newsfirstkannada.com

ಬಸ್​ನಲ್ಲಿ ಸೀಟ್​ಗಾಗಿ​ ನೂಕುನುಗ್ಗಲು.. ಮಹಿಳೆಯರು ಅನ್ಕೊಂಡಿದ್ದೊಂದು, ಆಗಿರೋದು ಇನ್ನೊಂದು

Share :

19-06-2023

    ಬಸ್​ಗಳಿಲ್ಲದೇ ರಾತ್ರಿ ಹೊತ್ತಿಗೆ ವಾಪಸ್​ ಆಗಬೇಕೆನ್ನುವ ಜೋಶ್ ಮಾಯ

    ಭಾನುವಾರ ಅಮಾವಾಸ್ಯೆ ಹಿನ್ನೆಲೆ ಮೈಲಾರಕ್ಕೆ ಹರಿದು ಬಂದ ಭಕ್ತಸಾಗರ..!

    ಕಿಟಕಿ, ಬಾಗಿಲು, ಚಾಲಕರ ಬಾಗಿಲಿನಿಂದ ಬಸ್ ಹತ್ತಿ ಸೀಟ್​​ ಹಿಡಿದ ಜನ

ರಾಜ್ಯ ಸರ್ಕಾರದ ಮಹಿಳೆಯರಿಗೆ ಶಕ್ತಿ ಯೋಜನೆ ಘೋಷಿಸಿದಾಗಿನಿಂದ ಕೆಎಸ್​ಆರ್​ಟಿಸಿ ಬಸ್‌ನಲ್ಲಿ ಮಹಿಳೆಯರ ಪ್ರಯಾಣದ ಸಂಖ್ಯೆ ಹೆಚ್ಚಾಗಿದೆ. ಬಸ್‌ಗಳಲ್ಲಿ ಕನಿಷ್ಟ ಪಕ್ಷ ನಿಲ್ಲಲೂ ಅವಕಾಶ ಇಲ್ಲದಷ್ಟು ಭರ್ತಿಯಾಗಿ ಸಂಚರಿಸ್ತಿವೆ. ಫ್ರೀ ಎಂದ ಕೂಡಲೇ ಎಲ್ಲರೂ ಓಡಾಟ ಶುರುಮಾಡಿದ್ದಾರೆ. ಟ್ರಿಪ್​ ಏನೋ ಸರಿ. ಆದ್ರೆ ಇದರಿಂದ ಏನೇನ್​ ಎಫೆಕ್ಟ್​ ಆಗಿದೆ? ಎಲ್ಲೆಲ್ಲಿ ಪರದಾಡಿದ್ದಾರೆ?.

ನಿನ್ನೆ ವೀಕೆಂಡ್​​ ಅಂತೇಳಿ, ನಡೀರೀ ಧರ್ಮಸ್ಥಳ, ಕುಕ್ಕೆಗೆ ಹೋಗೋಣ. ಇಲ್ಲ ಟ್ರಿಪ್​ ಅಂತ ಆದ್ರೂ ಸಿಂಪಲ್​ ಆಗಿ ಒಂದು ರೌಂಡ್​ ಹಾಕ್ಕೊಂಡು ಬರೋಣ ಅಂತ ಮಹಿಳೆಯರು ಮನೆಯಿಂದ ಜೂಟ್​​ ಆಗಿದ್ರು. ಸರ್ಕಾರಿ ಬಸ್​ನಲ್ಲಿ ಶಕ್ತಿ ಯೋಜನೆಯ ಶಕ್ತಿ ತುಂಬ್ಕೊಂಡು ಸದುಪಯೋಗ ಪಡೆಸಿಕೊಂಡು ಜಾಲಿ ರೈಡ್​​ ಹೋಗಿದ್ರು. ಫುಲ್​ ಟಿಪ್​-ಟಾಪ್ ಆಗಿ ರೆಡಿಯಾಗಿದ್ದ ಜನ ಧಾರ್ಮಿಕ ಸ್ಥಳಗಳಿಗೆ ತೀರ್ಥಯಾತ್ರೆ ತೆರಳಿದ್ರು.

