ಕ್ಯಾರೋಲಿನಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿರೋ ಡಿಕೆ ಶಿವಕುಮಾರ್
ಅಮೆರಿಕಾದಲ್ಲಿ ರಾಜತಾಂತ್ರಿಕ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿ
ಕಮಲಾ ಹ್ಯಾರಿಸ್ ಆಹ್ವಾನದ ಸುದ್ದಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಒಂದು ಕಡೆ ಸಿದ್ದರಾಮಯ್ಯ ಮುಡಾ ಕೇಸ್ ಹಾಗೂ ಸಿಎಂ ಬದಲಾವಣೆ ಟೆನ್ಶನ್ನಲ್ಲಿದ್ರೆ, ಇನ್ನೊಂದು ಕಡೆ ಡಿಸಿಎಂ ಡಿಕೆಶಿ ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಇಂದಿನಿಂದ ಕುಟುಂಬದ ಜೊತೆ ಅಮೆರಿಕಾ ಟ್ರಿಪ್ ಪ್ಲ್ಯಾನ್ ಮಾಡಿದ್ದಾರೆ. ವಿಶೇಷ ಅಂದ್ರೆ ಅಮೆರಿಕ ಅಧ್ಯಕ್ಷ ಚುನಾವಣೆ ಅಭ್ಯರ್ಥಿ ಕಮಲಾ ಹ್ಯಾರಿಸ್ ಟ್ರಸ್ಟ್ ಜೊತೆ ಡಿಕೆಶಿ ನಂಟು ಹೊಂದಿದ್ದು ಕುತೂಹಲ ಮೂಡಿಸಿದೆ.
ಸಿಎಂ ವಿರುದ್ಧ ಮುಡಾ ಕೇಸ್ ಪ್ರಾಸಿಕ್ಯೂಷನ್ ಶುರುವಾಗಿದ್ದೇ ಆಗಿದ್ದು, ರಾಜ್ಯ ಹಸ್ತಪಾಳಯದಲ್ಲಿ ಸಂಚಲನಕಾರಿ ಬೆಳವಣಿಗೆಗಳು ನಡೀತಾ ಇವೆ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ ಪಾಟೀಲ್ ಸೇರಿದಂತೆ ಕೆಲವು ಘಟಾನುಘಟಿಗಳು ಸಿಎಂ ಕುರ್ಚಿಗಾಗಿ ಟವೆಲ್ ಹಾಕಿದ್ದಾರೆ. ದೆಹಲಿ ನಾಯಕರನ್ನೂ ಭೇಟಿ ಮಾಡಿ, ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಆದ್ರೆ ಸಿಎಂ ರೇಸ್ನಲ್ಲಿರೋ ಡಿಕೆಶಿ ಮಾತ್ರ ಸೈಲೆಂಟ್ ಆಗಿಬಿಟ್ಟಿದ್ದಾರೆ.
ಇದನ್ನೂ ಓದಿ: ಸಿಎಂ ಆಗಲು ಸಾಹುಕಾರ್ಗಿದೆ ಸುವರ್ಣಾವಕಾಶ; ಸತೀಶ್ ಜಾರಕಿಹೊಳಿಗಿರೋ ಆ ಶಕ್ತಿಗಳೇನು?
ಸಿಎಂ ಬದಲಾವಣೆ ಚರ್ಚೆಯ ನಡುವೆಯೇ ಡಿಕೆ ಮಾತ್ರ ಕುಟುಂಬ ಸಮೇತ ಫಾರಿನ್ ಟೂರ್ ಕೈಗೊಂಡಿದ್ದಾರೆ. ನಿನ್ನೆ ಸಂಜೆಯೇ ಕುಟುಂಬ ಸಮೇತ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅದಕ್ಕೂ ಮೊದಲು ಮಧ್ಯಾಹ್ನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ, ಪ್ರವಾಸದ ಬಗ್ಗೆ ಮಾಹಿತಿ ನೀಡಿದ್ರು. ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ರು. ಸಿಎಂ ಕುರ್ಚಿಗಾಗಿ ಕೆಲವರು ಲಾಭಿ ನಡೆಸ್ತಿರೋ ಬಗ್ಗೆಯೂ ಗಂಭೀರ ಮಾತುಕತೆ ನಡೆಸಿದ್ದಾರೆ ಅಂತ ತಿಳಿದು ಬಂದಿದೆ.
