newsfirstkannada.com

Breaking News: ‘ಗುತ್ತಿಗೆದಾರರು ಚಿನ್ನ, ಆಭರಣ, ಮನೆ ಎಲ್ಲವೂ ಅಡ ಇಟ್ಟಿದ್ದಾರೆ’ -ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಡೆಡ್​ಲೈನ್

Share :

11-08-2023

    ಸರ್ಕಾರಕ್ಕೆ ಕೆಂಪಣ್ಣ ನೇತೃತ್ವದ ನೌಕರರ ಸಂಘ ಎಚ್ಚರಿಕೆ

    ಸಿಎಂ, ಡಿಸಿಎಂ ಭೇಟಿಯಾದರೂ ಪ್ರಯೋಜನ ಇಲ್ಲ

    ಯಾವ ಇಲಾಖೆಯಿಂದ ಎಷ್ಟು ಕೊಟಿ ಹಣ ಬಾಕಿ ಇದೆ..?

ಬೆಂಗಳೂರು: ಆಗಸ್ಟ್ 31ರೊಳಗೆ ಗುತ್ತಿಗೆದಾರರ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ 7 ತಿಂಗಳಿಂದ ಗುತ್ತಿಗೆದಾರರ ಹಣ ಬಾಕಿ ಇದೆ. ಚುನಾವಣೆ, ನೀತಿ ಸಂಹಿತೆ ಕಾರಣದಿಂದ ಬಾಕಿ ಮೊತ್ತವು ಅಂದು ಬಿಡುಗಡೆ ಆಗಿರಲಿಲ್ಲ. ಚುನಾವಣೆ ಮುಗಿದು ಆಗಸ್ಟ್ 20ಕ್ಕೆ ಹೊಸ ಸರ್ಕಾರಕ್ಕೆ ಮೂರು ತಿಂಗಳಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಮೂರು ತಿಂಗಳಲ್ಲಿ ಎರಡು ಬಾರಿ ಭೇಟಿ ಆಗಿದ್ದೇವೆ. ಆದರೂ ಯಾವುದೇ ಕ್ರಮಕೈಗೊಂಡಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಸಲ್ಲಿಸಿದ್ದೇವೆ ಎಂದರು.

ಮುಂದಿನ ವಾರ ಎಂದು ಎಲ್ಲರೂ ಸಬೂಬು ಹೇಳ್ತಿದ್ದಾರೆ. ಆಗಸ್ಟ್ 31 ರ ವೇಳೆ ಹಣ ಬಿಡುಗಡೆ ಆಗಬೇಕು. ಸರ್ಕಾರ ಈಗಾಗಲೇ ಜೂನ್ 28 ಹಾಗೂ ಜುಲೈ 30 ರಂದು ಬಾಕಿ ಮೊತ್ತ ಬಿಡುಗಡೆಗೆ ಆದೇಶ ಹೊರಡಿಸಿದೆ. ಹಾಗಾಗಿ ಆಗಸ್ಟ್‌‌ 31ರೊಳಗೆ ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಈ ಎಲ್ಲಾ ಇಲಾಖೆ ಹಾಗೂ ಸರ್ಕಾರಿ ಸಂಸ್ಥೆಗಳಿಂದ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗೋದು ಬಾಕಿ ಇದೆ. ಸಾಲ ಮಾಡಿ ಕೋಟಿ ಕೋಟಿ ಕಾಮಗಾರಿ ಮಾಡಿದ್ದೇವೆ. ಮನೆ, ಚಿನ್ನ, ನಿವೇಶನ ಪತ್ರ ಅಡವಿಟ್ಟು ಕಾಮಗಾರಿ ಮಾಡಲಾಗಿದೆ. ಕೆಲವು ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಅಂತಲೇ ಹಣ ಮೀಸಲಿಡಲಾಗಿದೆ. ಸರ್ಕಾರ ಬಿಬಿಎಂಪಿಗೆ 657 ಕೋಟಿ ಹಣ ಬಿಡುಗಡೆ ಮಾಡಿದೆ. ಆದರೆ ಬಿಬಿಎಂಪಿ ಆಯುಕ್ತರು ಸರ್ಕಾರದಿಂದ ಆದೇಶ ಬಂದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಒಟ್ಟಾರೆ ರಾಜ್ಯ ಸರ್ಕಾರದಿಂದ 25 ಸಾವಿರ ಕೋಟಿ ಬಾಕಿ ಇದೆ ಎಂದರು.

ಆರೋಪದ ಪ್ರಕಾರ ಯಾವ ಇಲಾಖೆಯಿಂದ ಎಷ್ಟು ಕೊಟಿ..?

  • ನೀರಾವರಿ ಇಲಾಖೆಯಿಂದ 10 ಸಾವಿರ ಕೋಟಿಗೂ ಅಧಿಕ ಮೊತ್ತ ಪೆಂಡಿಂಗ್
  • ಲೋಕೋಪಯೋಗಿ ಇಲಾಖೆಯಿಂದ ಬರಬೇಕಿದೆ ಸುಮಾರು 7 ಸಾವಿರ ಕೋಟಿ
  • ಬಿಬಿಎಂಪಿಯಿಂದ ಗುತ್ತಿಗೆದಾರರಿಗೆ ಬರಬೇಕಿದೆ 3,500 ಕೋಟಿ ರೂಪಾಯಿ
  • ಇದರ ಹೊರತಾಗಿಯೂ ಸುಮಾರು 6 ಸಾವಿರ ಕೋಟಿ ಇತರೆ ಬಿಲ್ ಬಾಕಿ ಇದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ‘ಗುತ್ತಿಗೆದಾರರು ಚಿನ್ನ, ಆಭರಣ, ಮನೆ ಎಲ್ಲವೂ ಅಡ ಇಟ್ಟಿದ್ದಾರೆ’ -ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಡೆಡ್​ಲೈನ್

https://newsfirstlive.com/wp-content/uploads/2023/08/KEMPANNA.jpg

Load More