newsfirstkannada.com

ಲೋಕಸಭೆ ಮತ್ತು BBMP ಚುನಾವಣೆ ಮೇಲೆ ಕಾಂಗ್ರೆಸ್​ ಹದ್ದಿನ ಕಣ್ಣು; ದೊಡ್ಡವರ ಕಥೆ ನಾನು ನೋಡಿಕೊಳ್ತೀನಿ ಎಂದ ಡಿ.ಕೆ. ಶಿವಕುಮಾರ್

Share :

22-08-2023

    ಬಿಜೆಪಿ ಶಾಸಕನ ಕ್ಷೇತ್ರದಲ್ಲಿ ‘ಆಪರೇಷನ್ ಹಸ್ತ’

    ಎಸ್‌ಟಿಎಸ್‌ ಬೆಂಬಲಿಗರು ಕಾಂಗ್ರೆಸ್‌ ಸೇರ್ಪಡೆ

    ಟ್ರೈನ್ ಹೋದ ಮೇಲೆ ಟಿಕೆಟ್ ತಗೋಬೇಡ-ಡಿಕೆಶಿ

ಲೋಕಸಭೆ ಮತ್ತು ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್​, ರಾಜಕೀಯ ಚದುರಂಗದಾಟ ಶುರು ಮಾಡಿದೆ. ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬುದು ಮತ್ತಷ್ಟು ದಟ್ಟವಾಗಿವೆ. ಇದರ ನಡುವೆಯೇ ಬೆಂಗಳೂರಿನಲ್ಲಿ ಆಪರೇಷನ್‌ ಹಸ್ತ ನಡೆದಿದ್ದು, ಸಣ್ಣ ಸಣ್ಣ ಮೀನುಗಳ ಹಿಡಿದು, ತಿಮಿಂಗಲಕ್ಕೆ ಕಾಂಗ್ರೆಸ್​ ಬಲೆ ಬೀಸಿದೆ.

ಯಶವಂತಪುರ ಕ್ಷೇತ್ರದ ಶಾಸಕ ಎಸ್​ಟಿ.ಸೋಮಶೇಖರ್​ ಬೆಂಬಲಿಗರು ಹಸ್ತಲಾಘವ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್​ ಸೇರ್ಪಡೆ ಕಾರ್ಯಕ್ರಮದಲ್ಲಿ ಯಶವಂತಪುರ ಬಿಜೆಪಿ ಶಾಸಕ ಸೋಮಶೇಖರ್ ಆಪ್ತರು ಹಾಗೂ ಜೆಡಿಎಸ್‌ನ ಕೆಲ ಕಾರ್ಯಕರ್ತರನ್ನು ಡಿ.ಕೆ. ಶಿವಕುಮಾರ್​, ಕಾಂಗ್ರೆಸ್​ ಪಕ್ಷಕ್ಕೆ ಬರಮಾಡಿಕೊಂಡ್ರು.

ದೊಡ್ಡವರ ಕಥೆ ನಾನು ನೋಡಿಕೊಳ್ತೀನಿ ಎಂದ ಡಿಕೆಶಿ

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌, ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಳ್ಳಬೇಡ ಎಂದು ಚುನಾವಣೆ ಸಮಯದಲ್ಲಿ ಎಸ್‌.ಟಿ. ಸೋಮಶೇಖರ್‌ಗೆ ನಾನು ಹೇಳಿದ್ದೆ. ಆದ್ರೆ ಒತ್ತಡದಿಂದ ಏನಾಯ್ತೋಗೊತ್ತಿಲ್ಲ. ನೀವೆಲ್ಲಾ ಕಾಂಗ್ರೆಸ್ ಪಕ್ಷದ ದೇವಸ್ಥಾನಕ್ಕೆ ಬಂದಿದ್ದೀರಿ, ಒಬ್ಬೊಬ್ಬರು 10 ಜನರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿ, ದೊಡ್ಡ ದೊಡ್ಡವರ ಕಥೆ ನಾನು ನೋಡಿಕೊಳ್ಳುತ್ತೇನೆ. ಸೋಮಶೇಖರ್ ಮತ್ತು ನಾನು ಸ್ನೇಹಿತರು. ಪಕ್ಷಕ್ಕೆ ಬರುವುದು ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ರು.

