newsfirstkannada.com

‘ಯಾರನ್ನು ನೇಣಿಗೆ ಹಾಕ್ತೀರಿ.. BL ಸಂತೋಷ್​​ಗೋ? ಮೋದಿಗೋ?’ -ಬಿಜೆಪಿಯನ್ನು ಕಾಂಗ್ರೆಸ್​ ಹೀಗೆ ಗೇಲಿ ಮಾಡಿದ್ಯಾಕೆ?

Share :

14-06-2023

  ಬಿಜೆಪಿ ಸಂಸದ ಜಿಗಜಿಣಗಿ ಹೇಳಿಕೆ ಇಟ್ಕೊಂಡು ಕಾಂಗ್ರೆಸ್ ಪ್ರಶ್ನೆ

  ಬಿಜೆಪಿ ಹಿರಿಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಸಂಸದ

  ಕಾಂಗ್ರೆಸ್​ನ ಈ ಪ್ರಶ್ನೆಗೆ ಉತ್ತರ ನೀಡುತ್ತಾ ಬಿಜೆಪಿ..?

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ 70 ಸೀಟ್ ಹೊಸಬರಿಗೆ ಕೊಟ್ಟು ಸೋಲಾಗಿದೆ. ಈ ಸಲಹೆಯನ್ನು ಯಾರು ನೀಡಿದ್ದಾರೋ ಅವರನ್ನೂ ನೇಣಿಗಾದರೂ ಹಾಕಿ, ಕಾಲಾದರೂ ತೆಗಿಯಿರಿ ಎಂಬ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೇಳಿಕೆಗೆ ಕಾಂಗ್ರೆಸ್​ ಗೇಲಿ ಮಾಡಿದೆ.

ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಹೊಸಬರಿಗೆ ಟಿಕೆಟ್ ನೀಡಿದವರನ್ನು ನೇಣಿಗೆ ಹಾಕಿ ಅಂದಿದ್ದಾರೆ ಬಿಜೆಪಿ ಸಂಸದ. ಈಗ ಯಾರನ್ನು ನೇಣಿಗೆ ಹಾಕುವಿರಿ. ಅಮಿತ್ ಶಾ ಅವರನ್ನೋ? ಬಿ.ಎಲ್.ಸಂತೋಷ್ ಅವರನ್ನೋ? ಪ್ರಹ್ಲಾದ್ ಜೋಶಿಯವರನ್ನೋ? ಮೋದಿಯವರನ್ನೋ? ಬೊಮ್ಮಾಯಿಯವರನ್ನೋ? ಹೊಣೆ ಯಾರು, ನೇಣುಗಂಬ ಯಾರಿಗೆ? ಸೋಲಿನ ನಾಯಕತ್ವ ವಹಿಸಿಕೊಳ್ಳುವವರು ಯಾರು? ಬಿಜೆಪಿಯಿಂದ ಉತ್ತರ ನಿರೀಕ್ಷಿಸಬಹುದೇ? ಎಂದು ಕಾಂಗ್ರೆಸ್​ ಟ್ವೀಟ್ ಮಾಡಿದೆ.

ರಮೇಶ್ ಜಿಗಜಿಣಗಿ ಏನ್ ಹೇಳಿದ್ದರು..?

ಬಡವರಿಗೆ ಫ್ರೀ ಬಸ್ ಪಾಸ್, ಫ್ರೀ ಕರೆಂಟ್ ಜೊತೆಗೆ ಐದು ಗ್ಯಾರಂಟಿ ಯೋಜನೆಗಳಿಗೆ ಕಾರ್ಡ್ ಕೊಟ್ಟರಲ್ಲ, ಅದು ಪ್ರಮುಖ ಕಾರಣ. ಅದನ್ನು ಬಿಜೆಪಿ ನಾಯಕರು ಗೊತ್ತು ಮಾಡಿಕೊಳ್ಳಲಿಲ್ಲ. ಐದು ಗ್ಯಾರಂಟಿ ಯೋಜನೆಗಳ ಕಾರ್ಡ್​, ಚುನಾವಣೆಯಲ್ಲಿ ಪ್ರಮುಖ ಕೆಲಸ ಮಾಡಿದೆ. ಬಿಜೆಪಿಯಲ್ಲಿ 70 ಹೊಸ ನಾಯಕರಿಗೆ ಟಿಕೆಟ್ ನೀಡಿದ್ದಾರೆ. ಅದರ ಅಗತ್ಯ ಏನಿತ್ತು? ಹೊಸಬರಿಗೆ ಟಿಕೆಟ್ ಕೊಡಬಾರದು ಎಂದು ನಾನು ಹೇಳಲ್ಲ. 70 ಸೀಟ್​ನಲ್ಲಿ ಎಷ್ಟು ಗೆದ್ದೀರಿ. 10 ಸೀಟ್ ಗೆದ್ದರೆ ಸಾಕಾ? 70 ರಲ್ಲಿ 70 ಸೀಟೂ ಹಳೆಬರಿಗೆ ಕೊಟ್ಟರೆ 30 ಸೀಟ್ ಆದರೂ ಬರುತ್ತಿದ್ದವು. ಈ ಬಗ್ಗೆ ಯಾರು ಸಲಹೆ ಮಾಡಿದ್ದಾರೋ? ಅದು ಅವರಿಗೆ ಬಿಟ್ಟಿದ್ದು? ಅವರಿಗೆ ಏನ್ಮಾಡ್ತೀರೋ ಮಾಡಿ. ನೇಣಿಗಾದರೂ ಹಾಕಿ, ಕಾಲಾದ್ರೂ ಮರಿಯಿರಿ.. ನನಗೆನೂ ಸಂಬಂಧ ಇಲ್ಲ ಎಂದಿದ್ದರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಯಾರನ್ನು ನೇಣಿಗೆ ಹಾಕ್ತೀರಿ.. BL ಸಂತೋಷ್​​ಗೋ? ಮೋದಿಗೋ?’ -ಬಿಜೆಪಿಯನ್ನು ಕಾಂಗ್ರೆಸ್​ ಹೀಗೆ ಗೇಲಿ ಮಾಡಿದ್ಯಾಕೆ?

https://newsfirstlive.com/wp-content/uploads/2023/06/CONG_TWEET.jpg

Load More