newsfirstkannada.com

×

WATCH: ಅದೃಷ್ಟ ಬದಲಾಯಿಸಿದ ಟೊಮ್ಯಾಟೋ.. ಕೇವಲ 30 ಗುಂಟೆ ಜಾಗದಲ್ಲಿ 7 ಲಕ್ಷ ರೂಪಾಯಿ ಗಳಿಸಿದ ರಾಜ್ಯದ ರೈತ..!

Share :

Published July 13, 2023 at 12:23pm

Update July 13, 2023 at 4:43pm

    7 ಲಕ್ಷ ಪಡೆಯಲು ಮಾಡಿದ ಖರ್ಚು ತುಂಬಾನೇ ಕಮ್ಮಿ..!

    500ಕ್ಕೂ ಹೆಚ್ಚು ಬಾಕ್ಸ್ ಮಾರಾಟ ಮಾಡಿರುವ ರೈತ

    ‘ವೆಲ್ಕಮ್’ ಎಂಬ ಥಳಿಯ ಟೊಮ್ಯಾಟೊ ಬೆಳೆದಿದ್ದ ರೈತ

ದೇಶದ ಯಾವುದೇ ಮೂಲೆಯಲ್ಲಿರುವ ಅಡುಗೆ ಮನೆಯಲ್ಲಿ ಕೇಳಿ ಬರುತ್ತಿರೋ ಒಂದೇ ಒಂದು ಪದ ಏನಂದ್ರೆ, ಟೊಮ್ಯಾಟೋ. 10 ರೂಪಾಯಿ ಕೆಜಿಗೆ ಸಿಗುತ್ತಿದ್ದ ಟೊಮ್ಯಾಟೋ ಪೆಟ್ರೋಲ್ ದರವನ್ನೂ ಮೀರಿ ಹೋಗಿದೆ. ವಿಷಯ ಏನಂದರೆ ರಾಜ್ಯದ ರೈತನೊಬ್ಬ ಕೇವಲ 30 ಗುಂಟೆ ಜಾಗದಲ್ಲಿ ಬರೋಬ್ಬರಿ 7 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೊ ಬೆಳೆದು ಮಾರಾಟ ಮಾಡಿದ್ದಾರೆ.

ಹೌದು, ಚಿತ್ರದುರ್ಗ ತಾಲೂಕಿನ ಸೀಗೆಹಳ್ಳಿ ಗ್ರಾಮದ ರೈತ ರಂಗಸ್ವಾಮಿ ತಮ್ಮ 30 ಗುಂಟೆ ಜಾಗದಲ್ಲಿ ಟೊಮ್ಯಾಟೋ ಹಾಕಿದ್ದರು. ‘ವೆಲ್ಕಮ್’ ಎಂಬ ಟೊಮ್ಯಾಟೊ ತಳಿಯನ್ನು ಬೆಳೆದಿದ್ದರು. ಇದೀಗ ಟೊಮ್ಯಾಟೊಗೆ ಬಂಪರ್ ಬೆಳೆ ಬಂದಿರೋ ಹಿನ್ನೆಲೆಯಲ್ಲಿ ಲಕ್ಷ ಲಕ್ಷ ಎಣಿಸಿದ್ದಾರೆ.

ಈಗಾಗಲೇ 6 ಬಾರಿಗಿಂತ ಹೆಚ್ಚು ಬಾರಿ ಬೆಳೆಯನ್ನು ಕಟಾವ್ ಮಾಡಿದ್ದಾರೆ. ಕಟಾವ್ ಮಾಡಿದ ಬೆಳೆಯನ್ನು ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿರುವ ಮಾರುಕಟ್ಟೆಗೆ ಕಳುಹಿಸಿದ್ದಾರೆ. ಮೊದಲ ಬಾರಿಯ ಕೊಯ್ಲಿಗೆ 23 ಬಾಕ್ಸ್ ಟೊಮ್ಯಾಟೊ ಸಿಕ್ಕದೆ. ಈ ವೇಳೆ ಪ್ರತಿ ಬಾಕ್ಸ್​ಗೆ 600 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಎರಡನೇ ಬಾರಿ 50 ಬಾಕ್ಸ್​ ಇಳುವರಿ ಸಿಕ್ಕಿದ್ದು, ಅದನ್ನು 800 ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಮೂರನೇ ಕೊಯ್ಲಿಗೆ 80 ಬಾಕ್ಸ್​ ಇಳುವರಿ ಸಿಕ್ಕಿದ್ದು 1300 ದರದಲ್ಲಿ ಮಾರಾಟ ಮಾಡಿದ್ದಾರೆ. ಹಾಗೆಯೇ 4ನೇ ಬಾರಿ ಕೊಯ್ಲಿಗೆ 110 ಬಾಕ್ಸ್ ಇಳುವರಿ ಸಿಕ್ಕಿದ್ದು 1800 ದರದಲ್ಲಿ ಮಾರಿದ್ದಾರೆ. 5ನೇ ಬಾರಿ 110 ಬಾಕ್ಸ್ ಇಳುವರಿ ಸಿಕ್ಕಿದ್ದು 2000 ದರಕ್ಕೆ ಮಾರಿದ್ದಾರೆ. 6ನೇ ಬಾರಿಗೆ 90 ಬಾಕ್ಸ್ ಇಳುವರಿಯನ್ನು 1950 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಒಟ್ಟು 500ಕ್ಕೂ ಹೆಚ್ಚು ಬಾಕ್ಸ್ ಟೊಮ್ಯಾಟೋ ಮಾರಾಟ ಮಾಡಿದ್ದಾರೆ. ರಂಗಸ್ವಾಮಿಗೆ ಕೊನೆಯಲ್ಲಿ 30 ಗುಂಟೆ ಜಮೀನಿನಲ್ಲಿ 7 ಲಕ್ಷ ರೂಪಾಯಿಯಷ್ಟು ಆದಾಯ ಬಂದಿದೆ. ಇನ್ನೊಂದು ವಿಚಾರ ಅಂದರೆ ರೈತ ರಂಗಸ್ವಾಮಿ ಟೊಮ್ಯಾಟೊ ಬೆಳೆಯಲು 50 ಸಾವಿರ ರೂಪಾಯಿ ಖರ್ಚು ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಅದೃಷ್ಟ ಬದಲಾಯಿಸಿದ ಟೊಮ್ಯಾಟೋ.. ಕೇವಲ 30 ಗುಂಟೆ ಜಾಗದಲ್ಲಿ 7 ಲಕ್ಷ ರೂಪಾಯಿ ಗಳಿಸಿದ ರಾಜ್ಯದ ರೈತ..!

https://newsfirstlive.com/wp-content/uploads/2023/07/TOMOTO-1.jpg

Load More