newsfirstkannada.com

ಫ್ರೀ ಬಸ್​​ ಎಫೆಕ್ಟ್​​​.. ಧಾರ್ಮಿಕ ಕ್ಷೇತ್ರಗಳಿಗೆ ಹೋಗುತ್ತಿದ್ದ ಮಹಿಳೆಯರಿಗೆ ಸರ್ಕಾರದಿಂದ ಬಿಗ್​ ಶಾಕ್​​!

Share :

22-06-2023

    ಫ್ರೀ ಬಸ್​ನಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಮಹಿಳೆಯರಿಗೆ ಶಾಕ್​​

    ಒಂದು ಬಸ್​ನಲ್ಲಿ ಇಷ್ಟೇ ಮಂದಿ ಹೋಗಬೇಕು ಎಂದು ಹೊಸ ಕಂಡೀಷನ್​​

    ಪ್ರಯಾಣಿಕರ ಹಿತದೃಷ್ಟಿಯಿಂದ ಕಾಂಗ್ರೆಸ್​ ಸರ್ಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​​ ಸರ್ಕಾರವೂ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಫ್ರೀ ಬಸ್​ ಪ್ರಯಾಣ ವ್ಯವಸ್ಥೆ ಕಲ್ಪಿಸಿ 10 ದಿನಗಳು ಕಳೆದಿವೆ. ಕೇವಲ ಹತ್ತು ದಿನಗಳಲ್ಲಿ ಸುಮಾರು 4 ಕೋಟಿ 82 ಲಕ್ಷಕ್ಕೂ ಅಧಿಕ ಮಹಿಳೆಯರು ಫ್ರೀ ಬಸ್​​ನಲ್ಲಿ ಟ್ರಾವೆಲ್​ ಮಾಡಿದ್ದಾರೆ. ಇದರ ಒಟ್ಟು ಪ್ರಯಾಣದ ಮೊತ್ತವೂ 113 ಕೋಟಿ ದಾಟಿದೆ. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ಹೆಣ್ಣುಮಕ್ಕಳಂತೂ ಕಿಲೋ ಮೀಟರ್​ಗಟ್ಟಲೇ ಸೀಟ್​ ಇಲ್ಲದೆ ಹೋದರು ಬಸ್​ನಲ್ಲಿ ನಿಂತುಕೊಂಡೇ ಪ್ರಯಾಣ ಮಾಡಿದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಿರುವಾಗ ಸರ್ಕಾರ ಮಹತ್ವದ ನಿರ್ಧಾರವೊಂದು ತೆಗೆದುಕೊಂಡಿದೆ. ಶಕ್ತಿ ಯೋಜನೆಗೂ ಷರತ್ತುಗಳು ಹಾಕಲು ಮುಂದಾಗಿದೆ. ಈ ಮೂಲಕ ಫ್ರೀ ಬಸ್​ನಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣಿಸೋ ಮಹಿಳೆಯರಿಗೆ ಶಾಕ್​​​ ಕೊಟ್ಟಿದೆ.

ಹೌದು, ಯಾವುದೇ ಕಾರಣಕ್ಕೂ ಫ್ರೀ ಬಸ್​ನಲ್ಲಿ ಸೀಟ್​​ ಕ್ಯಾಪಾಸಿಟಿ ಮೀರಿ ಹೆಚ್ಚು ಮಂದಿ ಹತ್ತಬಾರದು ಎಂದು ಆದೇಶ ಹೊರಡಿಸಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದೆ. ಇನ್ಮುಂದೆ ಸೀಟ್​ ಇದ್ದಷ್ಟು ಜನರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು. ಮಹಿಳೆಯರು ಫ್ರೀ ಬಸ್​ನಲ್ಲಿ ಕಿಲೋ ಮೀಟರ್​ಗಟ್ಟಲೇ ನಿಂತುಕೊಂಡೇ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ ಮಾಡುತ್ತಿದ್ದರು. ಪ್ರಯಾಣಿಕರ ಹಿತ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ವರದಿಯಾಗಿದೆ.

ಈ ಸಂಬಂಧ ಮಾತಾಡಿದ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಎಂಟಿಸಿ ಬಸ್​ನಲ್ಲಿ 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪ್ರಯಾಣ ಮಾಡುತ್ತಾರೆ. ಇದುವರೆಗೂ ಇಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಆದರೆ KSRTC ಬಸ್​ನಲ್ಲಿ ಮಾತ್ರ ಈ ಸಮಸ್ಯೆ ಕಂಡು ಬಂದಿದೆ. ಎಲ್ಲರಿಗೂ ಒಂದೇ ದಿನ ಓಡಾಡಬೇಕೆಂಬ ಆಸೆ. ನಮ್ಮ ಸರ್ಕಾರ ಈ ಯೋಜನೆಯನ್ನು ಐದು ವರ್ಷ ಮುಂದುವರಿಸಲಿದೆ. ನಿಧಾನವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಪ್ಲಾನ್​ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಬಸ್​ಗಳಲ್ಲಿ ಪುರುಷರಿಗೆ ಶೇ. 50ರಷ್ಟು ಸೀಟ್​​​ ರಿಸರ್ವ್​ ಮಾಡುವುದಾಗಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೀ ಬಸ್​​ ಎಫೆಕ್ಟ್​​​.. ಧಾರ್ಮಿಕ ಕ್ಷೇತ್ರಗಳಿಗೆ ಹೋಗುತ್ತಿದ್ದ ಮಹಿಳೆಯರಿಗೆ ಸರ್ಕಾರದಿಂದ ಬಿಗ್​ ಶಾಕ್​​!

https://newsfirstlive.com/wp-content/uploads/2023/06/KSRTC-1.jpg

Load More