newsfirstkannada.com

ಖಾಕಿ ಫುಲ್ ಅಲರ್ಟ್‌; ಡಿಜಿ, ಐಜಿಪಿ ಅಲೋಕ್ ಮೋಹನ್​ರಿಂದ ಪೊಲೀಸರಿಗೆ ಕೊಟ್ಟ ಖಡಕ್​ ಸೂಚನೆಗಳೇನು?

Share :

22-06-2023

    ನಿತ್ಯ ತಮ್ಮ ವ್ಯಾಪ್ತಿಯ ಒಂದು ಠಾಣೆಗಾದರೂ ಉನ್ನತ ಅಧಿಕಾರಿ ಭೇಟಿ ನೀಡಬೇಕು

    ರಾಜ್ಯದಲ್ಲಿ ಪೊಲೀಸ್​ ಇಲಾಖೆ ಫುಲ್​ ಅಲರ್ಟ್​, ಅಧಿಕಾರಿಗಳಿಗೆ ಜವಾಬ್ದಾರಿ..!

    ಸಿಬ್ಬಂದಿ ಬಂದೋಬಸ್ತ್ ಕಾರ್ಯದಲ್ಲಿದ್ರೇ ಅಧಿಕಾರಿಗಳು ಸಂಪರ್ಕದಲ್ಲಿರಬೇಕು

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್​ ಇಲಾಖೆ ಫುಲ್​ ಅಲರ್ಟ್​ ಆಗಿ ಕೆಲಸ ಮಾಡಲು ಮುಂದಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಡಿಜಿ, ಐಜಿಪಿ ಡಾ. ಅಲೋಕ್ ಮೋಹನ್ ಅವರು ರಾಜ್ಯದ ಪೊಲೀಸ್​ ಇಲಾಖೆಯ ಅಧಿಕಾರಿಗಳಿಗೆ ಖಡಕ್​ ಸೂಚನೆಗಳನ್ನು ಕೊಟ್ಟಿದ್ದಾರೆ.

ರಾಜ್ಯದ ಎಲ್ಲಾ ಕಮಿಷನರ್, ಐಜಿಪಿ, ಡಿಐಜಿಪಿ ಹಾಗೂ ಎಸ್​ಪಿಗಳಿಗೆ ಡಿಜಿ, ಐಜಿಪಿ ಅಲೋಕ್ ಮೋಹನ್ ಅವರು ಕೆಲವು ಸಲಹೆ, ಸೂಚನೆಗಳನ್ನ ನೀಡಿದ್ದಾರೆ. ನಿತ್ಯ ತಮ್ಮ ವ್ಯಾಪ್ತಿಗೆ ಬರುವ ಒಂದು ಠಾಣೆಗಾದ್ರು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಪೊಲೀಸರ ಕಾರ್ಯ ವೈಖರಿ ಬಗ್ಗೆ ತಿಳಿದುಕೊಂಡು ಪರಿಶೀಲನೆ ನಡೆಸಬೇಕು. ಕಮಿಷನರ್ ಹಾಗೂ ಎಸ್​ಪಿ ವಾರದಲ್ಲಿ ಒಂದು ಬಾರಿಯಾಗಲಿ ರಾತ್ರಿ ಪಾಳಿಯ ರೌಂಡ್ಸ್ ಹಾಕಬೇಕು ಎಂದು ಸೂಚಿಸಿದ್ದಾರೆ.

ಒಂದು ವೇಳೆ ಪೊಲೀಸ್​ ಸಿಬ್ಬಂದಿ ಬಂದೋಬಸ್ತ್ ಡ್ಯೂಟಿಯಲ್ಲಿದ್ದರೇ ಮೇಲ್ವರ್ಗದ ಅಧಿಕಾರಿಗಳು ಅವರ ಜೊತೆ ಸಂಪರ್ಕದಲ್ಲಿದ್ದು ಮಾಹಿತಿಯನ್ನು ಪಡೆಯುತ್ತಿರವಬೇಕು. ಇದು ಅಲ್ಲದೇ ಠಾಣೆಯಲ್ಲಿನ ಕೆಳಹಂತದ ಕಾನ್​ಸ್ಟೆಬಲ್ ಮತ್ತು ಹೆಡ್ ಕಾನ್​ಸ್ಟೆಬಲ್ ಸಿಬ್ಬಂದಿ ಜೊತೆ ಇಂಟಱಕ್ಟ್ ಮಾಡುತ್ತಿರಬೇಕು ಎಂದು ಅಲೋಕ್ ಮೋಹನ್ ಖಡಕ್​ ಆಗಿ ಅಧಿಕಾರಿಗಳಿಗೆ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖಾಕಿ ಫುಲ್ ಅಲರ್ಟ್‌; ಡಿಜಿ, ಐಜಿಪಿ ಅಲೋಕ್ ಮೋಹನ್​ರಿಂದ ಪೊಲೀಸರಿಗೆ ಕೊಟ್ಟ ಖಡಕ್​ ಸೂಚನೆಗಳೇನು?

https://newsfirstlive.com/wp-content/uploads/2023/06/DG_IGP_ALOK_MOHAN_2.jpg

Load More