ವೀಕೆಂಡ್​ ಅಂತ ತೆರಳಿದ್ರೂ, ರಾತ್ರಿ ಬಸ್​ ಸಿಗದೆ ಒದ್ದಾಡಿದ್ರು!
ಹೀಗೆ ಮೆಜೆಸ್ಟಿಕ್​​ನಲ್ಲಿ ನಿನ್ನೆ ಜೋಶ್​ನಲ್ಲಿದ್ದ ಮಹಿಳೆಯರು ಯಾರೇ ಸಿಕ್ಕಿದ್ರು ನೀವ್​ ಹೆಲ್ಲಿಗೆ ಹೋಗ್ತಿದ್ದೀರಾ? ಎಷ್ಟು ಜನ ಹೋಗ್ತಿದ್ದೀರಾ.? ಏನ್​ ವೀಕೆಂಡ್​ ಫುಲ್​ ರೌಂಡ್ಸ್. ಎಂಜಾಯ್​ ಎಂಜಾಯ್​ ಅಂತಿದ್ರು. ಅದಕ್ಕೆ ಪ್ರತ್ಯುತ್ತರವಾಗಿ​ ನಿಮಗೂ ಫ್ರೀನೇ ತಾನೆ. ನೀಮಗೂ ಲಾಟ್ರಿನೇ. ನಡೀರೀ, ಹತ್ರೀ ಬಸ್​ ಹೊಡೀರೀ ರೌಂಡ್ಸ್​ ಎನ್ನುತ್ತಿದ್ದರು. ಬೇಗ ದರ್ಶನ ಮುಗಿಸಿ, ಬೇಗ ಬಂದು ಬಿಡೋಣ ಅಂದ್ರೆ, ರಾತ್ರಿ ಬಸ್​ ಇಲ್ಲದೇ ಅಲ್ಲೇ ಸ್ಟೇ ಆಗಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹರಿದುಬಂದ ಜನ ಸಾಗರ
ಬಸ್​ ಫ್ರೀ ಅಂತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿದ್ದ ಬೆಂಗಳೂರು, ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಉತ್ತರ ಕರ್ನಾಟಕದ ಮಹಿಳಾ ಭಕ್ತರು ದಂಡಿಯಾಗಿ ಆಗಮಿಸಿದ್ರು. ಭಾನುವಾರದ ಅಮಾವಾಸ್ಯೆ ಕಾರಣಕ್ಕೆ ಬೆಳ್ಳಂಬೆಳಗ್ಗೆ ಸರತಿ ಸಾಲಲ್ಲಿ ನಿಂತು ಪುಣ್ಯಕ್ಷೇತ್ರದ ದರ್ಶನ ಪಡೆದಿದ್ರು. ಆದ್ರೆ, ಮನೆಗಳಿಗೆ ಹಿಂತಿರುಗಲು ಬೇಕಾದ ಬಸ್​ಗಳು ಸಿಗದೇ ರಾತ್ರಿಯಿಡಿ ಬಸ್​​ ನಿಲ್ದಾಣದಲ್ಲೇ ಜಾಗರಣೆ ಮಾಡಿದ್ರು.

ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ಟ್ರಾಫಿಕ್ಕೋ.. ಟ್ರಾಫಿಕ್​!
ನಾಡದೇವಿ ಚಾಮುಂಡಿ ಬೆಟ್ಟ ಭಕ್ತ ಸಾಗರದಲ್ಲಿ ಮುಳುಗಿತ್ತು. ಬೆಟ್ಟದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಕಿ.ಮೀ​ವರೆಗೆ ವಾಹನಗಳು ಸಾಲಾಗಿ ನಿಂತು ಬಿಟ್ಟಿದ್ವು. ದೇವಿಕೆರೆ ಸಮೀಪದಿಂದ ಪಾರ್ಕಿಂಗ್ ತನಕ ಸುಮಾರು ಗಂಟೆಗಳ ಕಾಲ ವಾಹನಗಳು ನಿಂತಲ್ಲೆ ಉಸಿರು ಬಿಟ್ಟವು.

ಬೀದರ್ ಜಿಲ್ಲೆಯಲ್ಲಿ ಬಸ್​ಗಾಗಿ ಮಹಿಳೆಯರು ವೇಟಿಂಗ್
ದಕ್ಷಿಣದ ಕಾಶಿ ಎಂದೆ ಪ್ರಸಿದ್ದಿ ಪಡೆದಿರುವ ಮೈಲಾರಕ್ಕೆ ಐತವಾರ ಅಮಾವಾಸ್ಯೆ ಭಕ್ತಸಾಗರವೇ ನೆರೆದಿತ್ತು. ಇದಕ್ಕೆ ಶಕ್ತಿ ಯೋಜನೆ ಕೂಡ ಕಾರಣ ಆಗಿತ್ತು. ದೇವಸ್ಥಾನವೂ ಮುಖ್ಯ ರಸ್ತೆಯಿಂದ 2 ಕಿ.ಮೀ ದೂರ ನಡೆದುಕೊಂಡು ಬಂದು ಹರಕೆ ತೀರಿಸಿ ಸಂತೃಪ್ತರಾದ್ರು.

