newsfirstkannada.com

‘ನನ್ನ ಧ್ವನಿ ಅಡಗಿಸಲು ಸಾಧ್ಯವೇ ಇಲ್ಲ’- ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಮತ್ತೆ ಗುಡುಗು

Share :

24-07-2023

    ನನಗೆ ಸಿಎಂ ಕೆಳಗೆ ಇಳಿಸೋದು ಗೊತ್ತು ಎಂದಿದ್ದ ಹರಿಪ್ರಸಾದ್

    ಹರಿಪ್ರಸಾದ್ ಮಾತಿಗೆ ಉರಿದುರಿದು ಬಿದ್ದಿದ್ದ ಸಚಿವ ಜಮೀರ್

    ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ನಡೆಯುತ್ತಾ ಬಣಗಳ ಯುದ್ಧ?

ಬೆಂಗಳೂರು: ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು. ಕೆಳಗೆ ಇಳಿಸೋದು ಗೊತ್ತು ಎಂದಿದ್ದ ಕಾಂಗ್ರೆಸ್​ನ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಅವರು ಮತ್ತೊಮ್ಮೆ ಗುಡುಗಿದ್ದಾರೆ. ನಾನು ವೈಯಕ್ತಿಕ ಹಿತಾಸಕ್ತಿಗಾಗಿ ಎಂದೂ ರಾಜಕೀಯ ಮಾಡಿದವನಲ್ಲ. ಸಾಮಾಜಿಕ ನ್ಯಾಯದ ಪರ ನನ್ನ ಧ್ವನಿಯನ್ನು ಎಂದೂ ಅಡಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಈಡಿಗ, ಬಿಲ್ಲವ ಸಭೆಯಲ್ಲಿ ಮಾತನಾಡಿದ್ದ ಬಿ.ಕೆ ಹರಿಪ್ರಸಾದ್, ಬೇರೆ, ಬೇರೆ ರಾಜ್ಯಗಳ 5 ಮುಖ್ಯಮಂತ್ರಿಗಳ ಆಯ್ಕೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ. ಯಾರನ್ನೇ ಆಗಲಿ ಸಿಎಂ ಮಾಡುವುದು ಚೆನ್ನಾಗಿ ಗೊತ್ತಿದೆ. ಆ ಮೇಲೆ ಅವರನ್ನು ಕೆಳಗೆ ಇಳಿಸುವುದು ಗೊತ್ತಿದೆ. ಮಂತ್ರಿ ಸ್ಥಾನ ಕೊಡಿಯೆಂದು ನಾನು ಯಾರ ಬಳಿಯೂ ಹೋಗಿ ಭಿಕ್ಷೆ ಬೇಡಲ್ಲ, ಇದರ ಬಗ್ಗೆ ಅವಶ್ಯಕತೆನೂ ಇಲ್ಲ. ಎಲ್ಲಿಯೇ ಹೋದರೂ ಎದೆ ಕೊಟ್ಟು ನಿಲ್ಲುವ ಶಕ್ತಿ ನನಗಿದೆ ಎನ್ನುವ ಹೇಳಿಕೆ ನೀಡಿದ್ದರು. ಈ ಮಾತಿಗೆ ಸಿಎಂ ಸಿದ್ದರಾಮಯ್ಯ ಬಣದ ಸಚಿವರು ಆಕ್ರೋಶ ವ್ಯಕ್ತಪಡಿಸಿದ ಮೇಲೂ ನನ್ನ ಹೇಳಿಕೆಗೆ ನಾನು ಬದ್ಧ ಎಂದಿದ್ದರು.

ಇದನ್ನೂ ಓದಿ: ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತು -ಸಿದ್ದರಾಮಯ್ಯಗೆ ಬಿ.ಕೆ ಹರಿಪ್ರಸಾದ್ ಎಚ್ಚರಿಕೆ..!

ಬಿ.ಕೆ ಹರಿಪ್ರಸಾದ್ ಅವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿರುವಾಗಲೇ ಮತ್ತೊಮ್ಮೆ ತಮ್ಮ ರಾಜಕೀಯ ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದಾರೆ. ನಾನು ವೈಯಕ್ತಿಕ ಹಿತಾಸಕ್ತಿಗಾಗಿ ಎಂದೂ ರಾಜಕೀಯ ಮಾಡಿದವನಲ್ಲ. ಸಾಮಾಜಿಕ ಬದಲಾವಣೆಗಾಗಿ ರಾಜಕೀಯಕ್ಕೆ ಬಂದವನು. ಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಯಾವ ಅಧಿಕಾರದ ಮೇಲೂ ಲಾಬಿ ನಡೆಸಿದ ಇತಿಹಾಸವಿಲ್ಲ. ಅದರ ಮೇಲೆ ಆಸೆಯೂ ಇಲ್ಲ. ಸಾಮಾಜಿಕ ನ್ಯಾಯದ ಪರ ನನ್ನ ಧ್ವನಿಯನ್ನು ಎಂದೂ ಅಡಗಿಸಲು ಸಾಧ್ಯವಿಲ್ಲ ಎಂದು ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನ ಧ್ವನಿ ಅಡಗಿಸಲು ಸಾಧ್ಯವೇ ಇಲ್ಲ’- ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಮತ್ತೆ ಗುಡುಗು

https://newsfirstlive.com/wp-content/uploads/2023/07/Hari-Prasad-BK.jpg

Load More