newsfirstkannada.com

Karnataka Rain: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ.. ಶಿವಮೊಗ್ಗ, ಯಾದಗಿರಿಯಲ್ಲಿ ಸಿಕ್ಕಾಪಟ್ಟೆ ಜೋರು.. ಯಾವೆಲ್ಲ ಜಿಲ್ಲೆಯ ಶಾಲೆಗಳಿಗೆ ರಜೆ..?

Share :

21-07-2023

  ಧಾರವಾಡದ ಕಂಬಾರಗಣವಿ ಸೇತುವೆ ಸಂಪೂರ್ಣ ಜಲಾವೃತ

  ಗಡಿ ಜಿಲ್ಲೆ ಬೀದರ್‌ನಲ್ಲಿ ಕಳೆದ 3 ದಿನಗಳಿಂದ ಜಿಟಿಜಿಟಿ ಮಳೆ

  ಕೊಪ್ಪಳ ಹಲವೆಡೆ 4 ದಿನಗಳಿಂದ ಬಿಟ್ಟು ಬಿಡದೆ ಭಾರೀ ಮಳೆ..!

ಇಷ್ಟುದಿನ ಕಣ್ಣಾಮುಚ್ಚಾಲೆ ಆಟವಾಡ್ತಿದ್ದ ವರುಣದೇವ ಇದೀಗ ರಾಜ್ಯದಾದ್ಯಂತ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆಯಾಗ್ತಿರುವ ಪರಿಣಾಮ ನದಿಗಳಿಗೆ ಜೀವ ಕಳೆ ಬಂದಿದೆ. ಕರುನಾಡಲ್ಲಿ ಸ್ನಾನಕ್ಕೆ ಕೂತಿರುವ ವರುಣದೇವ ಹಲವು ಕಡೆಗಳಲ್ಲಿ ಅವಾಂತರಗಳನ್ನು ಸೃಷ್ಟಿಸಿದ್ದಾನೆ.

ಮಳೆರಾಯ ಲೇಟಾಗಿ ಬಂದ್ರು ಲೇಟೆಸ್ಟಾಗಿ ಎಂಟ್ರಿ ಕೊಟ್ಟಿದ್ದಾನೆ. ಮುಂಗಾರು ಕೊರೆತೆಯಿಂದ ಕಂಗಾಲಾಗಿದ್ದ ರೈತರ ಮೇಲೆ ಕೊಂಚ ಕೃಪೆ ತೋರಿದ್ದಾನೆ. ಮಹಾರಾಷ್ಟ್ರದ ಪಶ್ಚಿಮಭಾಗದಲ್ಲಿ ಉತ್ತಮ ಮಳೆಯಾಗ್ತಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ನೀರಿಲ್ಲದೇ ಬರಿದಾಗಿದ್ದ ನದಿಗಳು ಮತ್ತೆ ತುಂಬಿ ಹರಿಯುತ್ತಿವೆ.

ವರುಣನ ಆರ್ಭಟಕ್ಕೆ ಶಿವಮೊಗ್ಗ ಶೇಕ್!

ಅತ್ತ, ಪುನರ್ವಸು ಮಳೆಯ ರೌದ್ರನರ್ತನಕ್ಕೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ತೀರ್ಥಹಳ್ಳಿಯ ಬಾಳೆಬೈಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಂಪೂರ್ಣ ಜಲಾವೃತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ. ಮಳೆರಾಯನ ಅವಾಂತರದಿಂದ ನಗರದಲ್ಲಿ ನೆಟ್ವರ್ಕ್ ಕಡಿತಗೊಂಡಿದ್ದು, ಜನರು ಪರಿತಪಿಸ್ತಿದ್ದಾರೆ.

ವರುಣನ ಆಟಕ್ಕೆ ನಲುಗಿದ ಧಾರವಾಡ

ಧಾರವಾಡದಲ್ಲಿ ವರುಣದೇವ ತನ್ನ ಆಟಾಟೋಪ ಮುಂದುವರೆಸಿದ್ದಾನೆ. ಮಳೆಯ ಅಬ್ಬರಕ್ಕೆ ಜಿಲ್ಲೆಯ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಸವಾರರು ಪರಾದಾಡ್ತಿದ್ದಾರೆ. ಹಾಗೇ, ಜಿಲ್ಲೆಯ ಕಂಬಾರಗಣವಿ ಸೇತುವೆ ಅಕ್ಷರಷಃ ಮುಳುಗಿದ್ದು, ಸೇತುವೆ ದಾಟಲು ಹೋಗಿ ಯುವಕನೊರ್ವ ಬೈಕ್ ಸಮೇತ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಬಳಿಕ ಸ್ಥಳೀಯರು ರಕ್ಷಣೆ ಮಾಡಿದ್ರು.

ವರುಣನ ನರ್ತನ.. ಕೊಪ್ಪಳ ಕಂಗಾಲು!

ಕೊಪ್ಪಳ ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಬಿಟ್ಟು ಬಿಡದೆ ಮಳೆಯಾಗ್ತಿದೆ. ನಿನ್ನೆ ಬೆಳ್ಳಗ್ಗೆ ಜಿಟಿ ಜಿಟಿ ಮಳೆಯಿಂದ ಎಂಟ್ರಿ ಕೊಟ್ಟ ವರುಣ ಸಂಜೆ ವೇಳೆಗೆ ವೇಗ ಪಡೆದುಕೊಂಡ. ಪರಿಣಾಮ ಶಾಲಾಯಿಂದ ಮನೆಗೆ ತೆರಳಲು ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಯ್ತು.