ಅಂದಾಗೆ ನಾರ್ಥ್ ಕ್ಯಾರೋಲಿನಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿಯಾಗಲಿದ್ದಾರೆ. ಅಲ್ಲದೇ ಅಮೆರಿಕ ಅಧ್ಯಕ್ಷ ಚುನಾವಣೆಗೆ ನಿಂತಿರೋ ಭಾರತ ಮೂಲದ ಕಮಲಾ ಹ್ಯಾರಿಸ್ರನ್ನೂ ಭೇಟಿಯಾಗಲಿದ್ದಾರೆ ಅಂತ ಹೇಳಲಾಗ್ತಿದೆ. ಅಮೆರಿಕಾದಲ್ಲಿ ನಡೆಯಲಿರುವ ರಾಜತಾಂತ್ರಿಕ ಸಮಾವೇಶದಲ್ಲಿ ಡಿಸಿಎಂ ಭಾಗಿಯಾಗೋ ಸಾಧ್ಯತೆ ಇದೆ. ಅಲ್ಲಿ ಪ್ರಜಾಪ್ರಭುತ್ವ ಮತ್ತು ಚುನಾವಣೆ ಕುರಿತ ಸಂವಾದ ಆಯೋಜನೆ ಆಗಿದೆಯಂತೆ. ಇದರಲ್ಲಿ ಬರಾಕ್ ಒಬಾಮಾ ಕೂಡ ಭಾಗಿಯಾಗಲಿದ್ದಾರಂತೆ.
ನಾನು ಕೈಗೊಳ್ಳುತ್ತಿರುವ ಅಮೆರಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ನನ್ನ ಸ್ಪಷ್ಟನೆ ಇದು. ಈ ಪ್ರವಾಸವು ವೈಯಕ್ತಿಕವಾಗಿದ್ದು, ಯಾವುದೇ ರಾಜಕೀಯ ಉದ್ದೇಶವನ್ನು ಹೊಂದಿಲ್ಲ. ಅಥವಾ ನನಗೆ ಯಾವುದೇ ರಾಜಕೀಯ ಆಹ್ವಾನಗಳೂ ಬಂದಿಲ್ಲ.
ಸಾರ್ವಜನಿಕರು ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡದಂತೆ ವಿನಂತಿಸುತ್ತೇನೆ.
— DK Shivakumar (@DKShivakumar) September 8, 2024
ಈ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ಗೂ ಸ್ಪೆಷಲ್ ಆಹ್ವಾನ ಬಂದಿದೆ ಅಂತ ಹೇಳಲಾಗ್ತಿದ್ದು ಕುತೂಹಲ ಮೂಡಿಸಿದೆ.ಇನ್ನು ಕಮಲಾ ಹ್ಯಾರಿಸ್ಗೂ ಡಿಕೆಶಿಗೂ ವ್ಯಾವಹಾರಿಕ ನಂಟಿದ್ದಂತೆ ಕಾಣ್ತಿದೆ. ಕಮಲಾ ಹ್ಯಾರಿಸ್ ತಾಯಿ ಶ್ಯಾಮಲಾ ಗೋಪಾಲನ್ ಅವರ ಟ್ರಸ್ಟ್ ಒಂದರ ಜೊತೆ ಡಿಕೆಶಿ ನಂಟು ಹೊಂದಿದ್ದಾರೆ ಅಂತ ಹೇಳಲಾಗ್ತಿದೆ. ಈ ಟ್ರಸ್ಟ್ಗೆ ಡಿಕೆಶಿ ನೆರವು ನೀಡಿದ್ದಾರಂತೆ. ಹೀಗಾಗಿ ಉಭಯ ನಾಯಕರು ಉತ್ತಮ ಬಾಂಧವ್ಯ ಹೊಂದಿದ್ದು, ಅಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದಾರೆ. ಚಿಕಾಗೋದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರನ್ನೂ ಭೇಟಿಯಾಗಲಿದ್ದಾರೆ ಅಂತ ಹೇಳಲಾಗ್ತಿದೆ.
ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದಿಂದ ಮೋದಿ ಆಪ್ತ ಡೊನಾಲ್ಡ್ ಟ್ರಂಪ್ ಸ್ಪರ್ಧೆ ಮಾಡ್ತಿದ್ದಾರೆ. ಅ ವಿರುದ್ದ ಡೆಮಾಕ್ರೆಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಸ್ಪರ್ಧೆ ಮಾಡ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ಡಿಕೆಶಿ ಕಮಲಾ ಹ್ಯಾರಿಸ್ ಭೇಟಿ ಮಾಡ್ತಿರೋದ್ರಿಂದ, ಭಾರೀ ಕುತೂಹಲ ಮೂಡಿಸಿದೆ. ವಿದೇಶ ಪ್ರವಾಸದ ಬಗ್ಗೆ ಕೇಳಿದ್ರೆ ಡಿಕೆ ಹೇಳೋದು ಇದು ನಮ್ಮ ಖಾಸಗಿ ಪ್ರವಾಸ ಅಂತ. ಸಿಎಂ ಕುರ್ಚಿ ಗದ್ದಲದ ನಡುವೆ ಡಿಕೆ ಅಮೆರಿಕ ಪ್ರವಾಸದ ಗುಟ್ಟು ಎಲ್ಲರನ್ನ ನಿಬ್ಬೆರಗಾಗಿಸಿದೆ. ಒಂದ್ವೇಳೆ ಡಿಸಿಎಂ ಸೈಲೆಂಟಾಗಿ ಬಿಜೆಪಿಗೆ ಚೆಕ್ ಮೇಟ್ ಇಡಲು ಮುಂದಾಗಿದ್ದಾರಾ ಅನ್ನೋದು ಕುತೂಹಲ ಮೂಡಿಸದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