ಕಲಬುರಗಿ ಧಾರ್ಮಿಕ ಸ್ಥಳಗಳ ಬಸ್​ಗಳಲ್ಲಿ ಫುಲ್​ ರಶ್​!
ಮಣ್ಣೇತ್ತಿನ ಅಮಾವಾಸ್ಯೆ ಪ್ರಯುಕ್ತ ಅಫ್ಜಲಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ದೇವರ ದರ್ಶನ ಪಡೆದು ವಾಪಸ್ ತೆರಳಲು ಬಸ್​ಗೆ ಪ್ರಯಾಣಿಕರು ಮುಗಿಬಿದ್ರು. ಸೀಟು ಹಿಡಿಯಲು ನೂಕು-ನುಗ್ಗಲು ಉಂಟಾಗಿತ್ತು. ಇತ್ತ, ಬಸ್ ಮೇಲೆ ಮುಗಿಬಿದ್ದ ಮಹಿಳಾ ಪ್ರಯಾಣಿಕರು, ಕಿಟಕಿ, ಬಾಗಿಲು, ಚಾಲಕರ ಬಾಗಿಲಿನಿಂದ ಬಸ್ ಒಳಗೆ ನೂಕಿ ಸೀಟ್​​ ಹಿಡಿದು ಸೇಫ್​​ ಆದ್ರು.

ಫ್ರೀ ಬಸ್‌ನಲ್ಲಿ ಧಾರ್ಮಿಕ ಕ್ಷೇತ್ರಕ್ಕೆ ಬಂದ ಮಹಿಳೆಯರಿಗೆ ಶಾಕ್!
ಉಚಿತ ಪ್ರಯಾಣವೆಂದು ವೀಕೆಂಡ್ ಕಳೆಯಲು ಬಂದಿದ್ದ ಮಹಿಳೆಯರು ಬಸ್ಸಿಲ್ಲದೆ ಪರದಾಟ ನಡೆಸಿರುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ. ವೀಕೆಂಡ್ ಹಿನ್ನೆಲೆ ಜಿಲ್ಲೆಯ ಧಾರ್ಮಿಕ ಸ್ಥಳಗಳಿಗೆ ಹಾಗೂ ಪ್ರವಾಸಿ ತಾಣಗಳಿಗೆ ಬಂದಿದ್ದವರು, ರಾತ್ರಿಗೆ ವಾಪಸ್ಸು ಊರಿಗೆ ಮರಳಲು ಬಸ್ಸಿಲ್ಲದೆ ಸಂಕಷ್ಟದಿಂದ ಪರದಾಡಿದ್ರು.

ಚಾಮರಾಜನಗರದಲ್ಲಿ ಕಿಟಕಿಯಿಂದ ಬಸ್ ಹತ್ತಿದ ಮಹಿಳೆಯರು
ಬಸ್​​ನ ಡೋರ್​​ಗಳು ಜನಜಂಗುಳಿಯಿಂದ ತುಂಬಿದ್ದಕ್ಕೆ ಮಹಿಳೆಯರು ಪರ್ಯಾಯ ಪ್ಲಾನ್​​ ಮಾಡಿದ್ರು. ಸೀಟ್​​ಗಾಗಿ ಕಿಟಕಿಯಿಂದ ಒಳಗೆ​​ ಹತ್ತಿದ್ದಾರೆ. ಚಾಮರಾಜನಗರದ ಕೊಳ್ಳೇಗಾಲದ್ದು ಎಂದು ಹೇಳಲಾಗ್ತಿರುವ ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಟ್ರಿಪ್​ ಅಂತ ಹೋದವರು ದೇವರುಗಳ ದರ್ಶನ ಮಾಡಿ. ವಾಪಸ್ ಮನೆಗೆ ಬರಲು ಬಸ್​ ಸಿಗದೆ, ಕಿಟಕಿಯಿಂದ ಬಸ್​ ಹತ್ತೋದು, ಗಲಾಟೆಗಳಾಗೋದು.. ನೂಕು ನುಗ್ಗಲು ಆಗೋದು ಸಾಮಾನ್ಯವಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್​ನಲ್ಲಿ ಸೀಟ್​ಗಾಗಿ​ ನೂಕುನುಗ್ಗಲು.. ಮಹಿಳೆಯರು ಅನ್ಕೊಂಡಿದ್ದೊಂದು, ಆಗಿರೋದು ಇನ್ನೊಂದು

https://newsfirstlive.com/wp-content/uploads/2023/06/FREE_BUS_1-1.jpg

Load More