newsfirstkannada.com

‘ಗ್ಯಾರಂಟಿ No.3’ ಘೋಷಿಸಿದ ಕಾಂಗ್ರೆಸ್; ಮತದಾರರ ಮನಗೆಲಲ್ಲು ಉಚಿತ ಯೋಜನೆಗಳ ಅಸ್ತ್ರ

Share :

Published February 25, 2023 at 1:02am

Update September 25, 2023 at 9:10pm

    BPL ಕಾರ್ಡುದಾರರಿಗೆ 10 ಕೆ.ಜಿ ಅಕ್ಕಿ ಉಚಿತ ನೀಡೋದಾಗಿ ಅಧಿಕೃತ ಘೋಷಣೆ

    ಗೃಹಲಕ್ಷ್ಮೀ, 200 ಯೂನಿಟ್ ವಿದ್ಯುತ್ ಉಚಿತ ಬಳಿಕ ಅನ್ನಭಾಗ್ಯ ಅಸ್ತ್ರ ಪ್ರಯೋಗ​

    ಚುನಾವಣೆ ಗೆಲ್ಲಲು 3 ಮುಖ್ಯ ನಿರ್ಧಾರಗಳ ಅಧಿಕೃತವಾಗಿ ತಿಳಿಸಿದ ಕಾಂಗ್ರೆಸ್​

ಚುನಾವಣೆ ಹೊಸ್ತಿಲಲ್ಲಿ ರಾಜ್ಯದಲ್ಲಿ ಪಕ್ಷಗಳ ಆಶ್ವಾಸನೆಯ ಅಸ್ತ್ರ ಪ್ರಯೋಗ ಜೋರಾಗಿದೆ.. ಗೃಹಲಕ್ಷಿ, ಗೃಹಜ್ಯೋತಿ ಅಂತ ಮತದಾರರ ಮನಗೆಲಲ್ಲು ಮುಂದಾಗಿದ್ದ ಕಾಂಗ್ರೆಸ್​ ಪಾಳಯ ಅನ್ನಭಾಗ್ಯ ಯೋಜನೆಯ ಅಸ್ತ್ರವನ್ನ ಮರು ಪ್ರಯೋಗಿಸಿದೆ. ಬಿಪಿಎಲ್​ ಕಾರ್ಡುದಾರರಿಗೆ 10 ಕೆ.ಜಿ ಅಕ್ಕಿ ನೀಡೋದಾಗಿ ಘೋಷಣೆ ಮಾಡಿದೆ. 

2024ರ ವಿಧಾನ ಸಭಾ ಚುನಾವಣಾ ಅಖಾಡಲ್ಲಿ ಸೆಣಸಾಡಿ ಗೆಲುವಿನ ದಡ ಸೇರಲು ಪಕ್ಷಗಳು ಹರಸಾಹಸ ಪಡ್ತಿವೆ. ಮತದಾರರ ಮನದಾಳವನ್ನ ಅರಿತು ಘೋಷಣೆಗಳ ಸುರಿಮಳೆಗೈದು, ಆಶ್ವಾಸನೆಗಳ ಆಸೆ ತೋರಿಸಿ ಗಾಳ ಹಾಕಲು ಸಜ್ಜಾಗಿವೆ. ಅತ್ತ ಬಿಜೆಪಿ ಕರ್ನಾಟಕವನ್ನ ನೆಕ್ಸ್ಟ್​ ಲೆವೆಲ್​ಗೆ ಕೊಂಡೊಯ್ತೀವಿ ಅಂತ ಬಣ್ಣ ಬಣ್ಣದ ಭರವಸೆಗಳನ್ನ ನೀಡ್ತಿದ್ರೆ ಇತ್ತ ಬಿಜೆಪಿಗೆ ಮಾಸ್ಟರ್​​ ಸ್ಟ್ರೋಕ್​ ನೀಡ್ತಿರೋ ಕಾಂಗ್ರೆಸ್​ ಪಾಳಯ ಹೊಸ ಹೊಸ ಘೋಷಣೆಗಳನ್ನ ಜನರ ಮುಂದಿಡ್ತಿದೆ.