ಗದಗದಲ್ಲೂ ಮುಂದುವೆರೆದ ವರುಣನ ಲೀಲೆ!

ಗದಗದಲ್ಲೂ ವರುಣ ತನ್ನ ಲೀಲೆ ಮುಂದುವರೆದಿದೆ. ಧಾರಾಕಾರ ಮಳೆಯಾಗಿದ್ದ ಪರಿಣಾಮ ಜನ ಜೀವನ ಕೊಂಚ ವ್ಯತ್ಯಯವಾಗಿತ್ತು. ನಗರದ ಕರಿಯಮ್ಮನ ಕಲ್ಲು ಬಡಾವಣೆಯಲ್ಲಿ ಅಬ್ದುಲ್ ಕಲಾಂ ಕಾಲೇಜ್ ಹತ್ತಿರ ಮನೆಯೊಂದರ ಮೇಲೆ ಮರ ಉರುಳಿ ಬಿದ್ದಿದೆ.. ಮರ ಉರುಳಿ ಬಿದ್ದಿದ್ದರಿಂದ ವಿದ್ಯುತ್ ತಂತಿಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ

ಮಳೆರಾಯನಿಗೆ ಬೆದರಿದ ಬೀದರ್ ಜನ!

ಗಡಿ ಜಿಲ್ಲೆ ಬೀದರ್‌ನಲ್ಲಿ ಕಳೆದ 3 ದಿನಗಳಿಂದ ಜಿಟಿಜಿಟಿ ಮಳೆ ಶುರುವಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ನಿರಂತರ ಮಳೆಯಿಂದ ರಸ್ತೆಗಳೆಲ್ಲ ಗುಂಡಿಮಯವಾಗಿದ್ವು. ಗುಂಡಿಯಲ್ಲಿ ಬಿದ್ದ ವಾಹನಗಳನ್ನ ಮೇಲಕ್ಕೆತ್ತಲು ಚಾಲಕರು ಹರಸಾಹಸ ಪಟ್ಟಿದ್ದಾರೆ.

ಮತ್ತೊಂದ್ಕಡೆ, ಬೀದರ್ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ಸಿಂದಬಂದಗಿ ಗ್ರಾಮದಲ್ಲಿ ಸುರಿದ ಬಾರಿ ಮಳೆಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಜಲಾವೃತಗೊಂಡಿದೆ. ಶಾಲಾ ಆವರಣದಲ್ಲಿ ನೀರು ನಿಂತ ಹಿನ್ನೆಲೆ ಶಾಲೆಗೆ ರಜೆ‌ ಘೋಷಣೆ ಮಾಡಲಾಗಿತ್ತು.

72 ಗಂಟೆ ಮಳೆ.. ಕೆರೆಯಂತಾದ ಜಮೀನುಗಳು !

ಕಲಬುರಗಿ ಜಿಲ್ಲೆಯಲ್ಲಿ ವರುಣನ ಆರ್ಭಟ ಮಾತ್ರ ಕಮ್ಮಿಯಾಗಿಲ್ಲ. ಪರಿಣಾಮ, ರೈತರ ಜಮೀನುಗಳು ಅಕ್ಷರಷಃ ಕೆರೆಯಂತೆ ಮಾರ್ಪಟ್ಟಿವೆ.. ಚಿತ್ತಾಪುರ ತಾಲೂಕಿನ ಬಹುತೇಕ ಹೊಲಗದ್ದೆಗಳು ಸಂಪೂರ್ಣ ಜಲಾವೃತವಾಗಿದ್ದು, ರೈತರು ಲಾಸ್ ಆಗೋ ಭೀತಿಯಲ್ಲಿದ್ದಾರೆ. ಮತ್ತೊಂದ್ಕಡೆ, ನಗರದ ಖಮರ್ ಕಾಲೋನಿಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ವಿದ್ಯುತ್ ಕಂಬ ಸುಟ್ಟು ಭಸ್ಮವಾಗಿದೆ.

ಭಾರೀ ಮಳೆ.. ಯಾದಗಿರಿಯಲ್ಲಿ ಶಾಲೆಗೆ ರಜೆ!

ಯಾದಗಿರಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಜಿಲ್ಲೆಯ ಪ್ರಾಥಮಿಕ, ಪ್ರೌಢ, ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ..

ಇಂದಿನಿಂದ ರಾಜ್ಯದಲ್ಲಿ 4 ದಿನಗಳ ಕಾಲ ಮಳೆಯಾಗೋದಾಗಿ ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆಯ ಗಂಟೆ ಭಾರಿಸಿದೆ. ಒಂದು ಕಡೆ ಕೊನೆಗೂ ಮಳೆರಾಯ ಎಂಟ್ರಿ ಕೊಟ್ಟ ಅಂತಾ ಜನರು ಸಂತಸ ಪಟ್ಟರೆ, ಮತ್ತೊಂದು ಕಡೆ ಒಂದೇ ದಿನದಲ್ಲಿ ಹಲವಡೆ ಅವಾಂತರಗಳನ್ನೂ ಸೃಷ್ಟಿಸಿಬಿಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka Rain: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ.. ಶಿವಮೊಗ್ಗ, ಯಾದಗಿರಿಯಲ್ಲಿ ಸಿಕ್ಕಾಪಟ್ಟೆ ಜೋರು.. ಯಾವೆಲ್ಲ ಜಿಲ್ಲೆಯ ಶಾಲೆಗಳಿಗೆ ರಜೆ..?

https://newsfirstlive.com/wp-content/uploads/2023/07/SMG_RAIN-1.jpg

Load More