಹಾರ ನಿಗಮಕ್ಕೆ ಕಳಿಸಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ಬಡವರ ಧಾನ್ಯಗಳಲ್ಲಿ ರಾಜಕೀಯ ಮಾಡಬಾರದು. ಮುಂದಿನ ದಿನಗಳಲ್ಲಿ ಅಕ್ಕಿ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಅಂತ ಎಚ್ಚರಿಕೆ ನೀಡಿದ್ರು.
ಕಾಂಗ್ರೆಸ್​​ ಮತ್ತು ಬಿಜೆಪಿ ಮಧ್ಯೆ ಸದ್ಯ ಅಕ್ಕಿಯುದ್ಧ ನಡೆಯುತ್ತಿದೆ.. ನಾಳೆ ಪ್ರತಿಭಟನಾ ದಿಕ್ಕಿಗೆ ತಿರುಗಲಿದ್ದು, ಇನ್ನಷ್ಟು ತೀವ್ರಗೊಳ್ಳಲಿದೆ.. ಇತ್ತ, ಬಿಜೆಪಿಯೂ ಇದೇ ಅಕ್ಕಿಗಾಗಿ ಸಮರ ಸಾರಿದ್ದು, ಅದು ಕೂಡ ಪ್ರತಿಭಟನೆ ಹಾದಿ ತುಳಿಯಲು ಸಜ್ಜಾಗಿದೆ.. ಹೀಗಾಗಿ ಮುಂದಿನ ದಿನಗಳಲ್ಲಿ ಅಕ್ಕಿ ಕದನ ಯಾವ ದಿಕ್ಕಿಗೆ ತಿರುಗಲಿದೆ ಅನ್ನೋದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಕೇಂದ್ರ ಸರ್ಕಾರದ ವಿರುದ್ಧ ಜಿದ್ದಿಗೆ ಬಿದ್ದ ಸಿದ್ದರಾಮಯ್ಯ.. ರಾಜ್ಯದ ಜನರಿಗೆ ಅಕ್ಕಿ ನೀಡಲು ಏನೇನು ಮಾಡುತ್ತಿದ್ದಾರೆ ಗೊತ್ತಾ?

https://newsfirstlive.com/wp-content/uploads/2023/06/SIDDARAMAIAH-15.jpg

Load More