ಚುನಾವಣೆಗೂ ಮುನ್ನಾ 3ನೇ ಘೋಷಣೆ ಮಾಡಿದ ಕೈ

ಅನ್ನ ಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ಭರವಸೆ
ಸದ್ಯ ವಿಧಾನ ಸಭಾ ಚುನಾವಣೆಯಲ್ಲಿ ಶತಗತಾಯ ಗೆಲುವಿನ ಪತಾಕೆ ಹಾರಿಸಲು ಪಣತೊಟ್ಟಿರೋ ಕಾಂಗ್ರೆಸ್​ ಮತದಾರರ ಮನೆ, ಮನಗಳನ್ನ ಮುಟ್ಟಲು ರಣ ತಂತ್ರಗಳನ್ನ ರೂಪಿಸಲು ಮಂದಾಗಿದೆ.. ಈ ಹಿಂದೆ ಗೃಹ ಜ್ಯೋತಿ, ಗೃಹ ಲಕ್ಷಿಗಳಂತ ಯೋಜನೆಗಳನ್ನ ಜನರ ಮುಂದಿಟ್ಟು ಮತಬೇಟೆಗೆ ಮುನ್ನುಡಿ ಬರೆದಿದ್ದ ಕೈ ಪಾಳಯ ಸದ್ಯ ಮತ್ತೊಂದು ಘೋಷಣಾ ಮನ್ವಂತರವನ್ನ ಹುಟ್ಟುಹಾಕಿದೆ.. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ಪ್ರತೀ ಬಿಪಿಎಲ್​ ಕಾರ್ಡುದಾರ ಕುಟುಂಬದ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡೋದಾಗಿ ಘೋಷಿಸಿದೆ.

ಬಿಪಿಎಲ್​ ಕಾರ್ಡು​ದಾರರಿಗೆ 10 ಕೆ.ಜಿ ಅಕ್ಕಿ

ಈ ಹಿಂದೆ ಕರ್ನಾಟಕಕ್ಕೆ ಭೇಟಿ ನೀಡದ್ದ ಪ್ರಿಯಾಂಕ ಗಾಂಧಿ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಬಡ ಕುಟುಂಬಗಳ ಯಜಮಾನಿಗೆ ಪ್ರತೀ ತಿಂಗಳಿಗೆ 2000 ಸಹಾಯ ಧನವನ್ನ ನೀಡೋದಾಗಿ ಘೋಷಣೆ ಮಾಡಿದ್ದರು.. ಬಳಿಕ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಗೃಹಜ್ಯೋತಿ ಯೋಜನೆ ಅಡಿ ಪ್ರತೀ ಕುಟುಂಬಕ್ಕೆ 200 ಯೂನಿಟ್​ ವಿದ್ಯುತ್​ ಅನ್ನ ಉಚಿತವಾಗಿ ನೀಡೋದಾಗಿ ಘೋಷಣೆ ಮಾಡಲಾಗಿತ್ತು.. ಇದೀಗ ಮತ್ತೊಂದು ಘೋಷಣೆಯನ್ನ ಕಾಂಗ್ರೆಸ್​ ಪಕ್ಷ ಹೊರಡಿಸಿದ್ದು ಬಿಪಿಎಲ್​ ಕಾರ್ಡುದಾರ ಕುಟುಂಬಗಳ ಸದಸ್ಯರಿಗೆ ಪ್ರಸ್ತುತ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಡ್ತಿರೋ 5 ಕೆ.ಜಿ ಅಕ್ಕಿಯನ್ನ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆ.ಜಿಗೆ ಏರಿಸೋದಾಗಿ ಘೋಷಣೆ ಮಾಡಿದೆ.

ಅನ್ನಭಾಗ್ಯ ಯೋಜನೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮಾಹಿತಿ ನೀಡಿದ್ದಾರೆ.. ಜನರ ಹಸಿವು ನೀಗಬೇಕು ಅಂತ ಪ್ರತಿ ತಿಂಗಳು ಬಿಪಿಎಲ್ ಕಾರ್ಡುದಾರರಿಗೆ 10 ಈ ಬಾರಿಯ ಚುನಾವಣಾ ಚಕ್ರವ್ಯೂಹವನ್ನ ಭೇದಿಸಲು ಕಾಂಗ್ರೆಸ್​ ಪಾಳಯ ಸಾಲು ಸಾಲು ಘೋಷಣೆಗಳ ಅಸ್ತ್ರವನ್ನ ಪ್ರಯೋಗ ಮಾಡ್ತಿದೆ. ಚುನಾವಣೆ ಮುಗಿದ ಬಳಿಕ ಪಕ್ಷಗಳು ನೀಡಿರೋ ಆಶ್ವಾಸನೆಗಳು ಆಶ್ವಾಸನೆಯಾಗೇ ಉಳಿಯುತ್ತಾ ಅಥವಾ ಕಾರ್ಯರೂಪಕ್ಕೆ ಬರುತ್ತಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಗ್ಯಾರಂಟಿ No.3’ ಘೋಷಿಸಿದ ಕಾಂಗ್ರೆಸ್; ಮತದಾರರ ಮನಗೆಲಲ್ಲು ಉಚಿತ ಯೋಜನೆಗಳ ಅಸ್ತ್ರ

https://newsfirstlive.com/wp-content/uploads/2023/02/DKS.jpg

Load More