ಇಂದಿರಾ ಕ್ಯಾಂಟೀನ್​ ಹೆಸರಿಟ್ಟ ಕಾರಣ ವಿವರಿಸಿದ ಡಿಕೆಶಿ

ಇತ್ತೀಚೆಗೆ ಮುನಿರತ್ನ ಹಾಗೂ ಗೋಪಾಲಯ್ಯ ಪ್ರೆಸ್ ಮೀಟ್ ಮಾಡುತ್ತಿದ್ದರು. ಅಶೋಕ್ ಅವರಿಬ್ಬರ ಹೆಗಲ ಮೇಲೆ ಕೈ ಹಾಕಿ ಭಾಷಣ ಮಾಡಿಸುತ್ತಿದ್ದ. ಆದರೆ, ಇದೇ ಮುನಿರತ್ನ, ಗೋಪಾಲಯ್ಯ, ಸೋಮಶೇಖರ್ ಅವರೇ ಈ ಹಿಂದೆ ಸರ್ಕಾರಿ ಕ್ಯಾಂಟೀನ್‌ಗಳಿಗೆ ಇಂದಿರಾ ಕ್ಯಾಂಟೀನ್ ಅಂತ ಹೆಸರು ಇಡಬೇಕು ಅಂತ ಸಹಿ ಸಂಗ್ರಹ ಮಾಡಿದರು ಎಂದು ಹಳೆಯದ್ದನ್ನು ಮೆಲುಕು ಹಾಕಿದ್ರು.

ಅಕ್ಬರ್-ಬೀರಬಲ್ಲನ ಕಥೆ ಹೇಳಿ ವಿಪಕ್ಷಗಳಿಗೆ ಡಿಕೆ ಡಿಚ್ಚಿ

ಇನ್ನು ಅಕ್ಬರ್​ ಬೀರಬಲ್ಲನ ಕಥೆ ಹೇಳುವ ಮೂಲಕ ಬಿಜೆಪಿ ಮತ್ತು ಜೆಡಿಎಸ್​ ನಾಯಕರಿಗೆ ಡಿ.ಕೆ.ಶಿವಕುಮಾರ್​ ತಿರುಗೇಟು ನೀಡಿದ್ರು.

ಬಿಜೆಪಿ, ಜೆಡಿಎಸ್​ ಕೈಕೈ ಹಿಸುಕಿಕೊಳ್ತಿದೆ

ಒಟ್ಟಾರೆ, ಲೋಕಸಭೆ ಚುನಾವಣೆಯನ್ನೂ ಟಾರ್ಗೆಟ್​ ಮಾಡಿರುವ ಕಾಂಗ್ರೆಸ್​, ಆಪರೇಷನ್​ ಹಸ್ತದ ರಣತಂತ್ರ ಮಾಡ್ತಿದೆ. ಸದ್ಯ ಯಶವಂತ ಪುರ ಕ್ಷೇತ್ರದ ಬಿಜೆಪಿ ಶಾಸಕರ ಬೆಂಬಲಿಗರು ಕಾಂಗ್ರೆಸ್​ ಸೇರ್ಪಡೆಯಾಗಿದ್ದು, ಇದೀಗ ಎಸ್​ಟಿ ಸೋಮಶೇಖರ್​ ನಡೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆ ಮತ್ತು BBMP ಚುನಾವಣೆ ಮೇಲೆ ಕಾಂಗ್ರೆಸ್​ ಹದ್ದಿನ ಕಣ್ಣು; ದೊಡ್ಡವರ ಕಥೆ ನಾನು ನೋಡಿಕೊಳ್ತೀನಿ ಎಂದ ಡಿ.ಕೆ. ಶಿವಕುಮಾರ್

https://newsfirstlive.com/wp-content/uploads/2023/06/DKS_1-1.jpg

Load More