newsfirstkannada.com

ದರ್ಶನ್ ರಕ್ಷಣೆ ಮಾಡೋ ಮಾತೇ ಇಲ್ಲ.. ತಿರುಗಿಬಿದ್ದ ಫಿಲ್ಮ್ ಛೇಂಬರ್; ಬ್ಯಾನ್ ಫಿಕ್ಸ್?

Share :

Published June 13, 2024 at 8:03pm

Update June 13, 2024 at 8:05pm

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸುದ್ದಿಗೋಷ್ಠಿಯಲ್ಲಿ ಏನಾಯ್ತು?

  ಇಲ್ಲಿ ಆಗಿರೋದು ಕೊಲೆ, ಅದರಿಂದ ನಾವು ನಟ ದರ್ಶನ್ ಪರ ವಹಿಸಲ್ಲ

  ನಟ ದರ್ಶನ್​ ಅವರ ಮುಂದಿನ ಸಿನಿ ಜರ್ನಿಗೆ ಫುಲ್​ಸ್ಟಾಪ್​ ಬೀಳುತ್ತಾ?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡಿರೋ ನಟ ದರ್ಶನ್ ಸಿನಿಮಾ ಭವಿಷ್ಯ ಏನಾಗುತ್ತೆ? ಸದ್ಯ ಎಲ್ಲರಿಗೂ ಇದೊಂದು ಪ್ರಶ್ನೆ ಹೆಚ್ಚಾಗಿ ಕಾಡುತ್ತಿದೆ. ಸದ್ಯ ನಟ ದರ್ಶನ್ ಸೇರಿ ಒಟ್ಟು 13 ಆರೋಪಿಗಳು ಪೊಲೀಸರ ಕಸ್ಟಡಿಯಲ್ಲಿ ಇದ್ದಾರೆ. ನಟ ದರ್ಶನ್​ ಅವರ ಸಿನಿ ಜರ್ನಿಗೆ ಫುಲ್​ಸ್ಟಾಪ್​ ಬೀಳುತ್ತಾ ಅನ್ನೋ ಪ್ರಶ್ನೆ ಒಂದ್ಕಡೆಯಾದ್ರೆ, ಇದರ ಮಧ್ಯೆ ಸಿನಿ ಪಯಣ ಇಲ್ಲಿಗೇ ಅಂತ್ಯವಾಗುತ್ತಾ? ಚಿತ್ರರಂಗದಿಂದ ದರ್ಶನ್​ ಬ್ಯಾನ್​ ಆಗ್ತಾರಾ ಅನ್ನೋ ಚರ್ಚೆ ಹೆಚ್ಚಾಗಿದೆ.

ಇದನ್ನೂ ಓದಿ: ದರ್ಶನ್‌ ಹುಚ್ಚು ಅಭಿಮಾನಿ.. ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದ A5 ನಂದೀಶ್ ಹಿನ್ನೆಲೆ ಏನು? ಯಾರಿವರು?

ಇದೀಗ ನಟ ದರ್ಶನ್​ನ ಬ್ಯಾನ್​ ಮಾಡ್ಬೇಕು ಅಂತ ಚಲನಚಿತ್ರ ವಾಣಿಜ್ಯಮಂಡಳಿಗೆ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ರಾಜ್ಯಾಧ್ಯಕ್ಷ ಕೆ.ಎನ್.ಪಿ ಸುರೇಶ್ ಲಿಖಿತ ದೂರು ನೀಡಿದ್ದರು. ದರ್ಶನ್ ಎಸಗಿರುವ ಕೃತ್ಯ ಕನ್ನಡ ಚಿತ್ರರಂಗಕ್ಕೆ ಕಪ್ಪುಚುಕ್ಕೆ ಆಗಬಾರದು. ಕೇಸ್ ಇತ್ಯರ್ಥವಾಗಿ ರೇಣುಕಾಸ್ವಾಮಿ ಕುಟುಂಬದವರಿಗೆ ನ್ಯಾಯ ದೊರಕುವವರೆಗೂ ನಟ ದರ್ಶನ್ ಅಭಿನಯದ ಚಲನಚಿತ್ರಗಳನ್ನು ಬಿಡುಗಡೆ ಮಾಡಬಾರದೆಂದು ದೂರು ನೀಡಲಾಗಿತ್ತು. ಈ ಸುದ್ದಿಗೋಷ್ಠಿಯಲ್ಲಿ ಕಲಾವಿದರ ಸಂಘ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಪ್ರದರ್ಶಕರ ಸಂಘ ಭಾಗಿಯಾಗಿದ್ದರು. ಜೊತೆಗೆ ಹಿರಿಯ ನಟ ದೊಡ್ಡಣ್ಣ, ಆರ್ ಸುಂದರ್ ರಾಜ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷರುಗಳು, ಭಾ ಮ ಹರೀಶ್, ನಿರ್ಮಾಪಕ ಚಿನ್ನೆಗೌಡ್ರು ಸೇರಿದಂತೆ ಹಲವು ಹಿರಿಯರು ಸಭೆಯಲ್ಲಿ ಭಾಗಿಯಾಗಿದ್ದರು.

