newsfirstkannada.com

6,6,6,6,6,6,6,6,6; 34 ಬಾಲ್​​ನಲ್ಲಿ 76 ರನ್​ ಚಚ್ಚಿದ ಕನ್ನಡಿಗ; ಐಪಿಎಲ್​ಗೆ ಮುನ್ನವೇ ಖಡಕ್​​ ವಾರ್ನಿಂಗ್​​​

Share :

Published August 28, 2024 at 4:16pm

    ಇಂಡಿಯನ್​ ಪ್ರೀಮಿಯರ್​ ಲೀಗ್​​ ಆಡಿ ಆನುಭವ ಹೊಂದಿರೋ ಬ್ಯಾಟರ್​​

    ತನ್ನ ಬಿರುಸಿನ ಬ್ಯಾಟಿಂಗ್​ನಿಂದಲೇ ಬೌಲರ್ಸ್​ ಬೆಂಡೆತ್ತಿದ ಸ್ಟಾರ್​​ ಕ್ರಿಕೆಟರ್​

    ಅಭಿನವ್ ಮನೋಹರ್‌ ಅಮೋಘ ಬ್ಯಾಟಿಂಗ್​ಗೆ ಬೆಚ್ಚಿಬಿದ್ದ ಬೌಲರ್ಸ್..!

ಸದ್ಯ ನಡೆಯುತ್ತಿರೋ ಮಹಾರಾಜ್ ಟ್ರೋಫಿ ಟಿ20 ಟೂರ್ನಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್‌ ವಿರುದ್ಧ ಶಿವಮೊಗ್ಗ ಲಯನ್ಸ್‌ 6 ವಿಕೆಟ್​​ಗಳಿಂದ ಗೆದ್ದು ಬೀಗಿದೆ. ಶಿವಮೊಗ್ಗ ಲಯನ್ಸ್​ ತಂಡದ ಪರ ಭರವಸೆಯ ಬ್ಯಾಟರ್‌ ಅಭಿನವ್​​ ಮನೋಹರ್ ಬಿರುಸಿನ ಬ್ಯಾಟಿಂಗ್​ ಮಾಡಿದ್ದು, ​​ಗುಲ್ಬರ್ಗಾ ಬೌಲರ್ಸ್​ ಬೆಚ್ಚಿಬಿದ್ದಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಆಡಿ ಆನುಭವ ಹೊಂದಿರೋ ಬ್ಯಾಟರ್​​ ಅಭಿನವ್ ಮನೋಹರ್‌. ಇವರ ಅಮೋಘ ಬ್ಯಾಟಿಂಗ್​ಗೆ ಗುಲ್ಬರ್ಗಾ ಬೌಲರ್ಸ್​​ ಕಂಗಾಲಾದರು. ಅಭಿನವ್‌ ತನ್ನ ಅಗ್ರೆಸ್ಸಿವ್​ ಆಟದಿಂದಲೇ ಶಿವಮೊಗ್ಗ ತಂಡವನ್ನು ಗೆಲ್ಲಿಸಿದ್ರು.
ಸಂಕಷ್ಟದಲ್ಲಿ ಶಿವಮೊಗ್ಗಕ್ಕೆ ಆಸರೆಯಾದ ಅಭಿನವ್​​..!

133 ರನ್​ಗಳಿಗೆ ಬ್ಯಾಕ್​ ಟು ಬ್ಯಾಕ್​ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಶಿವಮೊಗ್ಗ ತಂಡಕ್ಕೆ ಆಸರೆಯಾಗಿದ್ದು ಅಭಿನವ್ ಮನೋಹರ್. ವಿಕೆಟ್​ ಬೀಳದಂತೆ ಕ್ರೀಸ್​ನಲ್ಲೇ ಬ್ಯಾಟ್​ ಬೀಸಿದ ಅಭಿನವ್​​​ ಬೌಲರ್ಸ್​ಗೆ ಬಿಸಿ ಮುಟ್ಟಿಸಿದ್ರು.

ಅಭಿನವ್ ಬಿರುಸಿನ ಬ್ಯಾಟಿಂಗ್

ಅಭಿನವ್ ಮನೋಹರ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರ ಆಟಕ್ಕೆ ಬ್ರೇಕ್‌ ಹಾಕಲು ಗುಲ್ಬರ್ಗಾ ಭಾರೀ ಸರ್ಕಸ್​​ ಆದ್ರೂ ವಿಕೆಟ್​ ತೆಗೆಯಲು ಆಗಲಿಲ್ಲ. ಇವರ ಬಿರುಸಿನ ಆಟದ ಕಾರಣದಿಂದ ಶಿವಮೊಗ್ಗ ಗೆದ್ದು ಬೀಗಿದೆ. ಅಭಿನವ್ ಕೇವಲ 34 ಎಸೆತಗಳಲ್ಲಿ 2 ಫೋರ್​​, 9 ಸಿಕ್ಸರ್‌ ಸಮೇತ 76 ರನ್‌ ಸಿಡಿಸಿದ್ರು.

ಕೊನೆಗೂ ಶಿವಮೊಗ್ಗ 19.1 ಓವರ್‌ಗಳಲ್ಲಿ ಸವಾಲಿನ 207 ರನ್‌ಗಳ ಗುರಿಯನ್ನು 4 ವಿಕೆಟ್‌ ಕಳೆದುಕೊಂಡು ಮುಟ್ಟಿತ್ತು. ಮೊದಲು ಬ್ಯಾಟಿಂಗ್​ ಮಾಡಿದ್ದ ಗುಲ್ಬರ್ಗಾ 206 ರನ್​ಗಳ ಟಾರ್ಗೆಟ್​​ ಕೊಟ್ಟಿತ್ತು.

ಇದನ್ನೂ ಓದಿ: ಸ್ಟಾರ್​ ಆಟಗಾರನಿಗೆ ಸುವರ್ಣಾವಕಾಶ; ಶುಭ್ಮನ್​​ ಗಿಲ್​ಗೆ ಭಾರತ ತಂಡದ ಏಕದಿನ ನಾಯಕತ್ವ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

6,6,6,6,6,6,6,6,6; 34 ಬಾಲ್​​ನಲ್ಲಿ 76 ರನ್​ ಚಚ್ಚಿದ ಕನ್ನಡಿಗ; ಐಪಿಎಲ್​ಗೆ ಮುನ್ನವೇ ಖಡಕ್​​ ವಾರ್ನಿಂಗ್​​​

https://newsfirstlive.com/wp-content/uploads/2024/08/Abhinav-Manohar_Kannadiga.jpg

Load More