newsfirstkannada.com

ಕೊಳಚೆ ನೀರು ಬಳಕೆಗೆ ತಮಿಳುನಾಡು ವಿರೋಧ; ಟ್ರಿಬ್ಯೂನಲ್ ರಚನೆ ಬೇಡ ಎಂದ DCM DK ಶಿವಕುಮಾರ್

Share :

30-06-2023

    ನಾವು ಟ್ರಿಬ್ಯೂನಲ್ ರಚನೆ ಬೇಡ ಎಂದು ಮನವಿ ಮಾಡಿದ್ದೇವೆ

    ಸುಪ್ರೀಂ ಆದೇಶದಂತೆ 5ನೇ ತಾರೀಖಿನೊಳಗೆ ಟ್ರಿಬ್ಯೂನಲ್ ರಚನೆ

    ಟ್ರಿಬ್ಯೂನಲ್ ರಚನೆ ಮಾಡಿದರೆ ಕರ್ನಾಟಕಕ್ಕೆ ತೊಂದರೆ ಆಗುತ್ತೆ ಎಂದ ಡಿಕೆಶಿ

ನವದೆಹಲಿ: ಪೆನ್ನಿಯಾರ್ ಕೊಳಚೆ ನೀರು ಬಳಕೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿ ಟ್ರಿಬ್ಯೂನಲ್ ರಚನೆ ಮಾಡುವಂತೆ ತಕರಾರು ಎತ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಹೇಳಿದ್ದಾರೆ.

ಈ ಬಗ್ಗೆ ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ನಾನು ಸಚಿವನಾದ ಮೇಲೆ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಸಚಿವರ ಭೇಟಿಗೆ ಬಂದಿದ್ದೇನೆ. ತಮಿಳುನಾಡು ಸರ್ಕಾರ ಪೆನ್ನಿಯಾರ್ ಕೊಳಚೆ ನೀರು ಬಳಕೆಗೆ ವಿರೋಧ ವ್ಯಕ್ತಪಡಿಸಿ, ಟ್ರಿಬ್ಯೂನಲ್ ರಚನೆಗೆ ಮುಂದಾಗಿದೆ. ಈ ಯೋಜನೆ ತುಂಬಾ ಒಳ್ಳೆಯದು ಎಂದು ಕೇಂದ್ರ ಹೇಳಿದರೂ ಸುಪ್ರೀಂಕೋರ್ಟ್ ಆದೇಶದಂತೆ ಜುಲೈ 5ರೊಳಗೆ ಟ್ರಿಬ್ಯೂನಲ್ ರಚನೆ ಮಾಡಿ ಎನ್ನುತ್ತಿದೆ ಎಂದು ಡಿಸಿಎಂ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಉಪಯೋಗಿಸಿದ ನೀರಿನಿಂದ ಕೆರೆ ತುಂಬುವ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ನಾವು ಟ್ರಿಬ್ಯೂನಲ್ ರಚನೆ ಬೇಡ, ಕುಳಿತು ಚರ್ಚೆ ಮಾಡೋಣ. ಇದರಲ್ಲಿ 1 ಟಿಎಂಸಿ ಯೋಜನೆ ಕೂಡ ಇಲ್ಲ. ಕೇವಲ ಕೆರೆ ತುಂಬಿಸಿ ಅಂತರ್ಜಲ ಹೆಚ್ಚಳ ಮಾಡುವುದಕ್ಕಾಗಿ ಟ್ರಿಬ್ಯೂನಲ್ ರಚನೆ ಮಾಡಿದರೆ ನಮಗೆ ತೊಂದರೆಯಾಗುತ್ತೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಹ ಪ್ರಧಾನಿಗೆ ಪತ್ರ ಬರೆಯಲಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ಮೇಕೆದಾಟು ಬಗ್ಗೆ ನಮ್ಮ ಕಾನೂನು ತಜ್ಞರ ಜತೆ ಚರ್ಚೆ ಮಾಡಬೇಕಿದೆ. ಈ ಯೋಜನೆ ಎಷ್ಟು ತಡವಾಗುತ್ತದೆ ಅಷ್ಟು ಹಣ ಹೆಚ್ಚಾಗಿ ವೆಚ್ಚವಾಗಲಿದೆ. ಈಗಾಗಲೇ ಇದು 13 ಸಾವಿರ ಕೋಟಿ ರೂ.ಗಳ ವೆಚ್ಚವಾಗಿದೆ. ನಮಗೆ ಯಾರ ಜೊತೆಯು ಜಗಳ ಮಾಡಲು ಇಷ್ಟವಿಲ್ಲ. ಕಳೆದ ಬಾರಿ 700 ಟಿಎಂಸಿಗೂ ಅಧಿಕ ನೀರು ಸಮುದ್ರ ಪಾಲಾಗಿದೆ. ಆದರೆ, ಈ ಬಾರಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಈ ವಾಸ್ತವವನ್ನು ತಿಳಿಯಲು ಜುಲೈ 8 ಮತ್ತು 9 ರಂದು ಕೆಆರ್​ಎಸ್​ನಲ್ಲಿ ಸಭೆ ನಿಗದಿ ಮಾಡಿದ್ದೇವೆ ಎಂದು ಇದೇ ವೇಳೆ ಡಿಸಿಎಂ ತಿಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಳಚೆ ನೀರು ಬಳಕೆಗೆ ತಮಿಳುನಾಡು ವಿರೋಧ; ಟ್ರಿಬ್ಯೂನಲ್ ರಚನೆ ಬೇಡ ಎಂದ DCM DK ಶಿವಕುಮಾರ್

https://newsfirstlive.com/wp-content/uploads/2023/06/DCM_DK_SHIVAKUMAR.jpg

Load More