ಇದೇ ವಿಚಾರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆದಿದೆ. ಈ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್ ಅವರು, ತನಿಖಾ ರಿಪೋರ್ಟ್ ಬಂದ ನಂತರ ನಾವು ಬ್ಯಾನ್ ವಿಚಾರ ತಿಳಿಸ್ತೀವಿ. ಸದ್ಯಕ್ಕೆ ಬ್ಯಾನ್ ಮಾಡುವ ಯಾವುದೇ ಯೋಚನೆ ಇಲ್ಲ. 2011ರಲ್ಲೂ ದರ್ಶನ್ ದಂಪತಿಗಳ ಮಧ್ಯೆ ನಾವು ಕಾಂಪ್ರಮೈಸ್ ಮಾಡಿದ್ವಿ. ಆದ್ರೀಗ ಕೊಲೆ ಪ್ರಕರಣ ಅದನ್ನು ಕಾನೂನು ಕ್ರಮ ತೆಗೆದುಕೊಳ್ಳುತ್ತೆ. ನಿರ್ಮಾಪಕರ ಕಷ್ಟಗಳೂ ಇರೋದ್ರಿಂದ ದರ್ಶನ್ ನಂಬಿ ಬಂಡವಾಳ ಹೂಡಿರುತ್ತಾರೆ. ಆದರಿಂದ ಅದೆಲ್ಲವನ್ನೂ ನೋಡಿಕೊಂಡು ನಾವು ಮುಂದಿನ ನಿರ್ಧಾರ ತೆಗೆದುಕೊಳ್ತೀವಿ. ಅದಕ್ಕೆ ಸಮಯದ ಅವಕಾಶ ಬೇಕು. ಕೂಡಲೇ ಬ್ಯಾನ್ ನಿರ್ಧಾರ ತೆಗೆದುಕೊಳ್ಳುವ ಯೋಚನೆ ಇಲ್ಲ. ನಾವು ದರ್ಶನ್ ರಕ್ಷಣೆ ಮಾಡಲ್ಲ. ಆಗಿರೋದು ಕೊಲೆ. ಆದರಿಂದ ನಾವು ದರ್ಶನ್ ಪರ ವಹಿಸಲ್ಲ. ನ್ಯಾಯಾಲಯದ ತೀರ್ಪಿನ ನಂತರ ಮುಂದಿನ ನಿರ್ಧಾರ ತಿಳಿಸ್ತೀವಿ. ತಮಿಳು, ತೆಲುಗು ಥರಾ ನಾವು ಬ್ಯಾನ್ ಮಾಡೋಕೆ ಆಗಲ್ಲ. ಆ ಇಂಡಸ್ಟ್ರಿಯಲ್ಲಿ ಬ್ಯಾನ್ ಆಗಿವೆ. ಆದ್ರೆ ಎರಡ್ಮೂರು ದಿನಗಳಲ್ಲೇ ಇಂಥಹ ನಿರ್ಧಾರ ತೆಗೆದುಕೊಂಡಿಲ್ಲ. ನಮಗೆ ದರ್ಶನ್ ಇಂಪಾರ್ಟೆಂಟ್ ಅಲ್ಲ. ಕೊಲೆ ಆದ ಕುಟುಂಬಕ್ಕೆ ನ್ಯಾಯ ದೊರಕಬೇಕು ಅಂತ ಹೇಳಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ರಕ್ಷಣೆ ಮಾಡೋ ಮಾತೇ ಇಲ್ಲ.. ತಿರುಗಿಬಿದ್ದ ಫಿಲ್ಮ್ ಛೇಂಬರ್; ಬ್ಯಾನ್ ಫಿಕ್ಸ್?

https://newsfirstlive.com/wp-content/uploads/2024/06/mn-suresh1.jpg

Load More